- Kannada News Photo gallery Actor Vishal meets Shivarajkumar to discuss about Puneeth Rajkumar's Shakti Dhama
Photos: ಶಿವಣ್ಣನ ಜತೆ ವಿಶಾಲ್ ಮಾತುಕತೆ; ಪುನೀತ್ ಫೋಟೋಗೆ ಹಾರ ಹಾಕಿ ನಮಿಸಿದ ತಮಿಳು ನಟ
1800 ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ನಟ ವಿಶಾಲ್ ಮಾತು ನೀಡಿದ್ದರು. ಆ ಮಾತನ್ನು ನಡೆಸಿಕೊಡುವ ಸುಲುವಾಗಿ ಅವರು ಪುನೀತ್ ರಾಜ್ಕುಮಾರ್ ಕುಟುಂಬದ ಸದಸ್ಯರ ಜತೆ ಚರ್ಚೆ ಮಾಡಿದ್ದಾರೆ.
Updated on: Nov 17, 2021 | 2:41 PM

Actor Vishal meets Shivarajkumar to discuss about Puneeth Rajkumar's Shakti Dhama

Actor Vishal meets Shivarajkumar to discuss about Puneeth Rajkumar's Shakti Dhama

ಮೈಸೂರಿನ ಶಕ್ತಿಧಾಮವನ್ನು ನೋಡಿಕೊಳ್ಳಲು ವಿಶಾಲ್ ಮುಂದೆಬಂದಿದ್ದಾರೆ. ಆ ಬಗ್ಗೆ ಡಾ. ರಾಜ್ ಕುಟುಂಬದ ಸದಸ್ಯರ ಜೊತೆ ವಿಶಾಲ್ ಮಾತುಕತೆ ನಡೆಸಿದ್ದಾರೆ.

ಪುನೀತ್ ಅವರ ಕೆಲವು ಸಮಾಜಮುಖಿ ಕೆಲಸಗಳನ್ನು ಮುಂದುವರಿಸಲು ತಮಗೆ ಅನುಮತಿ ನೀಡಿ ಎಂದು ವಿಶಾಲ್ ಅವರು ಅಣ್ಣಾವ್ರ ಕುಟುಂಬದ ಸದಸ್ಯರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಅನುಮತಿಗಾಗಿ ಅವರು ಕಾಯುತ್ತಿದ್ದಾರೆ.

ಪುನೀತ್ ರಾಜ್ಕುಮಾರ್ ಮತ್ತು ವಿಶಾಲ್ ನಡುವೆ ಹಲವು ವರ್ಷಗಳ ಒಡನಾಟ ಇತ್ತು. ಸಹೋದರನಂತೆ ಇದ್ದ ಗೆಳೆಯನನ್ನು ಕಳೆದುಕೊಂಡು ವಿಶಾಲ್ ಕಣ್ಣೀರು ಸರಿಸುತ್ತಿದ್ದಾರೆ. ಅಪ್ಪು ಕುಟುಂಬಕ್ಕೆ ಅವರು ಧೈರ್ಯ ತುಂಬುತ್ತಿದ್ದಾರೆ.

ಪುನೀತ್ ಅವರ ಭಾವಚಿತ್ರಕ್ಕೆ ವಿಶಾಲ್ ಹಾರ ಹಾಕಿ ನಮಿಸಿದ್ದಾರೆ. ಶಕ್ತಿಧಾಮದ ಮುಂದಿನ ಕಾರ್ಯಗಳ ಕುರಿತಂತೆ ಅವರು ಅಶ್ವಿನಿ ಪುನೀತ್ ರಾಜ್ಕುಮಾರ್ ಜತೆಗೆ ಮಾತುಕತೆ ನಡೆಸಿದ್ದಾರೆ.



















