Upendra: ‘ಈ ಕೆಲಸ ಮಾಡಿ, ನಮ್ಮ ಮನೆಗೆ ಬನ್ನಿ’; ಫ್ಯಾನ್ಸ್​ಗೆ ಆಹ್ವಾನ ನೀಡಿದ ಉಪೇಂದ್ರ: ಏನಿದು ಟಾಸ್ಕ್​?

Upendra Birthday: ಬರ್ತ್​ಡೇ ಪ್ರಯುಕ್ತ ಒಂದಷ್ಟು ಉತ್ತಮ ವಿಚಾರಗಳನ್ನು ತರುವಂತೆ ಉಪೇಂದ್ರ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ಅವರು ವಿಶೇಷ ಆಫರ್​ ನೀಡಿದ್ದಾರೆ.

Upendra: ‘ಈ ಕೆಲಸ ಮಾಡಿ, ನಮ್ಮ ಮನೆಗೆ ಬನ್ನಿ’; ಫ್ಯಾನ್ಸ್​ಗೆ ಆಹ್ವಾನ ನೀಡಿದ ಉಪೇಂದ್ರ: ಏನಿದು ಟಾಸ್ಕ್​?
ಉಪೇಂದ್ರ
Follow us
TV9 Web
| Updated By: ಮದನ್​ ಕುಮಾರ್​

Updated on:Sep 03, 2022 | 3:25 PM

ನಟ ಉಪೇಂದ್ರ (Upendra) ಅವರು ಏನೇ ಮಾಡಿದ್ರೂ ಡಿಫರೆಂಟ್​ ಆಗಿ ಮಾಡ್ತಾರೆ. ಅದಕ್ಕೆ ಈಗಾಗಲೇ ಸಾಕಷ್ಟು ಉದಾಹರಣೆ ಸಿಕ್ಕಿದೆ. ನಟನೆಯಾದರೂ ಸೈ, ನಿರ್ದೇಶನವಾದರೂ ಸೈ.. ಅವರ ಪ್ರಯತ್ನ ಡಿಫರೆಂಟ್​ ಆಗಿಯೇ ಇರುತ್ತದೆ. ಸಿನಿಮಾದಲ್ಲಿ ಇಂಥ ಹಲವು ಪ್ರಯೋಗಗಳನ್ನು ಮಾಡಿದ ಅವರು ಈಗ ರಾಜಕೀಯದಲ್ಲೂ ಜನಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಉಪೇಂದ್ರ ಹುಟ್ಟುಹಬ್ಬ (Upendra Birthday) (ಸೆ.18) ಆಚರಿಸಿಕೊಳ್ಳಲಿದ್ದಾರೆ. ಅಂದು ತಮ್ಮ ಮನೆಗೆ ಬರಲು ಎಲ್ಲರಿಗೂ ಅವರು ಆಹ್ವಾನ ನೀಡಿದ್ದಾರೆ. ಆಹ್ವಾನದ ಜೊತೆಗೆ ಒಂದು ಟಾಸ್ಕ್​ ಕೂಡ ನೀಡಿದ್ದಾರೆ. ಕೇವಲ 18 ಪದದೊಳಗೆ ಒಂದು ಉತ್ತಮ ವಿಚಾರವನ್ನು ಬರೆದುಕೊಂಡು ಬನ್ನಿ ಎಂದು ‘ರಿಯಲ್​ ಸ್ಟಾರ್​’ (Real Star Upendra) ಹೇಳಿದ್ದಾರೆ. ಈ ಬಗ್ಗೆ ಉಪ್ಪಿ ಅಭಿಮಾನಿಗಳು ಈಗ ಗಮನ ಹರಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಉಪೇಂದ್ರ ಅವರು ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ತಮ್ಮ ಈ ವರ್ಷದ ಬರ್ತ್​ಡೇ ಬಗ್ಗೆ ಟ್ವಿಟರ್​ನಲ್ಲಿ ಅವರು ಘೋಷಣೆ ಮಾಡಿದ್ದಾರೆ. ನೆಚ್ಚಿನ ನಟರ ಹುಟ್ಟುಹಬ್ಬದ ದಿನ ಅಭಿಮಾನಿಗಳು ಹಾರ, ಹೂಗುಚ್ಛ, ಕೇಕ್​, ಗಿಫ್ಟ್​ ತರುವುದು ಸಹಜ. ಆದರೆ ಅಭಿಮಾನಿಗಳಿಂದ ಉಪೇಂದ್ರ ಅವರು ಈ ರೀತಿಯ ಯಾವುದೇ ವಸ್ತುಗಳನ್ನು ನಿರೀಕ್ಷಿಸುತ್ತಿಲ್ಲ. ಅವರು ಜನರಿಂದ ಬಯಸಿರುವುದು ವಿಚಾರವಂತಿಕೆಯನ್ನು ಎಂಬುದು ವಿಶೇಷ.

ಇದನ್ನೂ ಓದಿ
Image
‘ಈ ಹಬ್ಬಕ್ಕೆ ಉಪ್ಪಿ ಇರಲೇಬೇಕು, ಅವ್ರು ಪೂಜೆ ಮಾಡಿದ್ರೆ ಮಾತ್ರ ನಮಗೆ ಸಂತೋಷ’: ಪ್ರಿಯಾಂಕಾ ಉಪೇಂದ್ರ
Image
ಉಪೇಂದ್ರ ನಿರ್ದೇಶನದ ‘ಯುಐ’ ಚಿತ್ರದ ಸೆಟ್​​ಗೆ ಶಿವರಾಜ್​ಕುಮಾರ್​-ಗೀತಾ ಭೇಟಿ
Image
Upendra: ‘ಯುಐ’ ಚಿತ್ರಕ್ಕೆ ಶೂಟಿಂಗ್​ ಶುರು; ಸೆಟ್​ನಲ್ಲಿ ಡೈರೆಕ್ಟರ್​ ಕ್ಯಾಪ್​ ಧರಿಸಿ ನಿಂತ ಉಪೇಂದ್ರ
Image
Kabza Movie: 7 ಭಾಷೆಗಳಲ್ಲಿ ಧೂಳೆಬ್ಬಿಸಲಿದೆ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ; ಭರದಿಂದ ಸಾಗುತ್ತಿದೆ ಡಬ್ಬಿಂಗ್​ ಕೆಲಸ

‘ವಿಚಾರವಂತರಾಗೋಣಾ? ಇದೇ ಸೆಪ್ಟೆಂಬರ್ 18 ಅಭಿಮಾನಿಗಳ ದಿನದಂದು ನಿಮ್ಮನ್ನ ನಮ್ಮ ಮನೆಯಲ್ಲಿ ಭೇಟಿಯಾಗುತ್ತೇನೆ. ಆ ದಿನ ಕೇಕ್, ಹೂಗುಚ್ಚ, ಗಿಫ್ಟ್ ಎಲ್ಲಾ ಬಿಟ್ಟು.. ಒಂದು ಹಾಳೆಯಲ್ಲಿ 18 ಪದಗಳನ್ನು ಮೀರದಂತೆ ಏನಾದರೂ ಒಂದು ಉತ್ತಮ ವಿಚಾರವನ್ನು ಬರೆದು ತರುತ್ತೀರಾ? ಅತ್ಯುತ್ತಮವಾದ 18 ಬರವಣಿಗೆಗೆ ಸೂಕ್ತ ಬಹುಮಾನವಿರುತ್ತದೆ’ ಎಂದು ಉಪೇಂದ್ರ ಪೋಸ್ಟ್​ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.

ಈ ಟ್ವೀಟ್​ ನೋಡಿ ಅಭಿಮಾನಿಗಳು ಈಗಾಗಲೇ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. ಕೆಲವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ನಿಮ್ಮ ಮನೆಗೆ ಬರೋದಕ್ಕೆ ತುಂಬಾ ಜನರಿಗೆ ಕಷ್ಟ ಆಗುತ್ತೆ. ಯಾಕಂದ್ರೆ ಅವರು ತುಂಬಾ ದೂರದಲ್ಲಿರುತ್ತಾರೆ. ತಮ್ಮ 18 ಪದಗಳ ವಿಚಾರಗಳನ್ನು ಮೇಲ್ ಮುಖಾಂತರ ಕಳುಹಿಸಿ ಕೊಡಲು ವ್ಯವಸ್ಥೆ ಮಾಡಿ’ ಎಂದು ಅಭಿಮಾನಿಯೊಬ್ಬರು ಬೇಡಿಕೆ ಇಟ್ಟಿದ್ದಾರೆ.

ಉಪೇಂದ್ರ ಅವರು ಸದ್ಯ ‘ಕಜ್ಬ’ ಮತ್ತು ‘ಯುಐ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹುಟ್ಟುಹಬ್ಬದ ದಿನ ಈ ಚಿತ್ರತಂಡಗಳಿಂದ ವಿಶೇಷ ಅಪ್​ಡೇಟ್​ ಸಿಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:07 pm, Sat, 3 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ