Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಈ ಹಬ್ಬಕ್ಕೆ ಉಪ್ಪಿ ಇರಲೇಬೇಕು, ಅವ್ರು ಪೂಜೆ ಮಾಡಿದ್ರೆ ಮಾತ್ರ ನಮಗೆ ಸಂತೋಷ’: ಪ್ರಿಯಾಂಕಾ ಉಪೇಂದ್ರ

‘ಈ ಹಬ್ಬಕ್ಕೆ ಉಪ್ಪಿ ಇರಲೇಬೇಕು, ಅವ್ರು ಪೂಜೆ ಮಾಡಿದ್ರೆ ಮಾತ್ರ ನಮಗೆ ಸಂತೋಷ’: ಪ್ರಿಯಾಂಕಾ ಉಪೇಂದ್ರ

TV9 Web
| Updated By: ಮದನ್​ ಕುಮಾರ್​

Updated on: Aug 31, 2022 | 3:53 PM

Priyanka Upendra | Ganesh Chaturthi 2022: ಕಳೆದ 2 ವರ್ಷ ಕೊವಿಡ್​ನಿಂದ ಅದ್ದೂರಿಯಾಗಿ ಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಎಲ್ಲರನ್ನೂ ಆಹ್ವಾನಿಸಿ ಹಬ್ಬ ಮಾಡಿರುವುದು ಪ್ರಿಯಾಂಕಾ ಉಪೇಂದ್ರ ಅವರಿಗೆ ಖುಷಿ ನೀಡಿದೆ.

ಉಪೇಂದ್ರ (Upendra) ಮತ್ತು ಪ್ರಿಯಾಂಕಾ ದಂಪತಿಯ ಮನೆಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಬೆಂಗಳೂರಿನ ಕತ್ರಿಗುಪ್ಪೆ ನಿವಾಸದಲ್ಲಿ ಅವರು ಗಣೇಶ ಚತುರ್ಥಿ (Ganesh Chaturthi 2022) ಆಚರಿಸಿದ್ದಾರೆ. ಪೂಜೆ ನೆರವೇರಿಸಿದ ಬಳಿಕ ಪ್ರಿಯಾಂಕಾ ಉಪೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ಈ ಹಬ್ಬಕ್ಕೆ ಉಪೇಂದ್ರ ಇರಲೇಬೇಕು. ಅವರು ಪೂಜೆ ಮಾಡಿದರೆ ಮಾತ್ರ ನಮಗೆ ಸಂತೋಷ ಆಗೋದು. ಯಾಕೆಂದರೆ ಚಿಕ್ಕ ವಯಸ್ಸಿನಲ್ಲಿ ಅವರೇ ಮನೆಯಲ್ಲಿ ಗಣೇಶನನ್ನು ತಂದು ಕೂರಿಸಿದ್ದು ಅಂತ ಅಮ್ಮ ಹೇಳಿದ್ರು’ ಎಂದು ಪ್ರಿಯಾಂಕಾ (Priyanka Upendra) ಹೇಳಿದ್ದಾರೆ. ಕಳೆದ ಎರಡು ವರ್ಷ ಕೊವಿಡ್​ನಿಂದ ಅದ್ದೂರಿಯಾಗಿ ಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಎಲ್ಲರನ್ನೂ ಆಹ್ವಾನಿಸಿ ಹಬ್ಬ ಮಾಡಿರುವುದು ಅವರಿಗೆ ಖುಷಿ ನೀಡಿದೆ.