Ganesh Chaturthi 2022: ನರಾಚಿ ಸೆಟ್ನಲ್ಲಿ ‘ಕೆಜಿಎಫ್’ ಸ್ಟೈಲ್ ಗಣಪ; ದರ್ಶನಕ್ಕೆ ಮುಗಿಬಿದ್ದ ಭಕ್ತರ ದಂಡು
KGF Ganapa: ‘ಕೆಜಿಎಫ್ ಗಣಪ’ನ ದರ್ಶನಕ್ಕೆ ಜನರು ಮುಗಿಬಿದ್ದಿದ್ದಾರೆ. ಗಣಿ ಪ್ರದೇಶ, ವೀರಗಲ್ಲು, ನರಾಚಿಯ ಹೆಬ್ಬಾಗಿಲು, ಸುರಂಗ ಮುಂತಾದವು ಈ ಸೆಟ್ನಲ್ಲಿ ಗಮನ ಸೆಳೆಯುತ್ತಿವೆ.
ಕನ್ನಡದ ‘ಕೆಜಿಎಫ್’ ಸಿನಿಮಾವನ್ನು ನೋಡಿ ಎಲ್ಲ ಭಾಷೆಯ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇಂದಿಗೂ ಕೂಡ ಆ ಸಿನಿಮಾದ ಕ್ರೇಜ್ ಕಡಿಮೆ ಆಗಿಲ್ಲ. ತಮಿಳುನಾಡಿನ ಕೃಷ್ಣಗಿರಿ (Krishnagiri) ಜಿಲ್ಲೆಯ ಡೆಂಕಣಿಕೊಟ್ಟ ಊರಿನಲ್ಲಿ ಅದ್ದೂರಿಯಾಗಿ ಗಣೇಶೋತ್ಸವ (Ganesh Chaturthi 2022) ಆಚರಿಸಲಾಗಿದೆ. ಅಚ್ಚರಿ ಎಂದರೆ, ‘ಕೆಜಿಎಫ್ 2’ (KGF: Chapter 2) ಸಿನಿಮಾದ ನರಾಚಿ ರೀತಿಯಲ್ಲಿ ಸೆಟ್ ಹಾಕಿ, ಅದರಲ್ಲಿ ಗಣೇಶನನ್ನು ಕೂರಿಸಿ ಸಂಭ್ರಮಿಸಲಾಗಿದೆ. ಅಂದಾಜು 20 ಲಕ್ಷ ರೂಪಾಯಿ ಕರ್ಚು ಮಾಡಿ ಈ ಸೆಟ್ ಹಾಕಿಸಲಾಗಿದೆ. ‘ಕೆಜಿಎಫ್ ಗಣಪ’ನನ್ನು ನೋಡಲು ಸುತ್ತಮುತ್ತಲಿನ ಊರಿನ ಜನರು ಮುಗಿಬಿದ್ದಿದ್ದಾರೆ. ಗಣಿ ಪ್ರದೇಶ, ವೀರಗಲ್ಲು, ನರಾಚಿಯ ಹೆಬ್ಬಾಗಿಲು, ಸುರಂಗ ಮುಂತಾದವು ಈ ಸೆಟ್ನಲ್ಲಿ ಗಮನ ಸೆಳೆಯುತ್ತಿವೆ. ಎಲ್ಲವನ್ನೂ ಕಣ್ತುಂಬಿಕೊಂಡು ಜನರು ಖುಷಿಪಟ್ಟಿದ್ದಾರೆ.
Published on: Sep 01, 2022 09:03 AM
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

