KGF 2: ಜೀ ಕನ್ನಡದಲ್ಲಿ ಬರ್ತಿದೆ ‘ಕೆಜಿಎಫ್: ಚಾಪ್ಟರ್ 2’; ಆಗಸ್ಟ್ 20ಕ್ಕೆ ಯಶ್ ಅಭಿಮಾನಿಗಳಿಗೆ ಹಬ್ಬ
KGF Chapter 2 Television Premiere: ಚಿತ್ರಮಂದಿರದಲ್ಲಿ ಮತ್ತು ಒಟಿಟಿಯಲ್ಲಿ ‘ಕೆಜಿಎಫ್ 2’ ಚಿತ್ರವನ್ನು ಮಿಸ್ ಮಾಡಿಕೊಂಡವರು ಈಗ ಟಿವಿಯಲ್ಲಿ ನೋಡಲು ಕಾಲ ಕೂಡಿಬಂದಿದೆ. ಆಗಸ್ಟ್ 20ರ ಶನಿವಾರ ಸಂಜೆ 7 ಗಂಟೆಗೆ ಜೀ ಕನ್ನಡದಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ.
ನಟ ‘ರಾಕಿಂಗ್ ಸ್ಟಾರ್’ ಯಶ್ (Yash) ಅವರ ವೃತ್ತಿಬದುಕಿನ ಅತಿ ದೊಡ್ಡ ಸಿನಿಮಾವಾಗಿ ಮೂಡಿಬಂದ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಚಿತ್ರದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಕನ್ನಡ ಚಿತ್ರರಂಗದ ಕಡೆಗೆ ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದ ಚಿತ್ರವಿದು. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಅಬ್ಬರಿಸಿದ ಪರಿಗೆ ಬಾಲಿವುಡ್ ಮಂದಿ ಕೂಡ ದಂಗಾದರು. ನಂತರ ಒಟಿಟಿಯಲ್ಲಿ ಪ್ರಸಾರವಾಗಿಯೂ ಈ ಚಿತ್ರ ಸದ್ದು ಮಾಡಿತು. ಈಗ ಇದೇ ಮೊದಲ ಬಾರಿಗೆ ಟಿವಿಯಲ್ಲಿ ಬಿತ್ತರವಾಗಲು ಸಮಯ ನಿಗದಿ ಆಗಿದೆ. ಹೌದು, ‘ಜೀ ಕನ್ನಡ’ (Zee Kannada) ವಾಹಿನಿಯಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಟಿಲಿವಿಷನ್ ಪ್ರೀಮಿಯರ್ ಮಾಡಲಾಗುತ್ತಿದೆ. ಆಗಸ್ಟ್ 20ರಂದು ಈ ಸಿನಿಮಾ ಟಿವಿಯಲ್ಲಿ ಪ್ರಸಾರ ಕಾಣಲಿದ್ದು, ‘ರಾಕಿಂಗ್ ಸ್ಟಾರ್’ ಯಶ್ ಅಭಿಮಾನಿಗಳಿಗೆ ಅಂದು ಮನರಂಜನೆಯ ಹಬ್ಬ ಆಗಲಿದೆ.
ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಕೆಜಿಎಫ್: ಚಾಪ್ಟರ್ 2’ ಚಿತ್ರಕ್ಕೆ ‘ಹೊಂಬಾಳೆ ಫಿಲ್ಮ್ಸ್’ ಮೂಲಕ ವಿಜಯ್ ಕಿರಗಂದೂರು ಬಂಡವಾಳ ಹೂಡಿದ್ದಾರೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 1250 ಕೋಟಿ ರೂಪಾಯಿಗೂ ಹೆಚ್ಚು ಎಂಬುದು ಗಮನಾರ್ಹ. ‘ಕೆಜಿಎಫ್ 2’ ಚಿತ್ರದಿಂದ ಹಲವರ ಬದುಕು ಬದಲಾಯಿತು. ಯಶ್ ಅವರ ಮಾರುಕಟ್ಟೆ ಹಿರಿದಾಯಿತು.
ಈ ಸಿನಿಮಾದಲ್ಲಿ ಬಾಲಿವುಡ್ ಕಲಾವಿದರಾದ ರವೀನಾ ಟಂಡನ್, ಸಂಜಯ್ ದತ್ ಅವರು ಮಹತ್ವದ ಪಾತ್ರ ಮಾಡಿದ್ದಾರೆ. ಇನ್ನುಳಿದಂತೆ ಪ್ರಕಾಶ್ ರೈ, ವಸಿಷ್ಠ ಸಿಂಹ, ದಿನೇಶ್ ಮಂಗಳೂರು, ಅಚ್ಯುತ್ ಕುಮಾರ್, ರಾವ್ ರಮೇಶ್, ಈಶ್ವರಿ ರಾವ್, ಅರ್ಚನಾ ಜೋಯಿಸ್ ಮುಂತಾದವರು ನಟಿಸಿದ್ದಾರೆ. ಯಶ್ಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದಾರೆ.
#WorldTelevisionPremiere ಸ್ವಾರ್ಥಿ, ವಿಲನ್ನು, ಕ್ರಿಮಿನಲ್.. ಆದ್ರೆ ಅಮ್ಮನ ಕನಸಿನ ಗುರಿ ಮುಟ್ಟೋದೇ ಈ ಹೀರೋ ಟಾರ್ಗೆಟ್! ಕೆಜಿಎಫ್ ಚಾಪ್ಟರ್-2 | ಆಗಸ್ಟ್ 20ರಂದು ಸಂಜೆ 7ಕ್ಕೆ.#KGFChapter2 #KGF2 #WTP #August20th #Yash #ZeeKannada #BayasidaBaagilutegeyona @TheNameIsYash @prashanth_neel @hombalefilms pic.twitter.com/wOFkz49zyn
— Zee Kannada (@ZeeKannada) August 15, 2022
ಚಿತ್ರಮಂದಿರದಲ್ಲಿ ಮತ್ತು ಒಟಿಟಿಯಲ್ಲಿ ‘ಕೆಜಿಎಫ್ 2’ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಟಿವಿಯಲ್ಲಿ ನೋಡಲು ಕಾಲ ಕೂಡಿಬಂದಿದೆ. ಆಗಸ್ಟ್ 20ರ ಶನಿವಾರ ಸಂಜೆ 7 ಗಂಟೆಗೆ ಜೀ ಕನ್ನಡದಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ. ವೀಕೆಂಡ್ನಲ್ಲಿ ಮನೆ ಮಂದಿಯೆಲ್ಲ ಒಟ್ಟಾಗಿ ಕುಳಿತು ಎಂಜಾಯ್ ಮಾಡಬಹುದು. ಈಗಾಗಲೇ ಬಿತ್ತರ ಆಗುತ್ತಿರುವ ವಿಶೇಷ ಪ್ರೋಮೋಗಳು ಗಮನ ಸೆಳೆಯುತ್ತಿವೆ. ರವಿ ಬಸ್ರೂರು ಸಂಗೀತ ನಿರ್ದೇಶನ, ಭುವನ್ ಗೌಡ ಅವರ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಮುಂತಾದವು ಈ ಚಿತ್ರದ ಹೈಲೈಟ್.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.