‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಸಾನಿಯಾ; ತಣಿಯಲೇ ಇಲ್ಲ ಅಮ್ಮಮ್ಮನ ಕೋಪ

‘ಕನ್ನಡತಿ’ ಧಾರಾವಾಹಿಗೆ ಸಾನಿಯಾ ವಿಲನ್. ಅವಳು ಎಂಡಿ ಪಟ್ಟವನ್ನು ಅತ್ತು-ಕರೆದು ಪಡೆದುಕೊಂಡಿದ್ದಾಳೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಸ್ಥಾನದಿಂದ ಆಕೆಯನ್ನು ಇಳಿಸಬೇಕು ಎಂದು ರತ್ನಮಾಲಾ ಉದ್ದೇಶ.

‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಸಾನಿಯಾ; ತಣಿಯಲೇ ಇಲ್ಲ ಅಮ್ಮಮ್ಮನ ಕೋಪ
TV9kannada Web Team

| Edited By: Rajesh Duggumane

Aug 17, 2022 | 4:40 PM

‘ಕನ್ನಡತಿ’ ಧಾರಾವಾಹಿಗೆ (Kannadathi Serial) ಪ್ರಮುಖ ಟ್ವಿಸ್ಟ್ ಸಿಕ್ಕಿದೆ. ಈ ಧಾರಾವಾಹಿಯ ವಿಲನ್ ಸಾನಿಯಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ರತ್ನಮಾಲಾ ಆಸ್ಪತ್ರೆಗೆ ತೆರಳುವಾಗ ಆಕೆಗೆ ಕೊಲೆ ಬೆದರಿಕೆ ಒಡ್ಡಿದ್ದಳು ಸಾನಿಯಾ. ಅಷ್ಟೇ ಅಲ್ಲ, ಏಕವಚನದಲ್ಲಿ ಬೈದಿದ್ದಳು. ಇದನ್ನು ರತ್ನಮಾಲಾ ವಿಡಿಯೋ ಮಾಡಿ ಇಟ್ಟುಕೊಂಡಿದ್ದಾಳೆ. ಇದೇ ವಿಡಿಯೋ ಇಟ್ಟುಕೊಂಡು ಸಾನಿಯಾಳಿಗೆ ಬುದ್ಧಿ ಕಲಿಸಬೇಕು ಎಂದು ರತ್ನಮಾಲಾ ಪ್ರಯತ್ನಿಸುತ್ತಿದ್ದಾಳೆ. ಈ ಕಾರಣಕ್ಕೆ ರತ್ನಮಾಲಾ ಕಾಲಿಗೆ ಬಿದ್ದು ಸಾನಿಯಾ ಕ್ಷಮೆ ಕೇಳಿದ್ದಾಳೆ.

‘ಕನ್ನಡತಿ’ ಧಾರಾವಾಹಿಗೆ ಸಾನಿಯಾ ವಿಲನ್. ಅವಳು ಎಂಡಿ ಪಟ್ಟವನ್ನು ಅತ್ತು-ಕರೆದು ಪಡೆದುಕೊಂಡಿದ್ದಾಳೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಸ್ಥಾನದಿಂದ ಆಕೆಯನ್ನು ಇಳಿಸಬೇಕು ಎಂದು ರತ್ನಮಾಲಾ ಉದ್ದೇಶ. ಸೂಕ್ತ ಸಮಯ ಬರಲಿ ಎಂದು ರತ್ನಮಾಲಾ ಕಾದಿದ್ದಳು. ಇದಕ್ಕೆ ಕೊನೆಗೂ ಸಮಯ ಕೂಡಿ ಬಂದಿದೆ. ಸಾನಿಯಾ ಬೆದರಿಕೆ ಒಡ್ಡಿದ ವಿಡಿಯೋ ಇಟ್ಟುಕೊಂಡು ಅವಳನ್ನು ಎಂಡಿ ಪಟ್ಟದಿಂದ ಇಳಿಸಲು ರತ್ನಮಾಲಾ ಪ್ರಯತ್ನಿಸುತ್ತಿದ್ದಾಳೆ.

ಈ ಬೆಳವಣಿಗೆ ಮಧ್ಯೆ, ರತ್ನಮಾಲಾಳ ಕಾಲನ್ನು ಹಿಡಿದು ಸಾನಿಯಾ ಕ್ಷಮೆ ಕೇಳಿದ್ದಾಳೆ. ನನ್ನಿಂದ ತಪ್ಪಾಗಿದೆ ಕ್ಷಮಿಸಿ ಎಂದು ಅಂಗಲಾಚಿದ್ದಾಳೆ. ‘ನನ್ನ ಬುದ್ಧಿಗೆ ಮಂಕು ಕವಿದಿತ್ತು. ಅದಕ್ಕಾಗಿ ಆ ರೀತಿ ಮಾಡಿದೆ. ಇನ್ನುಮುಂದೆ ಈ ರೀತಿ ಆಗಲ್ಲ’ ಎಂದು ಸಾನಿಯಾ ಅಂಗಲಾಚಿದ್ದಾಳೆ. ರತ್ನಮಾಲಾ ಇದನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ, ಅಲ್ಲಿಂದ ಎದ್ದು ಹೋಗಿದ್ದಾಳೆ. ಈ ಮೂಲಕ ಸಾನಿಯಾ ವಿರುದ್ಧ ಕೋಪವನ್ನು ಮುಂದುವರಿಸಿದ್ದಾಳೆ.

ರತ್ನಮಾಲಾಳ ಮೊಬೈಲ್ ತೆಗೆದುಕೊಂಡು ಅದರಿಂದ ಎಲ್ಲಾ ಡೇಟಾಗಳನ್ನು ನಾಶ ಮಾಡುವ ಉದ್ದೇಶವನ್ನು ಸಾನಿಯಾ ಹೊಂದಿದ್ದಾಳೆ. ಇದಕ್ಕಾಗಿ ಆಕೆ ಪ್ರಯತ್ನ ಮಾಡುತ್ತಿದ್ದಾಳೆ. ಇದರಲ್ಲಿ ಸಾನಿಯಾ ಯಶಸ್ವಿ ಆಗುತ್ತಾಳಾ ಎಂಬುದು ಸದ್ಯದ ಕುತೂಹಲ. ಇನ್ನು, ರತ್ನಮಾಲಾ ಜೀವ ಬೆದರಿಕೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಅದಕ್ಕೆ ಬೇಕಾದ ಅಗತ್ಯ ಸಾಕ್ಷ್ಯಗಳನ್ನು ಪೊಲೀಸರಿಗೆ ನೀಡುವ ಭರವಸೆಯನ್ನು ರತ್ನಮಾಲಾ ನೀಡಿದ್ದಾಳೆ. ಹಾಗಾದಲ್ಲಿ, ಸಾನಿಯಾಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಇದನ್ನೂ ಓದಿ: ಅಂತೂ ಇಂತು ‘ಕನ್ನಡತಿ’ ಧಾರಾವಾಹಿಗೆ ಅಮ್ಮಮ್ಮ ಬಂದ್ರು; ಕಥೆಗೆ ಸಿಗಲಿದೆ ದೊಡ್ಡ ಟ್ವಿಸ್ಟ್​?

ಇದನ್ನೂ ಓದಿ

‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆ ಆಗಿದೆ. ರತ್ನಮಾಲಾ ಬರೆದಿಟ್ಟ ವಿಲ್​ನ ಪ್ರಕಾರ ಎಲ್ಲ ಆಸ್ತಿ ಭುವಿ ಹೆಸರಿಗೆ ಸೇರಬೇಕು. ಈ ವಿಚಾರ ಯಾವಾಗ ರಿವೀಲ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada