ಅಂತೂ ಇಂತು ‘ಕನ್ನಡತಿ’ ಧಾರಾವಾಹಿಗೆ ಅಮ್ಮಮ್ಮ ಬಂದ್ರು; ಕಥೆಗೆ ಸಿಗಲಿದೆ ದೊಡ್ಡ ಟ್ವಿಸ್ಟ್​?

ರತ್ನಮಾಲಾ ಒಡೆತನದ ಶಿಕ್ಷಣ ಸಂಸ್ಥೆಗೆ ಸಾನಿಯಾ ಎಂಡಿ ಆಗಿದ್ದಾಳೆ. ಇದೇ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಇದ್ದವಳು ಭುವಿ. ಅದೇ ಸಂಸ್ಥೆಗೆ ಭುವಿ ಎಂಡಿ ಆಗುತ್ತಾಳೆ ಎಂಬ ವಿಚಾರ ತಿಳಿದರೆ ಸಾನಿಯಾಗೆ ಶಾಕ್ ಆಗೋದು ಗ್ಯಾರಂಟಿ.

ಅಂತೂ ಇಂತು ‘ಕನ್ನಡತಿ’ ಧಾರಾವಾಹಿಗೆ ಅಮ್ಮಮ್ಮ ಬಂದ್ರು; ಕಥೆಗೆ ಸಿಗಲಿದೆ ದೊಡ್ಡ ಟ್ವಿಸ್ಟ್​?
ರತ್ನಮಾಲಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 11, 2022 | 6:18 PM

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಫ್ಯಾಮಿಲಿ ಡ್ರಾಮಾ ಹೈಲೈಟ್ ಆಗುತ್ತಿದೆ. ಹರ್ಷನ ತಾಯಿ ರತ್ನಮಾಲಾ ಅಥವಾ ಅಮ್ಮಮ್ಮ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಅಮೆರಿಕಕ್ಕೆ ತೆರಳಿದ್ದಳು. ಅವಳು ಇಲ್ಲದೆ ಮನೆಯ ಶಾಂತಿ ಅಲ್ಲೋಲ ಕಲ್ಲೋಲ ಆಗಿತ್ತು. ಸಾನಿಯಾ ಹಲವು ಮಾಸ್ಟರ್​ ಪ್ಲ್ಯಾನ್ ಮಾಡಿದ್ದಳು. ಈಗ ರತ್ನಮಾಲಾ ಮನೆಗೆ ಕಂಬ್ಯಾಕ್ ಮಾಡಿದ್ದಾಳೆ. ಇದರಿಂದ ಸಾನಿಯಾ ನಾಟಕ ಬಂದ್ ಆಗುವ ಎಲ್ಲಾ ಲಕ್ಷಣ ಗೋಚರವಾಗಿದೆ.

ರತ್ನಮಾಲಾ ಮನೆ ಹಾಗೂ ಅವಳಿಗೆ ಸಂಬಂಧಿಸಿದ ಕಂಪನಿಗಳಿಗೆ ಒಡತಿ. ಆಕೆ ಹೇಳಿದಂತೆ ಎಲ್ಲವೂ ನಡೆಯಬೇಕು. ರತ್ನಮಾಲಾ ಕಂಡರೆ ಅನೇಕರಿಗೆ ಭಯ ಇದೆ. ಅದರಲ್ಲೂ ರತ್ನಮಾಲಾಳನ್ನು ಕಂಡರೆ ಸಾನಿಯಾ ಗಡಗಡ ನಡುಗುತ್ತಾಳೆ. ಈಗ ರತ್ನಮಾಲಾ ಅವಳು ಮತ್ತೆ ಬಂದಿರುವುದರಿಂದ ಧಾರಾವಾಹಿಯಲ್ಲಿ ಸಾಕಷ್ಟು ತಿರುವುಗಳು ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಭುವಿ ಪ್ರಾಧ್ಯಾಪಕ ವೃತ್ತಿ ಮಾಡುತ್ತಾ ಇದ್ದಳು. ಆದರೆ, ಕುತಂತ್ರದಿಂದ ಆಕೆಯನ್ನು ಕೆಲಸದಿಂದ ತೆಗೆಸಿದ್ದಾಳೆ ಸಾನಿಯಾ. ಇದರಿಂದ ಭುವಿಗೆ ತೀವ್ರ ಬೇಸರ ಉಂಟಾಗಿದೆ. ರತ್ನಮಾಲಾ ವಾಪಸ್ ಬಂದಿರುವುದರಿಂದ ಭುವಿಗೆ ನೇರವಾಗಿ ಎಂಡಿ ಪಟ್ಟ ಸಿಕ್ಕರೂ ಅಚ್ಚರಿ ಏನಿಲ್ಲ. ರತ್ನಮಾಲಾ ಒಡೆತನದ ಎಲ್ಲಾ ಸಂಸ್ಥೆಗೆ ಭುವಿಯೇ ಒಡತಿ ಆಗಬೇಕು ಎಂಬುದು ಅಮ್ಮಮ್ಮನ ಆಸೆ. ಈ ಕಾರಣಕ್ಕೆ ಭುವಿಯ ಹೆಸರಿಗೆ ಎಲ್ಲ ಆಸ್ತಿ ಬರೆದಿದ್ದಾಳೆ. ಈ ವಿಚಾರ ಗೊತ್ತಾದರೆ ಯಾರು ಯಾವ ರೀತಿಯಲ್ಲಿ ರಿಯಾಕ್ಟ್ ಮಾಡುತ್ತಾರೆ ಎಂಬ ಕುತೂಹಲ ಕಾಡುತ್ತಿದೆ.

ರತ್ನಮಾಲಾ ಒಡೆತನದ ಶಿಕ್ಷಣ ಸಂಸ್ಥೆಗೆ ಸಾನಿಯಾ ಎಂಡಿ ಆಗಿದ್ದಾಳೆ. ಕಣ್ಣೀರು ಹಾಕಿ ಈ ಸ್ಥಾನವನ್ನು ಆಕೆ ಪಡೆದುಕೊಂಡಿದ್ದಾಳೆ. ಇದೇ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಇದ್ದವಳು ಭುವಿ. ಅದೇ ಸಂಸ್ಥೆಗೆ ಭುವಿ ಎಂಡಿ ಆಗುತ್ತಾಳೆ ಎಂಬ ವಿಚಾರ ತಿಳಿದರೆ ಸಾನಿಯಾಗೆ ಶಾಕ್ ಆಗೋದು ಗ್ಯಾರಂಟಿ.

ಇದನ್ನೂ ಓದಿ: ಅಮೆರಿಕದಿಂದ ಬೆಂಗಳೂರಿಗೆ ಮರಳಿದ ‘ಕನ್ನಡತಿ’ ಧಾರಾವಾಹಿಯ ರತ್ನಮಾಲಾ; ಶೀಘ್ರವೇ ಧಾರವಾಹಿಗೆ ರೀ ಎಂಟ್ರಿ

ಭುವಿಯ ವಿರುದ್ಧ ಸಾನಿಯಾ ಹಾಗೂ ವರುಧಿನಿ ಇಬ್ಬರೂ ಮಸಲತ್ತು ನಡೆಸುತ್ತಿದ್ದಾರೆ. ಹರ್ಷನನ್ನು ಭುವಿ ಮದುವೆ ಆಗಿದ್ದಾಳೆ ಅನ್ನೋದು ವರುಧಿನಿಗೆ ಬೇಸರ ತಂದಿದೆ. ಹರ್ಷನನ್ನು ಮರಳಿ ಪಡೆಯಲೇಬೇಕು ಎಂಬ ಹಠಕ್ಕೆ ವರುಧಿನಿ ಬಿದ್ದಿದ್ದಾಳೆ. ಸಾನಿತಾ ತನ್ನ ಎಂಡಿ ಪಟ್ಟ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ.

Published On - 6:17 pm, Thu, 11 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ