ಅಮೆರಿಕದಿಂದ ಬೆಂಗಳೂರಿಗೆ ಮರಳಿದ ‘ಕನ್ನಡತಿ’ ಧಾರಾವಾಹಿಯ ರತ್ನಮಾಲಾ; ಶೀಘ್ರವೇ ಧಾರವಾಹಿಗೆ ರೀ ಎಂಟ್ರಿ

ತನ್ನ ಇಡೀ ಆಸ್ತಿಯನ್ನು ಭುವಿಗೆ ಬರೆದಿದ್ದಾಳೆ ರತ್ನಮಾಲಾ. ಈ ವಿಚಾರ ಸಾನಿಯಾಗೆ ಗೊತ್ತಿಲ್ಲ. ಈಗ ಭುವಿ ಮೇಲೆ ಹಗೆ ಸಾಧಿಸುತ್ತಿರುವ ಸಾನಿಯಾಗೆ ಆಸ್ತಿ ವಿಚಾರ ಗೊತ್ತಾದರೆ ಶಾಕ್ ಆಗೋದು ಗ್ಯಾರಂಟಿ.

ಅಮೆರಿಕದಿಂದ ಬೆಂಗಳೂರಿಗೆ ಮರಳಿದ ‘ಕನ್ನಡತಿ’ ಧಾರಾವಾಹಿಯ ರತ್ನಮಾಲಾ; ಶೀಘ್ರವೇ ಧಾರವಾಹಿಗೆ ರೀ ಎಂಟ್ರಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 21, 2022 | 6:32 AM

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ರತ್ನಮಾಲಾ ಎಂದೇ ಫೇಮಸ್ ಆದವರು ಚಿತ್ಕಲಾ ಬಿರಾದಾರ್ (Chitkala Biradar). ಅವರು ಕಥಾನಾಯಕ ಹರ್ಷನ ತಾಯಿ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅವರು ನಿರ್ವಹಿಸುತ್ತಿರುವ ರತ್ನಮಾಲಾ (Ratnamala) ಪಾತ್ರ ಸಾಕಷ್ಟು ಹೈಲೈಟ್ ಆಗಿದೆ. ಅವರು ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದರು. ಈಗ ಅವರು ಬೆಂಗಳೂರಿಗೆ ಮರಳಿದ್ದಾರೆ. ಶೀಘ್ರವೇ ಅವರು ಶೂಟಿಂಗ್​ಗೆ ರೀ ಎಂಟ್ರಿ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಕಿರುತೆರೆ ವೀಕ್ಷಕರು ಹಾಗೂ ‘ಕನ್ನಡತಿ’ ಧಾರಾವಾಹಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

‘ಕನ್ನಡತಿ’ ಧಾರಾವಾಹಿಯಲ್ಲಿ ರತ್ನಮಾಲಾ ಪಾತ್ರ ತುಂಬಾನೇ ಮುಖ್ಯವಾಗಿದೆ. ಅವಳ ಒಡೆತನದಲ್ಲಿ ಹಲವು ಸಂಸ್ಥೆಗಳಿವೆ. ಈ ಧಾರಾವಾಹಿಯಲ್ಲಿನ ಫ್ಯಾಮಿಲಿ ಡ್ರಾಮಾಗೆ ಅವಳು ಮಾಡಿರುವ ಆಸ್ತಿಯೇ ಕಾರಣ. ಹರ್ಷನ ತಾಯಿ ಆಗಿ, ಭುವಿಯ ಅತ್ತೆಯಾಗಿ ರತ್ನಮಾಲಾ ಗಮನ ಸೆಳೆಯುತ್ತಿದ್ದಾಳೆ. ಚಿತ್ಕಲಾ ಅವರಿಗೆ ಬ್ರೇಕ್ ಬೇಕಿದ್ದ ಕಾರಣ, ಅವರು ನಿರ್ವಹಿಸುತ್ತಿದ್ದ ರತ್ನಮಾಲಾ ಪಾತ್ರಕ್ಕೂ ಬ್ರೇಕ್​ ನೀಡಲಾಯಿತು. ರತ್ನಮಾಲಾಗೆ ತೀವ್ರ ಅನಾರೋಗ್ಯ ಕಾಡಿದ್ದು, ಅಮೆರಿಕಕ್ಕೆ ಕಳುಹಿಸಲಾಗಿದೆ ಎಂದು ಕಥೆಯಲ್ಲಿ ತೋರಿಸಲಾಗಿದೆ. ಶೀಘ್ರವೇ ಅವರು ಧಾರಾವಾಹಿಗೆ ಮರಳುವ ಸೂಚನೆ ಸಿಕ್ಕಿದೆ.

ಮಾಲಾ ಎಜ್ಯುಕೇಶನ್ ಸಂಸ್ಥೆಗೆ ಸಾನಿಯಾ ಎಂಡಿ. ಈ ಸಂಸ್ಥೆಯಲ್ಲಿ ಭುವಿ ಇಂಟರ್ನ್​ಶಿಪ್​ ಮಾಡುತ್ತಿದ್ದಳು. ಸಾನಿಯಾ ಕಾಟ ತಡೆಯಲಾರದೇ ಅವಳು ಕೆಲಸ ಬಿಟ್ಟಿದ್ದಾಳೆ. ಈಗ ರತ್ನಮಾಲಾ ಮರಳಿದ ನಂತರದಲ್ಲಿ ಭುವಿಗೆ ಎಂಡಿ ಪಟ್ಟ ಸಿಕ್ಕರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ತನ್ನ ಇಡೀ ಆಸ್ತಿಯನ್ನು ಭುವಿಗೆ ಬರೆದಿದ್ದಾಳೆ ರತ್ನಮಾಲಾ. ಈ ವಿಚಾರ ಸಾನಿಯಾಗೆ ಗೊತ್ತಿಲ್ಲ. ಈಗ ಭುವಿ ಮೇಲೆ ಹಗೆ ಸಾಧಿಸುತ್ತಿರುವ ಸಾನಿಯಾಗೆ ಆಸ್ತಿ ವಿಚಾರ ಗೊತ್ತಾದರೆ ಶಾಕ್ ಆಗೋದು ಗ್ಯಾರಂಟಿ. ರತ್ನಮಾಲಾ ಮರಳಿ ಬಂದರೆ ಈ ಬೆಳವಣಿಗೆ ನಡೆಯಬಹುದು ಎಂಬುದು ವೀಕ್ಷಕರ ಊಹೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ

ಚಿತ್ಕಲಾ ಅವರು ಜಗದೀಶ್ ಅವರನ್ನು ಮದುವೆ ಆಗಿದ್ದಾರೆ. ಅವರ ದಾಂಪತ್ಯಕ್ಕೆ ಈಗ 30 ವರ್ಷ. ವಿವಾಹ ವಾರ್ಷಿಕೋತ್ಸವ ಆಚರಣೆಗೆ ಈ ದಂಪತಿ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಸಮಯ ಕಳೆಯುತ್ತಿರುವ ಫೋಟೋಗಳನ್ನು ಚಿತ್ಕಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದರು. ‘ವೆಕೇಷನ್​ ಮುಗಿಸಿ ಸಾಕು. ಬೇಗ ಮನೆಗೆ ಬನ್ನಿ’ ಎಂದು ಚಿತ್ಕಲಾ ಎದುರು ಫ್ಯಾನ್ಸ್ ಬೇಡಿಕೆ ಇಟ್ಟಿದ್ದರು. ಈಗ ಮರಳಿ ಬೆಂಗಳೂರಿಗೆ ಬಂದಿರುವ ಫೋಟೋವನ್ನು ಚಿತ್ಕಲಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Published On - 6:27 am, Thu, 21 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ