ರತ್ನಮಾಲಾಗೆ ಏಕವಚನದಲ್ಲಿ ಬೈದು, ಕೊಲ್ಲಲು ಪ್ರಯತ್ನಿಸಿದ್ದ ಸಾನಿಯಾ; ವಿಡಿಯೋ ಮೂಲಕ ಹೊರ ಬಿತ್ತು ರಹಸ್ಯ

ಸಾನಿಯಾ ಬೈದ ಪ್ರತಿ ವಿಚಾರವನ್ನು ಆಕೆ ರೆಕಾರ್ಡ್ ಮಾಡಿ ಇಟ್ಟುಕೊಂಡಿದ್ದಾಳೆ. ಈ ವಿಡಿಯೋವನ್ನು ನೋಡಿ ಸಾನಿಯಾ ಶಾಕ್​ಗೆ ಒಳಗಾಗಿದ್ದಾಳೆ. ಈ ಕಾರಣಕ್ಕಾಗಿ ಇಂದಿನ ಎಪಿಸೋಡ್ ಸಾಕಷ್ಟು ಕುತೂಹಲ ಮೂಡಿಸಿದೆ.

ರತ್ನಮಾಲಾಗೆ ಏಕವಚನದಲ್ಲಿ ಬೈದು, ಕೊಲ್ಲಲು ಪ್ರಯತ್ನಿಸಿದ್ದ ಸಾನಿಯಾ; ವಿಡಿಯೋ ಮೂಲಕ ಹೊರ ಬಿತ್ತು ರಹಸ್ಯ
ಸಾನಿಯಾ-ರತ್ನಮಾಲಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 12, 2022 | 4:28 PM

‘ಕನ್ನಡತಿ’ ಧಾರಾವಾಹಿಗೆ (Kannadathi Serial) ಪ್ರಮುಖ ಟ್ವಿಸ್ಟ್ ಸಿಕ್ಕಿದೆ. ಮನೆಯ ಹಿರಿತಲೆ ರತ್ನಮಾಲಾ ಮರಳಿ ಬಂದಿದ್ದಾಳೆ. ಇದರಿಂದ ಸಾನಿಯಾಗೆ ಸಖತ್ ನಡುಕ ಶುರುವಾಗಿದೆ. ಆಕೆಗೆ ಇಷ್ಟೊಂದು ಹೆದರಿಕೊಳ್ಳೋಕೆ ಕಾರಣ ಏನು ಎಂಬುದು ವೀಕ್ಷಕರ ಪ್ರಶ್ನೆಯಾಗಿತ್ತು. ಇಂದಿನ ಎಪಿಸೋಡ್​ನಲ್ಲಿ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರತ್ನಮಾಲಾ ಆ್ಯಂಬುಲೆನ್ಸ್​ನಲ್ಲಿ ಹೋಗುವಾಗ ಅವಳನ್ನು ಕೊಲ್ಲಲು ಪ್ರಯತ್ನ ನಡೆದಿತ್ತು! ಏಕವಚನದಲ್ಲಿ ಆಕೆಗೆ ಬಾಯಿಗೆ ಬಂದಂತೆ ಬಯ್ಯಲಾಗಿತ್ತು. ಇದೆಲ್ಲವನ್ನೂ ಮಾಡಿದ್ದು ಸಾನಿಯಾ!

ಹೌದು, ಸಾನಿಯಾ ಈ ರೀತಿ ಮಾಡಿರುವ ವಿಚಾರವನ್ನು ರತ್ನಮಾಲಾ ಬಯಲಿಗೆ ಎಳೆದಿದ್ದಾಳೆ. ಸಾನಿಯಾ ಬೈದ ಪ್ರತಿ ವಿಚಾರವನ್ನು ಆಕೆ ರೆಕಾರ್ಡ್ ಮಾಡಿ ಇಟ್ಟುಕೊಂಡಿದ್ದಾಳೆ. ಈ ವಿಡಿಯೋವನ್ನು ನೋಡಿ ಸಾನಿಯಾ ಶಾಕ್​ಗೆ ಒಳಗಾಗಿದ್ದಾಳೆ. ಈ ಕಾರಣಕ್ಕಾಗಿ ಇಂದಿನ (ಆಗಸ್ಟ್ 12) ಎಪಿಸೋಡ್ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬೆಳವಣಿಗೆಯಿಂದ ಧಾರಾವಾಹಿ ಯಾವ ದಿಕ್ಕಿನಲ್ಲಿ ಸಾಗಬಹುದು ಎಂಬ ಕುತೂಹಲವೂ ಮೂಡಿದೆ.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಹರ್ಷ ಹಾಗೂ ಭುವಿ ಮದುವೆ ಬಳಿಕ ರತ್ನಮಾಲಾ ಆಸ್ಪತ್ರೆಗೆ ದಾಖಲಾದಳು. ಅಲ್ಲಿ ಚಿಕಿತ್ಸೆ ಅಸಾಧ್ಯ ಎಂದಾಗ ಆಕೆಯನ್ನು ಅಮೆರಿಕಕ್ಕೆ ಕರೆದೊಯ್ಯಲಾಯಿತು. ವಿಮಾನ ನಿಲ್ದಾಣದವರೆಗೆ ಆ್ಯಂಬುಲೆನ್ಸ್​ನಲ್ಲಿ ರತ್ನಮಾಲಾ ಜತೆ ಇದ್ದಿದ್ದು ಸಾನಿಯಾ. ರತ್ನಮಾಲಾ ಹೇಗಿದ್ದರೂ ಸಾಯುತ್ತಾಳೆ ಎಂದು ಭಾವಿಸಿ ಸಾನಿಯಾ ಏಕವಚನದಲ್ಲಿ ಬೈದಿದ್ದಳು. ಅಷ್ಟೇ ಅಲ್ಲ, ಕೃತಕ ಉಸಿರಾಟಕ್ಕಾಗಿ ಹಾಕಿದ್ದ ವ್ಯವಸ್ಥೆಯನ್ನು ತೆಗೆದು ಹತ್ಯೆ ಮಾಡಲು ಪ್ರಯತ್ನಿಸಿದ್ದಳು.

ಸಾನಿಯಾ ಬಯ್ಯುವುದನ್ನು ರತ್ನಮಾಲಾ ವಿಡಿಯೋ ಮಾಡಿಕೊಂಡಿದ್ದಾಳೆ. ಮನೆಗೆ ಮರಳಿದ ತಕ್ಷಣದಲ್ಲಿ ಈ ವಿಡಿಯೋವನ್ನು ಸಾನಿಯಾಗೆ ಕಳುಹಿಸಿದ್ದಾಳೆ ರತ್ನಮಾಲಾ. ವಿಡಿಯೋ ನೋಡಿ ಸಾನಿಯಾ ಕಂಗಾಲಾಗಿದ್ದಾಳೆ. ಅವಳ ಎಂಡಿ ಪಟ್ಟ ಶೀಘ್ರದಲ್ಲೇ ಹೋಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ಅಭಿಪ್ರಾಯ ವೀಕ್ಷಕರ ವಲಯದಿಂದ ವ್ಯಕ್ತವಾಗಿದೆ.

ಸಾನಿಯಾ ಕೆಟ್ಟವಳು ಎಂಬುದು ಗೊತ್ತಿದ್ದೂ ರತ್ನಮಾಲಾ ಆಕೆಗೆ ಎಂಡಿ ಪಟ್ಟ ನೀಡಿದ್ದಳು. ಅವಳು ಎಷ್ಟೇ ಕೆಟ್ಟ ಆಲೋಚನೆಗಳನ್ನು ಮಾಡಿಕೊಂಡಿದ್ದರೂ ಅದನ್ನು ಸಹಿಸಿಕೊಂಡಿದ್ದಳು ರತ್ನಮಾಲಾ. ಆದರೆ, ಈಗ ಆಕೆ ಮಾಡಿದ ಕೆಟ್ಟ ಕೆಲಸವನ್ನು ವಿಡಿಯೋ ಮೂಲಕ ಬಯಲಿಗೆ ಎಳೆದಿದ್ದಾಳೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ತಾನೇ ತೋಡಿದ ಖೆಡ್ಡಕ್ಕೆ ಸಾನಿಯಾ ಬಿದ್ದಿದ್ದಾಳೆ.

ಇದನ್ನೂ ಓದಿ: ಭುವಿ ಮಾತನಾಡಿದ ಇಂಗ್ಲಿಷ್ ಕೇಳಿ ದಂಗಾದ ಸಾನಿಯಾ; ಹರ್ಷನಿಗೂ ಮೂಡಿತು ಅಚ್ಚರಿ

ಇಡೀ ಆಸ್ತಿಯನ್ನು ರತ್ನಮಾಲಾ ಭುವಿ ಹೆಸರಿಗೆ ಬರೆದಿದ್ದಾಳೆ. ಈ ವಿಚಾರ ರತ್ನಮಾಲಾ ಹಾಗೂ ವಕೀಲರಿಗೆ ಮಾತ್ರ ಗೊತ್ತಿದೆ. ಈ ಸತ್ಯ ಗೊತ್ತಾದರೆ ಯಾರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Published On - 4:27 pm, Fri, 12 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ