ಭುವಿ ಮಾತನಾಡಿದ ಇಂಗ್ಲಿಷ್ ಕೇಳಿ ದಂಗಾದ ಸಾನಿಯಾ; ಹರ್ಷನಿಗೂ ಮೂಡಿತು ಅಚ್ಚರಿ

ರತ್ನಮಾಲಾ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭುವಿ ಕರೆ ಮಾಡಿದ್ದಾಳೆ. ಅದ್ಭುತವಾಗಿ ಇಂಗ್ಲಿಷ್​ನಲ್ಲಿ ಮಾತನಾಡಿದ್ದಾಳೆ. ಭುವಿ ಇಂಗ್ಲಿಷ್ ಮಾತನಾಡುವುದನ್ನು ನೋಡಿ ಹರ್ಷ ಹಾಗೂ ಸಾನಿಯಾ ಅಚ್ಚರಿ ಹೊರಹಾಕಿದ್ದಾರೆ.

ಭುವಿ ಮಾತನಾಡಿದ ಇಂಗ್ಲಿಷ್ ಕೇಳಿ ದಂಗಾದ ಸಾನಿಯಾ; ಹರ್ಷನಿಗೂ ಮೂಡಿತು ಅಚ್ಚರಿ
ಭುವಿ-ಸಾನಿಯಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 02, 2022 | 12:15 PM

‘ಕನ್ನಡತಿ’ ಧಾರಾವಾಹಿಯ (Kannadathi Serial) ನಾಯಕಿ ಭುವನೇಶ್ವರಿ ಸದಾ ಕನ್ನಡ ಮಾತನಾಡುತ್ತಾಳೆ. ಈ ಧಾರಾವಾಹಿ ಮೂಲಕ ಕನ್ನಡದ ಮೇಲಿನ ಪ್ರೀತಿ ಮೆರೆಯಲಾಗುತ್ತಿದೆ. ಈ ವಿಚಾರಕ್ಕಾಗಿ ಕಥಾ ನಾಯಕಿ ಸಾಕಷ್ಟು ಇಷ್ಟವಾಗುತ್ತಾಳೆ. ಭುವಿ ಕನ್ನಡ ಮಾತನಾಡುವುದನ್ನು ನೋಡಿ ಅನೇಕರು ಆಕೆಗೆ ಇಂಗ್ಲಿಷ್ ಬರುವುದಿಲ್ಲ ಎಂದೇ ಅಂದುಕೊಂಡಿದ್ದರು. ಆದರೆ, ಅದನ್ನು ಅವಳು ಸುಳ್ಳು ಮಾಡಿದ್ದಾಳೆ. ಸುಲಲಿತವಾಗಿ ಇಂಗ್ಲಿಷ್ ಮಾತನಾಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ. ಭುವಿ ಇಂಗ್ಲಿಷ್ ಕಂಡು ಸಾನಿಯಾ ಹಾಗೂ ಹರ್ಷ ನಿಜಕ್ಕೂ ಶಾಕ್ ಆಗಿದ್ದಾರೆ.

ಹರ್ಷನ ತಾಯಿ ರತ್ನಮಾಲಾ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದ್ದಾಳೆ. ಆಕೆ ಬೇಗ ಗುಣಮುಖರಾಗಿ ಬರಲಿ ಎಂಬುದು ಮಗ ಹರ್ಷ ಹಾಗೂ ಸೊಸೆ ಭುವಿಯ ಕೋರಿಕೆ. ಅವಳು ಮರಳೋದು ಯಾವಾಗ ಎಂಬುದು ಇನ್ನೂ ಅಧಿಕೃತವಾಗಿಲ್ಲ. ಈ ಮಧ್ಯೆ ರತ್ನಮಾಲಾ ಆರೋಗ್ಯದ ಅಪ್​ಡೇಟ್ ತಿಳಿಯಲು ಹರ್ಷ ಪ್ರಯತ್ನಿಸಿದ್ದಾನೆ. ಇದು ಸಾಧ್ಯವಾಗದಾಗ ಕೂಗಾಡಿದ್ದಾನೆ. ಆಗ ಭುವಿ ಕನ್ನಡದಲ್ಲಿ ಮಾತನಾಡಿದ್ದು ಹರ್ಷನಿಗೆ ಕಿರಿಕಿರಿ ಉಂಟಾಗಿದೆ. ಈ ಕಾರಣಕ್ಕೆ ಆಕೆಯ ಮೇಲೂ ಹರ್ಷ ಕೂಗಾಡಿದ್ದಾನೆ.

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಇದರಿಂದ ಭುವಿಗೆ ಬೇಸರ ಆಗಿದೆ. ರತ್ನಮಾಲಾ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭುವಿ ಕರೆ ಮಾಡಿದ್ದಾಳೆ. ಅದ್ಭುತವಾಗಿ ಇಂಗ್ಲಿಷ್​ನಲ್ಲಿ ಮಾತನಾಡಿದ್ದಾಳೆ. ಭುವಿ ಇಂಗ್ಲಿಷ್ ಮಾತನಾಡುವುದನ್ನು ನೋಡಿ ಹರ್ಷ ಹಾಗೂ ಸಾನಿಯಾ ಅಚ್ಚರಿ ಹೊರಹಾಕಿದ್ದಾರೆ. ಭುವಿ ಮುಂದೊಂದು ದಿನ ತನಗೆ ಕಂಟಕ ಆಗಬಹುದು ಎಂಬುದು ಸಾನಿಯಾಗೆ ಖಚಿತವಾಗಿದೆ.

ಅಮ್ಮಮ್ಮ ಭುವಿಯ ಹೆಸರಿಗೆ ಸಂಪೂರ್ಣ ಆಸ್ತಿ ಬರೆದಿದ್ದಾಳೆ. ಹೀಗಾಗಿ, ರತ್ನಾಮಾಲಾಗೆ ಸಂಬಂಧಿಸಿದ ಸಂಪೂರ್ಣ ಆಸ್ತಿಗೆ ಒಡತಿ ಭುವಿಯೇ ಆಗಲಿದ್ದಾಳೆ. ಈ ವಿಚಾರ ತಿಳಿದರೆ ಯಾರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ರತ್ನಾಮಾಲ ಒಡೆತನದ ಸಂಸ್ಥೆಗಳಿಗೆ ಭುವಿ ಬೇಗ ಎಂಡಿ ಆಗಲಿ ಎಂದು ವೀಕ್ಷಕರು ಆಸೆಪಡುತ್ತಿದ್ದಾರೆ.

ಇದನ್ನೂ ಓದಿ: ಅಮೆರಿಕದಿಂದ ಬೆಂಗಳೂರಿಗೆ ಮರಳಿದ ‘ಕನ್ನಡತಿ’ ಧಾರಾವಾಹಿಯ ರತ್ನಮಾಲಾ; ಶೀಘ್ರವೇ ಧಾರವಾಹಿಗೆ ರೀ ಎಂಟ್ರಿ

ಭುವಿಯಿಂದ ಸಾನಿಯಾಗೆ ಪದೇಪದೇ ಅವಮಾನ ಆಗುತ್ತಿದೆ. ಟೀಚರ್ ಆಗಿ ಕೆಲಸ ಮಾಡುತ್ತಿರುವ ಭುವಿಯನ್ನು ಕೆಲಸದಿಂದ ತೆಗೆಯಬೇಕು ಎನ್ನುವ ನಿರ್ಧಾರಕ್ಕೆ ಸಾನಿಯಾ ಬಂದಿದ್ದಾಳೆ. ಒಂದೊಮ್ಮೆ ರತ್ನಮಾಲಾ ‘ಕನ್ನಡತಿ’ಗೆ ಕಂಬ್ಯಾಕ್ ಮಾಡಿದರೆ ಸಾನಿಯಾ ಹಾಗೂ ವರುಧಿನಿ ಆಟ ನಿಲ್ಲಲಿದೆ.

Published On - 6:35 am, Tue, 2 August 22

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್