Updated on: Sep 03, 2022 | 2:26 PM
ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಂದೆಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಪತ್ನಿಗೆ ಪ್ರೇರಣಾಗೆ 9 ತಿಂಗಳಾಗಿದ್ದು, ಸೆಪ್ಟೆಂಬರ್ನಲ್ಲಿ ಸರ್ಜಾ ಕುಟುಂಬಕ್ಕೆ ಪುಟ್ಟ ಪುಟಾಣಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ ಆ್ಯಕ್ಷನ್ ಪ್ರಿನ್ಸ್.
ಈ ಶುಭ ಸುದ್ದಿಯನ್ನು ಫೋಟೋ ಶೂಟ್ ವಿಡಿಯೋ ಹಂಚಿಕೊಳ್ಳುವ ಮೂಲಕ ಧ್ರುವ ಸರ್ಜಾ ಬಹಿರಂಗಪಡಿಸಿದ್ದಾರೆ.
ಪ್ರೇರಣಾ ಅವರ ಬೇಬಿ ಬಂಪ್ ವಿಡಿಯೋ ಶೇರ್ ಮಾಡಿರುವ ಧ್ರುವ ಸರ್ಜಾ, ನಾವು ಜೀವನದ ಹೊಸ ಹಂತವನ್ನು ಪ್ರವೇಶಿಸುತ್ತಿದ್ದೇವೆ, ದೈವಿಕ ಪುಣಾಣಿ ಬೇಗ ಬರಲಿ ಎಂದು ಬರೆದುಕೊಂಡಿದ್ದಾರೆ.
ಇದೀಗ ಚಿರು ಅಗಲಿಕೆಯ 2 ವರ್ಷಗಳ ಬಳಿಕ ಸರ್ಜಾ ಕುಟುಂಬಕ್ಕೆ ವಿಶೇಷ ಅತಿಥಿಯ ಆಗಮನವಾಗುತ್ತಿದೆ. ಇದೇ ಖುಷಿಯಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿಗಳಿದ್ದು, ಇದೇ ತಿಂಗಳು ಪುಟಾಣಿಯನ್ನು ಬರ ಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ.
ಪುಟ್ಟ ಪುಣಾಣಿಯ ಆಗಮನದ ಖುಷಿಯಲ್ಲಿರುವ ಧ್ರುವ ಸರ್ಜಾ-ಪ್ರೇರಣಾ ವಿಶೇಷ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋಗಳು ಇದೀಗ ವೈರಲ್ ಆಗಿವೆ.
ಪ್ರೇರಣಾ ಸರ್ಜಾ
ಧ್ರುವ-ಪ್ರೇರಣಾ ಜೋಡಿ