‘ಆರ್​ಆರ್​ಆರ್​’ ಟೀಂ ಕಡೆಯಿಂದ ಒಂದು ಗುಡ್​ ನ್ಯೂಸ್, ಒಂದು ಬ್ಯಾಡ್​ ನ್ಯೂಸ್​

‘ಆರ್​ಆರ್​ಆರ್​’ ಸಿನಿಮಾ ರಿಲೀಸ್ ದಿನಾಂಕ ಸತತವಾಗಿ ಮುಂದೂಡತ್ತಲೇ ಬರುತ್ತಿತ್ತು. ಜ್ಯೂ.ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್, ಅಜಯ್​ ದೇವಗನ್​ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಸಿನಿಮಾ ಹವಾ ಸೃಷ್ಟಿ ಮಾಡಿದೆ.

‘ಆರ್​ಆರ್​ಆರ್​’ ಟೀಂ ಕಡೆಯಿಂದ ಒಂದು ಗುಡ್​ ನ್ಯೂಸ್, ಒಂದು ಬ್ಯಾಡ್​ ನ್ಯೂಸ್​
RRR ಟೀಂ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 20, 2022 | 2:20 PM

‘ಆರ್​ಆರ್​ಆರ್​’ ಸಿನಿಮಾ (RRR Movie) ರಿಲೀಸ್​ಗೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್​ 25ರಂದು ಈ ಚಿತ್ರ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ವಿಶ್ವಾದ್ಯಂತ ಈ ಸಿನಿಮಾ ರಿಲೀಸ್​ ಆಗುತ್ತಿದ್ದು, ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ‘ಬಾಹುಬಲಿ 2’ ಬಳಿಕ ತೆರೆಗೆ ಬರುತ್ತಿರುವ ರಾಜಮೌಳಿ (SS Rajamouli) ನಿರ್ದೇಶನದ ಸಿನಿಮಾ ಇದಾಗಿದೆ. ಈಗ ಸಿನಿಮಾ ಕಡೆಯಿಂದ ಒಂದು ಗುಡ್​ ನ್ಯೂಸ್ ಮತ್ತೊಂದು ಬ್ಯಾಡ್​ ನ್ಯೂಸ್​ ಇದೆ. ಈ ಚಿತ್ರದ ಟಿಕೆಟ್​ ಬುಕಿಂಗ್​ ಓಪನ್​ ಆಗಿದೆ ಅನ್ನೋದು ಗುಡ್​ ನ್ಯೂಸ್​. ಆದರೆ, ಟಿಕೆಟ್​ ದರ 400 ರೂಪಾಯಿ ಗಡಿ ದಾಟಿದೆ ಅನ್ನೋದು ಬ್ಯಾಡ್ ನ್ಯೂಸ್​. ಭಾನುವಾರ ಮಧ್ಯಾಹ್ನದ ವೇಳೆಗೆ ಬೆಂಗಳೂರಿನ (Bengaluru) ಮೂರು  ಚಿತ್ರಮಂದಿರಗಳಲ್ಲಿ ಬುಕಿಂಗ್ ಓಪನ್​ ಮಾಡಲಾಗಿದ್ದು, ಮಾರ್ಚ್​ 25ರ ಮುಂಜಾನೆ 5.30ಕ್ಕೆ ಸಿನಿಮಾ ಪ್ರದರ್ಶನ ಇಡಲಾಗಿದೆ.

‘ಆರ್​ಆರ್​ಆರ್​’ ಸಿನಿಮಾ ರಿಲೀಸ್ ದಿನಾಂಕ ಸತತವಾಗಿ ಮುಂದೂಡತ್ತಲೇ ಬರುತ್ತಿತ್ತು. ಜ್ಯೂ.ಎನ್​ಟಿಆರ್​, ರಾಮ್​ ಚರಣ್​, ಆಲಿಯಾ ಭಟ್, ಅಜಯ್​ ದೇವಗನ್​ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಸಿನಿಮಾ ಹವಾ ಸೃಷ್ಟಿ ಮಾಡಿದೆ. ಚಿತ್ರದ ಕ್ರೇಜ್​ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈಗ ‘ಆರ್​ಆರ್​ಆರ್​’ ಸಿನಿಮಾದ ಟಿಕೆಟ್​ ಬುಕ್ ಮಾಡೋಕೆ ಅವಕಾಶ ನೀಡಲಾಗಿದೆ.

ಬೆಂಗಳೂರಿನ ಪೃಥ್ವಿ, ಬೃಂದಾ ಹಾಗೂ ಭೂಮಿಕಾ ಚಿತ್ರಮಂದಿರಗಳಲ್ಲಿ ಟಿಕೆಟ್​ ಬುಕಿಂಗ್​ ಓಪನ್​ ಆಗಿದೆ.  ಮುಂಜಾನೆಯಿಂದ ಸಂಜೆವರೆಗೆ ಇರುವ ಎಲ್ಲಾ ಶೋಗಳ ಟಿಕೆಟ್ ಬೆಲೆ ಬರೋಬ್ಬರಿ 400 ಹಾಗೂ 500 ರೂಪಾಯಿ. ಆನ್​ಲೈನ್​ನಲ್ಲಿ ಟಿಕೆಟ್​ ಬುಕ್ ಮಾಡುತ್ತಿರುವುದರಿಂದ ಒಂದು ಟಿಕೆಟ್​ಗೆ ತಗಲುವ ಟ್ಯಾಕ್ಸ್​ ಬೆಲೆ ಬರೋಬ್ಬರಿ 70 ರೂಪಾಯಿ. ಇದು ಸಾಮಾನ್ಯರ ಜೇಬಿಗೆ ಭಾರವಾಗಲಿದೆ.

ಇದಲ್ಲದೆ, ಇನ್ನೂ ಹಲವು ಚಿತ್ರಮಂದಿರಗಳಲ್ಲಿ ‘ಆರ್​ಆರ್​ಆರ್​’ ಚಿತ್ರಕ್ಕೆ ಶೋ ಸಿಗಲಿದೆ. ಮುಂಜಾನೆಯಿಂದಲೇ ಶೋ ಆರಂಭವಾಗಲಿದೆ. ಅವುಗಳು ಯಾವ ರೀತಿಯಲ್ಲಿ ಬೆಲೆ ನಿಗದಿ ಮಾಡಲಿವೆ ಎಂಬುದನ್ನು ಕಾದು ನೋಡಬೇಕಿದೆ. ಎಲ್ಲಾ ಚಿತ್ರಮಂದಿರಗಳು ದುಬಾರಿ ಮೊತ್ತ ನಿಗದಿ ಮಾಡಿದರೆ, ಜನಸಾಮಾನ್ಯರು ಸಿನಿಮಾ ನೋಡೋಕೆ ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.

‘ಆರ್​ಆರ್​ಆರ್​’ ತಂಡ ಭಾನುವಾರ (ಜನವರಿ 19) ಚಿಕ್ಕಬಳ್ಳಾಪುರದಲ್ಲಿ ಪ್ರೀ-ರಿಲೀಸ್​ ಇವೆಂಟ್ ಹಮ್ಮಿಕೊಂಡಿತ್ತು. 100 ಎಕರೆ ಜಾಗದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನೆರವೇರಿತ್ತು. ನಟ ಶಿವರಾಜ್​ಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಕೆ. ಸುಧಾಕರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಇದನ್ನೂ ಓದಿ: ‘ಆರ್​ಆರ್​ಆರ್’ ಪ್ರೀ-ರಿಲೀಸ್​ ವೇದಿಕೆ ಮೇಲೆ ರಾಜಮೌಳಿಗೆ ಶಿವಣ್ಣ ವಿಶೇಷ ಮನವಿ

‘ಈಗ’ದ ತಯಾರಿಗೆ ನೊಣಗಳನ್ನು ಫ್ರಿಡ್ಜ್​ನಲ್ಲಿಟ್ಟು ಅಧ್ಯಯನ ಮಾಡಿದ್ದ ರಾಜಮೌಳಿ; ಇಲ್ಲಿವೆ ಹಲವು ಅಚ್ಚರಿಯ ವಿಚಾರಗಳು!

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್