‘ಆರ್​ಆರ್​ಆರ್’ ಪ್ರೀ-ರಿಲೀಸ್​ ವೇದಿಕೆ ಮೇಲೆ ರಾಜಮೌಳಿಗೆ ಶಿವಣ್ಣ ವಿಶೇಷ ಮನವಿ

ಆರ್​ಆರ್​ಆರ್​’ ಸಿನಿಮಾನ ಫಸ್ಟ್​ಡೇ, ಫಸ್ಟ್ ಶೋ ನೋಡ್ತೀನಿ. ಕನ್ನಡ ಶೋ ಜಾಸ್ತಿ ಹಾಕಿ ಎಂದು ಕೋರಿದರು ಶಿವಣ್ಣ. ‘ಪುಷ್ಪ’, ‘ರಾಧೆ ಶ್ಯಾಮ್​’ ಸಿನಿಮಾ ತೆರೆಗೆ ಬಂದಾಗ ಕನ್ನಡ ವರ್ಷನ್​ಗೆ​ ಹೆಚ್ಚು ಶೋ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಶಿವಣ್ಣ ಈ ಮನವಿ ಮಾಡಿದ್ದಾರೆ. 

‘ಆರ್​ಆರ್​ಆರ್’ ಪ್ರೀ-ರಿಲೀಸ್​ ವೇದಿಕೆ ಮೇಲೆ ರಾಜಮೌಳಿಗೆ ಶಿವಣ್ಣ ವಿಶೇಷ ಮನವಿ
ರಾಜಮೌಳಿ, ಶಿವಣ್ಣ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 19, 2022 | 10:11 PM

ಇಂದು (ಮಾರ್ಚ್​ 19) ಚಿಕ್ಕಬಳ್ಳಾಪುರದಲ್ಲಿ ರಾಜಮೌಳಿ (Rajamouli) ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾದ (RRR Movie) ಪ್ರೀ-ರಿಲೀಸ್​ ಇವೆಂಟ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಸ್ಯಾಂಡಲ್​ವುಡ್​ ನಟ ಶಿವರಾಜ್​ಕುಮಾರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಕೆ. ಸುಧಾಕರ್​, ನಟ ರಾಮ್​ ಚರಣ್​, ಜ್ಯೂ. ಎನ್​ಟಿಆರ್ (JR. NTR) ಮೊದಲಾದವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ವೇದಿಕೆ ಏರಿದ ಶಿವಣ್ಣ ಅವರು ‘ಆರ್​ಆರ್​ಆರ್​’ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ನಾನು ರಾಜಮೌಳಿ ಅವರ ದೊಡ್ಡ ಫ್ಯಾನ್​ ಎಂದರು.

‘ಒಂದು ಕಡೆ ಸಂತೋಷನೂ ಆಗ್ತಾ ಇದೆ, ಮತ್ತೊಂದು ಕಡೆ ದುಃಖ ಇದೆ. ಅಪ್ಪುನ ಕಳೆದುಕೊಂಡು ದುಃಖದಲ್ಲಿದ್ದೇವೆ. ನಮ್ಮ ದುಃಖದಲ್ಲಿ ಭಾರತೀಯ ಚಿತ್ರರಂಗ ಇದೆ, ಸರ್ಕಾರ ಇದೆ. ಬೊಮ್ಮಾಯಿ ಅವರು ಅಣ್ಣನ ಸ್ಥಾನದಲ್ಲಿ ನಿಂತಿದ್ದಾರೆ. ನಮಗಾದಷ್ಟೇ ನೋವು ಅವರಿಗೂ ಆಗಿದೆ. ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ಬಂದು ನಾವು ನಿಮ್ಮ ತಮ್ಮ ಎಂದಾಗ ಖುಷಿ ಆಯ್ತು. ಅಪ್ಪುನ ಇವರಲ್ಲಿ, ನಿಮ್ಮಲ್ಲಿ (ಅಭಿಮಾನಿಗಳಲ್ಲಿ) ಕಾಣ್ತೀನಿ. ಅಪ್ಪು ಎಲ್ಲ ಕಡೆಗಳಲ್ಲೂ ಇದ್ದಾರೆ’ ಎಂದರು ಶಿವರಾಜ್​ಕುಮಾರ್.

‘ನಾನು ರಾಜಮೌಳಿ ದೊಡ್ಡ ಫ್ಯಾನ್​. ಜ್ಯೂ. ಎನ್​ಟಿಆರ್​ ಅವರ ಎಲ್ಲಾ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ರಾಮ್​ ಚರಣ್​, ಪವನ್​ ಕಲ್ಯಾಣ್​, ಚಿರಂಜೀವಿ, ಅಜಿತ್​, ವಿಜಯ್​ ಪ್ರತಿಯೊಬ್ಬರ ಸಿನಿಮಾನೂ ನಾನು ಥಿಯೇಟರ್​ನಲ್ಲೇ ನೋಡೋದು. ನನಗೆ ಮನೆಯಲ್ಲೇ ಶೋ ಹಾಕಿಸಿಕೊಂಡು ಸಿನಿಮಾ ನೋಡೋದು ಇಷ್ಟ ಇಲ್ಲ. ನಾನು ಅಭಿಮಾನಿ ತರಹ ಥಿಯೇಟರ್​ಗೆ ಹೋಗೆ ಸಿನಿಮಾ ನೋಡೋದು’ ಎಂದಿದ್ದಾರೆ ಶಿವರಾಜ್​ಕುಮಾರ್.

‘ಬಾಹುಬಲಿ ಸಿನಿಮಾ ಫಸ್ಟ್​ ಡೇ ನೋಡಿ ಅದ್ಭುತ ಸಿನಿಮಾ ತೆಗೆದಿದ್ದೀರಿ ಎಂದು ಕಾಲ್​ ಮಾಡಿ ಹೇಳಿದ್ದೆ. ನಮ್ಮ ಸಿನಿಮಾ ಬಗ್ಗೆ ಇಂಟರ್​ನ್ಯಾಷನಲ್​ ಲೆವೆಲ್​ಗೆ ಮಾತಾಡೋ ರೀತಿ ಮಾಡಿದ ಡೈರೆಕ್ಟರ್​ ಸಿಕ್ಕಿದಾರೆ. ಅವರು ಎಲ್ಲಿ ಕರೆದರೂ ಬರ್ತೀನಿ. ನಮ್ಮ ಚಿತ್ರರಂಗದ ಹೆಸರನ್ನು ಅಲ್ಲಿವರೆಗೆ ತೆಗೆದುಕೊಂಡು ಹೋಗಬೇಕು ಎಂದರೆ ಅದು ಸಣ್ಣ ಕೆಲಸವಲ್ಲ. ಎಲ್ಲ ಕಡೆ ವೈರತ್ವ ಇರುತ್ತೆ. ಆದರೆ, ಈಗ ರಾಮ್​ ಚರಣ್​-ಜ್ಯೂ.ಎನ್​ಟಿಆರ್​ಗೆ​ ಒಟ್ಟಿಗೆ ನಿಂತಿದಾರೆ. ನಮಗೆ ಇಂಡಸ್ಟ್ರಿಯೇ ಫ್ಯಾಮಿಲಿ. ‘ಆರ್​ಆರ್​ಆರ್​’ ಸಿನಿಮಾನ ಫಸ್ಟ್​ಡೇ, ಫಸ್ಟ್ ಶೋ ನೋಡ್ತೀನಿ. ಕನ್ನಡ ಶೋ ಜಾಸ್ತಿ ಹಾಕಿ’ ಎಂದು ಕೋರಿದರು ಶಿವಣ್ಣ. ‘ಪುಷ್ಪ’, ‘ರಾಧೆ ಶ್ಯಾಮ್​’ ಸಿನಿಮಾ ತೆರೆಗೆ ಬಂದಾಗ ಕನ್ನಡ ವರ್ಷನ್​ಗೆ​ ಹೆಚ್ಚು ಶೋ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಶಿವಣ್ಣ ಈ ಮನವಿ ಮಾಡಿದ್ದಾರೆ.

ಆರ್​ಆರ್​ಆರ್​ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಕಾರ್ಯಕ್ರಮವನ್ನು ಅನುಶ್ರೀ ನಡೆಸಿಕೊಟ್ಟರು. ಅನುಶ್ರೀ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು ಶಿವರಾಜ್​ಕುಮಾರ್. ‘ಅನುಶ್ರೀ ಇದ್ರೆ ಪಟಾಕಿ ತರ. ಅವರು ಆ್ಯಂಕರಿಂಗ್ ಅದ್ಭುತವಾಗಿ ಮಾಡ್ತಾರೆ. ಬಸವರಾಜ ಬೊಮ್ಮಾಯಿ ಸಿಂಪಲ್​ ಸಿಎಂ. ಅವರ ಪ್ರೀತಿಗೆ ನಾನು ಚಿರರುಣಿ’ ಎಂದರು ಅವರು.

‘ಜೇಮ್ಸ್’ ಬಗ್ಗೆ ಮಾತನಾಡಿದ ಶಿವರಾಜ್​ಕುಮಾರ್​, ‘ನನ್ನ ತಮ್ಮನಿಗೆ ಈ ರೀತಿ ವಾಯ್ಸ್​ ಕೊಡಬೇಕಾಯ್ತು. ಅದು ನನಗೆ ತುಂಬಾ ನೋವಾಯ್ತು. ಅಪ್ಪುಗೋಸ್ಕರ ವಾಯ್ಸ್ ಕೊಟ್ಟೆ. ಅದು ಇಷ್ಟ ಆಗಿದೆ ಎಂದುಕೊಂಡಿದ್ದೀನಿ. 25ಕ್ಕೆ ಮತ್ತೊಂದು ಹಬ್ಬ ಬರ್ತಿದೆ. ಎಲ್ಲರೂ ‘ಆರ್​ಆರ್​ಆರ್​’ ನೋಡಿ’ ಎಂದರು ಶಿವರಾಜ್​ಕುಮಾರ್.

ಇದನ್ನೂ ಓದಿ: ಅದ್ದೂರಿ ‘ಆರ್​ಆರ್​ಆರ್​’ ಪ್ರೀ-ರಿಲೀಸ್​ ಇವೆಂಟ್ ಲೈವ್ ನೋಡಲು ಇಲ್ಲಿ ಕ್ಲಿಕ್​ ಮಾಡಿ

‘ಪುನೀತ್​ ನಟನೆಯ ಜೇಮ್ಸ್​ ನೋಡಿದ್ರಾ?’; ಈ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ ಜ್ಯೂ.ಎನ್​ಟಿಆರ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ