‘ಪುನೀತ್​ ನಟನೆಯ ಜೇಮ್ಸ್​ ನೋಡಿದ್ರಾ?’; ಈ ಪ್ರಶ್ನೆಗೆ ಕನ್ನಡದಲ್ಲೇ ಉತ್ತರಿಸಿದ ಜ್ಯೂ.ಎನ್​ಟಿಆರ್​

TV9kannada Web Team

TV9kannada Web Team | Edited By: Rajesh Duggumane

Updated on: Mar 19, 2022 | 8:16 PM

ಪ್ರೀ-ರಿಲೀಸ್ ಇವೆಂಟ್​ಗೂ ದಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಈ ವೇಳೆ  ‘ಜೇಮ್ಸ್ ಸಿನಿಮಾ ನೋಡಿದ್ದೀರಾ’ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಜ್ಯೂ.ಎನ್​ಟಿಆರ್​ ಕನ್ನಡದಲ್ಲೇ ಉತ್ತರಿಸಿದ್ದಾರೆ.

ಪುನೀತ್​ ರಾಜ್​ಕುಮಾರ್ (Puneeth Rajkumar) ಹಾಗೂ ಜ್ಯೂ.ಎನ್​ಟಿಆರ್​ ನಡುವೆ ಒಳ್ಳೆಯ ಗೆಳೆತನ ಇತ್ತು. ಹೈದರಾಬಾದ್​ಗೆ ತೆರಳಿದಾಗ ಪುನೀತ್​ ಅವರು ಜ್ಯೂ.ಎನ್​ಟಿಆರ್​ ಅವರನ್ನು ಭೇಟಿ ಮಾಡುತ್ತಿದ್ದರು. ಅದೇ ರೀತಿ ಜ್ಯೂ.ಎನ್​ಟಿಆರ್​ ಬೆಂಗಳೂರಿಗೆ ಬಂದಾಗ ಅಪ್ಪು ಅವರನ್ನು ಮೀಟ್​ ಮಾಡುತ್ತಿದ್ದರು. ಈಗ ಪುನೀತ್​ ಅವರನ್ನು ಕಳೆದುಕೊಂಡಿರುವುದು ಜ್ಯೂ.ಎನ್​ಟಿಆರ್​ ಅವರಿಗೆ ನೋವು ತಂದಿದೆ. ಇದನ್ನು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಈಗ ಪುನೀತ್​ ಅವರನ್ನು ತಾರಕ್​ ಮತ್ತೆ ನೆನಪಿಸಿಕೊಂಡಿದ್ದಾರೆ. ಇಂದು ಚಿಕ್ಕಬಳ್ಳಾಪುರದಲ್ಲಿ ‘ಆರ್​ಆರ್​ಆರ್​’ (RRR Movie) ತಂಡ ಅದ್ದೂರಿಯಾಗಿ ಪ್ರೀ-ರಿಲೀಸ್​ ಇವೆಂಟ್ (RRR Pre-Release Event)​ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ನಿರ್ದೇಶಕರ ರಾಜಮೌಳಿ, ಜ್ಯೂ.ಎನ್​ಟಿಆರ್​ ಹಾಗೂ ರಾಮ್ ಚರಣ್​ ಆಗಮಿಸಿದ್ದಾರೆ. ಈ ಕಾರ್ಯಕ್ರಮಕ್ಕೂ ಮೊದಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಈ ವೇಳೆ  ‘ಜೇಮ್ಸ್ ಸಿನಿಮಾ ನೋಡಿದ್ದೀರಾ’ ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಜ್ಯೂ.ಎನ್​ಟಿಆರ್​ ಕನ್ನಡದಲ್ಲೇ ಉತ್ತರಿಸಿದ್ದಾರೆ.

ಇದನ್ನೂ ಓದಿ: ಹೆಲ್ಮೆಟ್​ ಜಾಗೃತಿ: ಪುನೀತ್​ ರಾಜ್​ಕುಮಾರ್​ ವಿಡಿಯೋ ನೋಡಿ ಪೊಲೀಸರ ಎದುರು ಅಶ್ವಿನಿ ಭಾವುಕ

‘ಲಕ್ಕಿ ಮ್ಯಾನ್​’ ಚಿತ್ರದಲ್ಲಿ ಪುನೀತ್​ ರಾಜ್​ಕುಮಾರ್ ಅಭಿಮಾನಿಗಳಿಗೆ ಇದೆ ಸರ್​ಪ್ರೈಸ್​; ಏನದು?

Follow us on

Click on your DTH Provider to Add TV9 Kannada