Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋರ್ಟ್ ನೀಡುವ ಆದೇಶಗಳನ್ನು ಎಲ್ಲ ಧರ್ಮದವರು ಪಾಲಿಸಲೇಬೇಕು ಎಂದರು ಸಿದ್ದರಾಮಯ್ಯ

ಕೋರ್ಟ್ ನೀಡುವ ಆದೇಶಗಳನ್ನು ಎಲ್ಲ ಧರ್ಮದವರು ಪಾಲಿಸಲೇಬೇಕು ಎಂದರು ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 19, 2022 | 10:04 PM

ನೀವು ಹಿಂದೂ ಅಗಿರಿ, ಇಲ್ಲವೇ ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಬೇರೆ ಯಾವುದೇ ಧರ್ಮದವರಾಗಿರಿ, ಕೋಮುವಾದ ಯಾವತ್ತೂ ಮಾಡಬಾರದು. ಎಲ್ಲ ದರ್ಮಗಳನ್ನು ಸಮಾನವಾಗಿ ಕಾಣಬೇಕು ಮತ್ತು ಗೌರವಿಸಬೇಕು, ಎಂದು ಸಿದ್ದರಾಮಯ್ಯ ಹೇಳಿದರು.

ಮಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (Siddaramaiah) ಹಿಂದುತ್ವದ ಬಗ್ಗೆ ಪ್ರಶ್ನೆ ಕೇಳಿದಾಗೆಲ್ಲ ಅವರು ನಮ್ಮದು ಸಾಫ್ಟ್ ಹಿಂದತ್ವವೂ (Soft Hindutva) ಅಲ್ಲ ಹಾರ್ಡ್ ಹಿಂದುತ್ವವೂ (Hard Hindutva) ಅಲ್ಲ, ನಾವು ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟುಕೊಂಡಿರುವವರು ಅಂತ ಹೇಳುತ್ತಾರೆ. ಶನಿವಾರ ಮಂಗಳೂರಲ್ಲಿ ಅವರು ಅದೇ ಮಾತನ್ನು ಪುನರಾವರ್ತಿಸಿದರು. ಫಾರ್ಸಿ, ಹಿಂದೂ, ಇಸ್ಲಾಂ, ಜೈನರು, ಕ್ರಿಶ್ಚಿಯನ್ ಮತ್ತು ಬೌದ್ಧ-ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣಬೇಕೆಂದು ಅಂತ ನಮ್ಮ ಸಂವಿಧಾನ ಹೇಳುತ್ತದೆ ಅದನ್ನು ನಾವು ಪಾಲಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಹಿಜಾಬ್ ವಿವಾದದ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳು ರಾಜ್ಯಾದಂತ ಬಂದ್ ಕರೆ ನೀಡಿದ್ದ ಕುರಿತು ಅವರನ್ನು ಕೇಳಿದಾಗ ಕೋರ್ಟ್ ಆದೇಶವನ್ನು-ಅದು ಹೈಕೋರ್ಟ್ ಅಗಿರಲಿ ಅಥವಾ ಸುಪ್ರೀಮ್ ಕೋರ್ಟ್, ಎಲ್ಲರೂ ಪಾಲಿಸಲೇಬೇಕು ಅಂತ ವಿರೋಧ ಪಕ್ಷದ ನಾಯಕ ಹೇಳಿದರು. ಆದೇಶದ ಬಗ್ಗೆ ಅಸಮಾಧಾನ ಇರುವವರು ಬಂದ್ ಆಚರಿಸಿದ್ದಾರೆ ಎಂದ ಅವರು ಹೇಳಿದರು.

ಕರಾವಳಿ ಭಾಗದಲ್ಲಿ ಮುಸಲ್ಮಾನರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರಿಂದ ಅವರ ಅಂಗಡಿಗಳಲ್ಲಿ ಹಿಂದೂ ಧರ್ಮೀಯರು ಏನನ್ನೂ ಖರೀದಿಸಬಾರದು ಎಂಬ ಸಂದೇಶಗಳು ಹಿಂದೂಗಳ ವಾಟ್ಟ್ಯಾಪ್ ಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಸಿದ್ದರಾಮಯ್ಯನವರನ್ನು ಕೇಳಿದಾಗ ಅವರು ಯಾರೂ ಕೋಮುವಾದ ಮಾಡಬಾರದು ಎಂದರು.

ನೀವು ಹಿಂದೂ ಅಗಿರಿ, ಇಲ್ಲವೇ ಮುಸ್ಲಿಂ, ಕ್ರಿಶ್ಚಿಯನ್ ಅಥವಾ ಬೇರೆ ಯಾವುದೇ ಧರ್ಮದವರಾಗಿರಿ, ಕೋಮುವಾದ ಯಾವತ್ತೂ ಮಾಡಬಾರದು. ಎಲ್ಲ ದರ್ಮಗಳನ್ನು ಸಮಾನವಾಗಿ ಕಾಣಬೇಕು ಮತ್ತು ಗೌರವಿಸಬೇಕು, ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:  ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು ತಾತ್ಕಾಲಿಕ ಹಿನ್ನಡೆ; ಇದನ್ನು ಎದುರಿಸಿ ಪ್ರಬಲ ರಾಜಕೀಯ ಶಕ್ತಿಯಾಗಿ ಎದ್ದು ಬರಲಿದೆ -ಸಿದ್ದರಾಮಯ್ಯ