AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾವಗಡ ಬಸ್ ದುರಂತ | ಪಳವಳ್ಳಿ ಕೆರೆ ಏರಿ ಮೇಲಿನ ಇಕ್ಕಟ್ಟಾದ ರಸ್ತೆಯನ್ನು ಸರ್ಕಾರ ಕೂಡಲೇ ಮುಚ್ಚಿಸಬೇಕು: ಮಡಿದವರ ಕುಟುಂಬಗಳು

ಪಾವಗಡ ಬಸ್ ದುರಂತ | ಪಳವಳ್ಳಿ ಕೆರೆ ಏರಿ ಮೇಲಿನ ಇಕ್ಕಟ್ಟಾದ ರಸ್ತೆಯನ್ನು ಸರ್ಕಾರ ಕೂಡಲೇ ಮುಚ್ಚಿಸಬೇಕು: ಮಡಿದವರ ಕುಟುಂಬಗಳು

TV9 Web
| Edited By: |

Updated on: Mar 19, 2022 | 8:02 PM

Share

ಕೆರೆ ಏರಿಯ ಮೇಲೆ ಒಂದು ಬಸ್ ಚಲಿಸುವಾಗ ಎದುರುಗಡೆಯಿಂದ ಮತ್ತೊಂದು ಬಸ್ ಬಂದರೆ ಅವು ಪಾಸ್ ಆಗುವುದು ಬಹಳ ಕಷ್ಟವಾಗುತ್ತದೆ ಎಂದು ಅವರು ಹೇಳುತ್ತಾರೆ. ಈ ರಸ್ತೆಯನ್ನು ಮುಚ್ಚಿಸುವುದು ಸರ್ಕಾರ ಮಾಡಬೇಕಿರುವ ಮೊದಲ ಕೆಲಸವಾಗಿದೆ ಎಂದು ಅವರು ಹೇಳುತ್ತಾರೆ.

ಶನಿವಾರ ಬೆಳಗ್ಗೆ ಪಾವವಡದಲ್ಲಿ ನಡೆದ ಬಸ್ ದುರಂತದಲ್ಲಿ (bus accident) ಮಡಿದವರರ ಕುಟುಂಬಗಳನ್ನು ಟಿವಿ9 ತುಮಕೂರು ವರದಿಗಾರ ಮಹೇಶ್ ಮಾತಾಡಿಸಿದ್ದಾರೆ. ನಿಮಗೆ ವಿಡಿಯೋನಲ್ಲಿ ಕಾಣುತ್ತಿರುವ ಯುವತಿಯ ಅಣ್ಣ ಕಲ್ಯಾಣ್ ಕುಮಾರ್ ಮೃತಪಟ್ಟಿರುವವರಲ್ಲಿ ಒಬ್ಬ. ಕಲ್ಯಾಣ್ (Kalyan) ಸಹ ಒಬ್ಬ ವಿದ್ಯಾರ್ಥಿಯಾಗಿದ್ದ, ತುಮಕೂರಿನ ಕಾಲೇಜೊಂದರಿಂದ ಬಿ. ಕಾಮ್ ಪದವಿ ಪಡೆದ ಬಳಿಕ ಪಾವಗಡದಲ್ಲಿ ಒಂದು ಕಂಪ್ಯೂಟರ್ ಕೋರ್ಸ್ (computer course) ಮಾಡುತ್ತಿದ್ದ. ಬಸ್ ಬಹಳ ರಷ್ ಆಗಿದ್ದರಿಂದ ಕಲ್ಯಾಣ ಬಸ್ಸಿನ ಬಾಗಿಲಲ್ಲಿ ನಿಂತಿದ್ದನಂತೆ. ಬಸ್ ಅಪಘಾತಕ್ಕೊಳಗಾದ ಪಳವಳ್ಳಿ ಕೆರೆ ಏರಿಯ ರಸ್ತೆ ಬಹಳ ಇಕ್ಕಟ್ಟಾಗಿದೆ ಎಂದು ಕಲ್ಯಾಣ ಚಿಕ್ಕಪ್ಪ ಹೇಳುತ್ತಿದ್ದಾರೆ.

ಕೆರೆ ಏರಿಯ ಮೇಲೆ ಒಂದು ಬಸ್ ಚಲಿಸುವಾಗ ಎದುರುಗಡೆಯಿಂದ ಮತ್ತೊಂದು ಬಸ್ ಬಂದರೆ ಅವು ಪಾಸ್ ಆಗುವುದು ಬಹಳ ಕಷ್ಟವಾಗುತ್ತದೆ ಎಂದು ಅವರು ಹೇಳುತ್ತಾರೆ. ಈ ರಸ್ತೆಯನ್ನು ಮುಚ್ಚಿಸುವುದು ಸರ್ಕಾರ ಮಾಡಬೇಕಿರುವ ಮೊದಲ ಕೆಲಸವಾಗಿದೆ ಎಂದು ಅವರು ಹೇಳುತ್ತಾರೆ.

ತಾಲ್ಲೂಕು ಆಸ್ಪತ್ರೆಯ ಮತ್ತೊಂದು ಭಾಗದಲ್ಲಿ ಇನ್ನೊಂದು ಕುಟುಂಬವೂ ಅಪಘಾತದಲ್ಲಿ ಸತ್ತ ಒಬ್ಬ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಕೊನೆಗೊಳ್ಳಲು ಕಾಯುತ್ತಿದೆ. ಅತ್ತು ಅತ್ತು ಬಸವಳಿದು ನೆಲದ ಮೇಲೆ ಮಲಗಿರುವ ಮಹಿಳೆಯ ಮಗ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಯುವಕನ ಹೆಸರು ಅಜಿತ್ ಕುಮಾರ್ ಮತ್ತು ಅವನು ಮಣಪ್ಪುರಂ ಹಣಕಾಸು ಕೆಲಸ ಮಾಡುತ್ತಿದ್ದನಂತೆ. ಕುಟುಂಬದ ಸದಸ್ಯನೊಬ್ಬ ಹೇಳುವ ಹಾಗೆ ಅಜಿತ್​ ನ ಹೊಟ್ಟೆ ಒಡೆದು ಕರಳುಗಳೆಲ್ಲ ಹೊರ ಬಿದ್ದಿದ್ದವಂತೆ!

ಇದನ್ನೂ ಓದಿ:   ಪಾವಗಡ ಬಸ್ ದುರಂತ: ಒಬ್ಬಳನ್ನು ಕಳೆದುಕೊಂಡು ಮತ್ತೊಬ್ಬಳು ಕಾಲು ಮುರಿದುಕೊಂಡಿರುವುದನ್ನು ಕಂಡು ಈ ತಾಯಿ ಗೋಳಾಡುತ್ತಿದ್ದಾಳೆ