Bahubali 3: ‘ಬಾಹುಬಲಿ 3’ ಬರಲಿದೆಯೇ? ಅಭಿಮಾನಿಗಳಿಗೆ ಅಚ್ಚರಿಯ​ ಮಾಹಿತಿ ನೀಡಿದ ನಿರ್ದೇಶಕ ರಾಜಮೌಳಿ

Prabhas | SS Rajamouli: ಕಳೆದ ಹಲವು ಸಮಯದಿಂದ ರಾಜಮೌಳಿ ನಿರ್ದೇಶನದಲ್ಲಿ ‘ಬಾಹುಬಲಿ 3’ ತಯಾರಾಗುವ ಬಗ್ಗೆ ಮಾಹಿತಿಗಳು ಹೊರಬರುತ್ತಲೇ ಇತ್ತು. ಇದೀಗ ನಿರ್ದೇಶಕರ ಕಡೆಯಿಂದ ಸರ್ಪ್ರೈಸ್​ ವಿಚಾರ ಬಂದಿದೆ. ಏನದು? ಇಲ್ಲಿದೆ ಮಾಹಿತಿ.

Bahubali 3: 'ಬಾಹುಬಲಿ 3' ಬರಲಿದೆಯೇ? ಅಭಿಮಾನಿಗಳಿಗೆ ಅಚ್ಚರಿಯ​ ಮಾಹಿತಿ ನೀಡಿದ ನಿರ್ದೇಶಕ ರಾಜಮೌಳಿ
‘ಬಾಹುಬಲಿ 3’ ಬಗ್ಗೆ ರಾಜಮೌಳಿ ಮಾತು
Follow us
TV9 Web
| Updated By: shivaprasad.hs

Updated on: Mar 15, 2022 | 8:16 AM

ಟಾಲಿವುಡ್​ ನಟ ಪ್ರಭಾಸ್​ಗೆ (Prabhas) ವಿಶ್ವಾದ್ಯಂತ ಜನಪ್ರಿಯತೆ ತಂದುಕೊಟ್ಟ ಚಿತ್ರ ‘ಬಾಹುಬಲಿ’. ಎರಡು ಭಾಗಗಳಾಗಿ ಬಂದ ಚಿತ್ರವು ದೊಡ್ಡ ಯಶಸ್ಸು ಗಳಿಸಿದ್ದಲ್ಲದೇ ಪ್ರಭಾಸ್​ಗೆ ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಬಿರುದು ತಂದುಕೊಟ್ಟಿತು. 2017ರ ಏಪ್ರಿಲ್​ನಲ್ಲಿ ತೆರೆಕಂಡ ಬಾಹುಬಲಿಯ ಎರಡನೇ ಭಾಗ ‘ಬಾಹುಬಲಿ 2: ದಿ ಕನ್ಕ್ಲೂಶನ್’ ಹೊಸ ಭಾಗಕ್ಕೆ ಮುನ್ನುಡಿ ಬರೆಯಲಿದೆಯೇ ಎಂಬ ಪ್ರಶ್ನೆಯನ್ನು ಆಗಲೇ ಹುಟ್ಟುಹಾಕಿತ್ತು. ಆದರೆ ಆಗಿನಿಂದಲೂ ನಿರ್ದೇಶಕ ರಾಜಮೌಳಿಯಾಗಲೀ (Rajamouli) ಅಥವಾ ನಾಯಕ ಪ್ರಭಾಸ್ ಆಗಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು ಕಡಿಮೆ. ಅಷ್ಟೇ ಅಲ್ಲದೇ, ‘ಬಾಹುಬಲಿ’ ಚಿತ್ರ ಮುಗಿದಿದೆ ಎಂಬರ್ಥದಲ್ಲಿ ರಾಜಮೌಳಿ ಮಾತನಾಡಿದ್ದರು. ಆ ಚಿತ್ರ ರಿಲೀಸ್ ಆಗಿ ಐದು ವರ್ಷವಾಗುತ್ತಾ ಬಂದಿದೆ. ಪ್ರಭಾಸ್ ನಟನೆಯ ಮತ್ತೆರಡು ಚಿತ್ರಗಳು ತೆರೆಕಂಡಿದೆ. ರಾಜಮೌಳಿ ನಿರ್ದೇಶನದ ಹೊಸ ಚಿತ್ರ ರಿಲೀಸ್​ಗೆ ಸಿದ್ಧವಾಗುತ್ತಿದೆ. ಈ ನಡುವೆ ಮತ್ತೊಮ್ಮೆ ‘ಬಾಹುಬಲಿ 3’ (Bahubali 3) ಬಗ್ಗೆ ಮಾತುಕತೆ ಪ್ರಾರಂಭವಾಗಿದೆ. ಆದರೆ ಈ ಬಾರಿ ವಿಶೇಷವೆಂದರೆ ಪ್ರಭಾಸ್ ಹಾಗೂ ರಾಜಮೌಳಿ ಕೂಡ ಪರೋಕ್ಷವಾಗಿ ಇದಕ್ಕೆ ದನಿಗೂಡಿಸಿದ್ದಾರೆ.

‘ರಾಧೆ ಶ್ಯಾಮ್’ ಪ್ರಚಾರದ ಸಂದರ್ಭದಲ್ಲಿ ಪ್ರಭಾಸ್​ಗೆ ‘ಬಾಹುಬಲಿ 3’ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಆಗ ಉತ್ತರಿಸಿದ್ದ ಪ್ರಭಾಸ್, ‘‘ನನಗೆ ಸ್ವಲ್ಪ ಸಮಯ ಬೇಕು. ಕೆಲ ಕಾಲದ ನಂತರ ಅದು ಸಾಧ್ಯವಾಗಬಹುದು’’ ಎಂದು ಉತ್ತರಿಸಿದ್ದರು. ನಂತರ ಮಾತನಾಡಿದ್ದ ಪ್ರಭಾಸ್, ‘‘ಎಲ್ಲಾ ಚಿತ್ರಗಳೂ ಬಾಹುಬಲಿಯಾಗುವುದಿಲ್ಲ. ಮ್ಯಾಜಿಕ್ ಒಮ್ಮೆ ಮಾತ್ರ ಆಗುತ್ತದೆ. ಆದರೆ ಬಾಹುಬಲಿ 3 ವಿಚಾರಕ್ಕೆ ಬಂದರೆ ರಾಜಮೌಳಿ ಅದನ್ನು ಮಾಡುತ್ತಾರೆ ಎಂದು ಭಾವಿಸುತ್ತೇನೆ’’ ಎಂದು ಹೇಳಿ ನಕ್ಕಿದ್ದರು. ಅಲ್ಲಿಂದ ‘ಬಾಹುಬಲಿ 3’ ಬಗ್ಗೆ ಚರ್ಚೆ ಜೋರಾಗಿತ್ತು.

‘ಬಾಹುಬಲಿ 3’ ಬಗ್ಗೆ ರಾಜಮೌಳಿ ಹಂಚಿಕೊಂಡ್ರು ಅಚ್ಚರಿಯ ವಿಚಾರ!

‘ಬಾಹುಬಲಿ’ಯಲ್ಲಿ ಅಮರೇಂದ್ರ ಬಾಹುಬಲಿಯನ್ನು, ಮಾಹಿಷ್ಮತಿ ಸಾಮ್ರಾಜ್ಯವನ್ನು ಕಟ್ಟಿಕೊಟ್ಟ ರಾಜಮೌಳಿ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ‘ಬಾಹುಬಲಿ 3’ ಬಗ್ಗೆ ಮಾತನಾಡಿದ್ದಾರೆ. ‘ಬಾಹುಬಲಿ’ ಸೀಕ್ವೆಲ್ ಬರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಖಂಡಿತ ನಿರೀಕ್ಷಿಸಬಹುದು’’ ಎಂದು ಉತ್ತರಿಸಿದ್ದಾರೆ.

‘ಬಾಹುಬಲಿ 3’ ಯಾವುದರ ಸುತ್ತ ನಡೆಯಲಿದೆ ಎಂಬುದರ ಸುಳಿವನ್ನೂ ಬಿಟ್ಟುಕೊಟ್ಟಿರುವ ರಾಜಮೌಳಿ, ಈ ಬಾರಿ ‘ಬಾಹುಬಲಿ’ ಸುತ್ತ ನಡೆಯುವ ಕಥಾನಕಗಳನ್ನು ತೋರಿಸಲಿದ್ದೇವೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ನಿರ್ಮಾಪಕ ಶೋಭು ಯರ್ಲಗುಡ್ಡ ಚಿತ್ರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದೂ ಹೊಸ ಮಾಹಿತಿ ನೀಡಿದ್ದಾರೆ ರಾಜಮೌಳಿ.

ಚಿತ್ರದ ಕತೆ ಹಾಗೂ ಇತರ ಅಂಶಗಳತ್ತ ಕೆಲಸಗಳು ನಿಧಾನವಾಗಿ ನಡೆಯುತ್ತಿವೆ ಎಂದಿರುವ ರಾಜಮೌಳಿ, ಇದು ಸಮಯ ತೆಗೆದುಕೊಳ್ಳಬಹುದು ಎಂದಿದ್ದಾರೆ. ಆದರೆ ಬಾಹುಬಲಿ ಸಾಮ್ರಾಜ್ಯದಿಂದ ಒಂದಷ್ಟು ಕುತೂಹಲಕಾರಿ ವಿಚಾರಗಳು ಹೊರಬರಲಿದೆ ಎಂದೂ ಅವರು ಹೇಳಿದ್ದಾರೆ. ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದು, ಮತ್ತಷ್ಟು ಮಾಹಿತಿಗೆ ಕಾದಿದ್ದಾರೆ.

ಪ್ರಭಾಸ್ ಅಭಿಮಾನಿ ಖಾತೆಗಳಲ್ಲಿ ಹಂಚಿಕೆಯಾಗುತ್ತಿರುವ ರಾಜಮೌಳಿ ಮಾತುಕತೆಯ ವಿಡಿಯೋ:

ಪ್ರಭಾಸ್​ ‘ಬಾಹುಬಲಿ’ ನಂತರ ದೊಡ್ಡ ಗೆಲುವನ್ನು ಕಂಡಿಲ್ಲ. ಅವರ ಅಭಿಮಾನಿಗಳು ಈಗ ‘ಸಲಾರ್’ ಚಿತ್ರಕ್ಕೆ ಕಾಯುತ್ತಿದ್ದಾರೆ. ಅದರಲ್ಲಾದರೂ ನೆಚ್ಚಿನ ನಟ ಸಂಪೂರ್ಣ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಅವರದ್ದು. ಇದೀಗ ‘ಬಾಹುಬಲಿ 3’ ಬಗ್ಗೆ ಸಮಾಚಾರ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ.

ಇದನ್ನೂ ಓದಿ:

‘ಜೇಮ್ಸ್​’ ಬಿಡುಗಡೆಗೆ ಕೌಂಟ್​ಡೌನ್​: ವಿದೇಶದಲ್ಲೂ ಕಾರ್​ ರ‍್ಯಾಲಿ ಮಾಡಿ, ಪಟಾಕಿ ಹೊಡೆಯಲಿರುವ ಫ್ಯಾನ್ಸ್​

ಚಿಕ್ಕ ವಯಸ್ಸಿನಲ್ಲೇ ಕಂಗನಾಗೆ ಗೊತ್ತಾಗಿತ್ತು ಮುಂದಿನ ಭವಿಷ್ಯ; ಅಚ್ಚರಿ ವಿಚಾರ ಬಿಚ್ಚಿಟ್ಟ ಪ್ರಭಾಸ್

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ