Akshay Kumar: ‘ರಾಮ್​ ಸೇತು’ ಚಿತ್ರದಿಂದಲೂ ಅಕ್ಷಯ್​ ಕುಮಾರ್​​ಗೆ ಗೆಲುವು ಸಿಗೋದು ಡೌಟು?

Ram Setu: ‘ರಾಮ್​ ಸೇತು’ ಚಿತ್ರಕ್ಕೆ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಓಪನ್​ ಮಾಡಲಾಯಿತು. ಆದರೆ ಜನರು ಟಿಕೆಟ್​ ಬುಕ್​ ಮಾಡುವಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾರೆ.

Akshay Kumar: ‘ರಾಮ್​ ಸೇತು’ ಚಿತ್ರದಿಂದಲೂ ಅಕ್ಷಯ್​ ಕುಮಾರ್​​ಗೆ ಗೆಲುವು ಸಿಗೋದು ಡೌಟು?
ಅಕ್ಷಯ್ ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Oct 24, 2022 | 3:38 PM

ಬಾಲಿವುಡ್​ (Bollywood) ಪಾಲಿಗೆ ಸದ್ಯಕ್ಕಂತೂ ಆಶಾದಾಯಕ ವಾತಾವರಣ ಕಾಣುತ್ತಿಲ್ಲ. ತೆರೆಕಂಡ ಸಿನಿಮಾಗಳಲ್ಲಿ ಬಹುಪಾಲು ಚಿತ್ರಗಳು ಸೋಲುತ್ತಿವೆ. ಜನರು ಹಿಂದಿ ಸಿನಿಮಾಗಿಂತಲೂ ದಕ್ಷಿಣ ಭಾರತದ ಭಾಷೆಗಳ ಚಿತ್ರಗಳ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ವರ್ಷವಂತೂ ಅಕ್ಷಯ್​ ಕುಮಾರ್​, ಆಮಿರ್​ ಖಾನ್​ ಅವರಂತಹ ಸ್ಟಾರ್​ ಕಲಾವಿದರು ಕೂಡ ಸೋತು ಸೊರಗಿದ್ದಾರೆ. ಅಕ್ಷಯ್ ಕುಮಾರ್​ (Akshay Kumar) ಅವರಿಗೆ ಬ್ಯಾಕ್​ ಟು ಬ್ಯಾಕ್​ ಸೋಲು ಎದುರಾಗಿದೆ. ಈಗ ಅವರು ‘ರಾಮ್​ ಸೇತು’ (Ram Setu) ಚಿತ್ರದ ಮೂಲಕವಾದರೂ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದಾರೆ. ಆದರೆ ಚಿತ್ರದ ಅಡ್ವಾನ್ಸ್​ ಬುಕಿಂಗ್​ ಲೆಕ್ಕಾಚಾರ ನೋಡಿದರೆ ಯಾಕೋ ಮತ್ತೆ ಅವರಿಗೆ ಪ್ರೇಕ್ಷಕರು ಕೈ ಕೊಡುವ ಸಂಭವ ಕಾಣುತ್ತಿದೆ.

ಹಿಂದಿ ಚಿತ್ರರಂಗದಲ್ಲಿ ಅಕ್ಷಯ್​ ಕುಮಾರ್​ ಅವರು ಸೂಪರ್​ ಸ್ಟಾರ್​. ಅವರ ಸಿನಿಮಾಗೆ ಹಣ ಹಾಕಿದರೆ ಮಿನಿಮಮ್​ ಲಾಭ ಗ್ಯಾರಂಟಿ ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೆ ಈ ವರ್ಷ ಅದು ಸುಳ್ಳಾಯಿತು. ‘ಸಾಮ್ರಾಟ್​ ಪೃಥ್ವಿರಾಜ್​’, ‘ರಕ್ಷಾ ಬಂಧನ್​’, ‘ಬಚ್ಚನ್​ ಪಾಂಡೆ’ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣಲಿಲ್ಲ. ಹಾಗಾಗಿ ಅವರ ಚಾರ್ಮ್​ ನಿಧಾನಕ್ಕೆ ಕಮ್ಮಿ ಆಗಿದೆ. ಸಾಲು ಸಾಲು ಸೋಲಿನ ಬೆನ್ನಲ್ಲೇ ಅವರ ‘ರಾಮ್​ ಸೇತು’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಟ್ರೇಲರ್​ ಮೂಲಕ ‘ರಾಮ್​ ಸೇತು’ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಅಕ್ಟೋಬರ್​ 25ರಂದು ಈ ಸಿನಿಮಾ ರಿಲೀಸ್​ ಆಗಲಿದೆ. ಇತ್ತೀಚೆಗೆ ಇದರ ಅಡ್ವಾನ್ಸ್​ ಬುಕಿಂಗ್​ ಓಪನ್​ ಮಾಡಲಾಯಿತು. ಆದರೆ ಜನರು ಟಿಕೆಟ್​ ಬುಕ್​ ಮಾಡುವಲ್ಲಿ ನಿರಾಸಕ್ತಿ ತೋರಿಸುತ್ತಿದ್ದಾರೆ. ಸೋಮವಾರ (ಅ.24) ಬೆಳಗ್ಗೆವರೆಗೂ ಆಗಿರುವ ಬುಕಿಂಗ್​​ ಗಮನಿಸಿದರೆ ಈ ಸಿನಿಮಾ ಮೊದಲ ದಿನ ಗಳಿಸುವುದು 1 ಕೋಟಿ ರೂಪಾಯಿ ಮಾತ್ರ. ಕೊನೇ ಕ್ಷಣದವರೆಗೂ ಇನ್ನೂ ಹೆಚ್ಚಿನ ಬುಕಿಂಗ್​ ಆದರೂ ಕೂಡ ಹೆಚ್ಚೆಂದರೆ 2 ಕೋಟಿ ರೂಪಾಯಿ ಕಲೆಕ್ಷನ್​ ಆಗಬಹುದು ಅಷ್ಟೇ ಎಂದು ಬಾಕ್ಸ್​ ಆಫೀಸ್​ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ
Image
Akshay Kumar: ಸತತ ಸೋಲು ಕಂಡರೂ ಅಕ್ಷಯ್​ ಕುಮಾರ್​ ನಂ.1; ಇದು ಯಾವ ಲೆಕ್ಕಾಚಾರ?
Image
Cuttputlli: ಒಟಿಟಿಯಲ್ಲಿ ಅಕ್ಷಯ್​ ಕುಮಾರ್​ ಚಿತ್ರಕ್ಕೆ ಗೆಲುವು; ಪೂರ್ತಿ ಬದಲಾಗುತ್ತಾ ಸ್ಟಾರ್​ ನಟನ ಭವಿಷ್ಯದ ಪ್ಲ್ಯಾನ್​?
Image
Akshay Kumar: ವರದಕ್ಷಿಣೆ ಪಿಡುಗಿಗೆ ಅಕ್ಷಯ್​ ಕುಮಾರ್ ಪ್ರೋತ್ಸಾಹ? ಸರ್ಕಾರಿ ಜಾಹೀರಾತಿನಲ್ಲಿ ದೊಡ್ಡ ಎಡವಟ್ಟು
Image
Cuttputlli: ತಪ್ಪು ತಿದ್ದಿಕೊಂಡ ಅಕ್ಷಯ್​ ಕುಮಾರ್​; ಒಂದು ನಿರ್ಧಾರದಿಂದ ಆಯ್ತು ನೂರಾರು ಕೋಟಿ ರೂ. ಲಾಭ

ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಅಕ್ಷಯ್​ ಕುಮಾರ್​ ಅವರ ಸಿನಿಮಾಗಳು ತಯಾರಾಗುತ್ತವೆ. ನಿರ್ಮಾಪಕರಿಗೆ ಲಾಭ ಆಗಬೇಕು ಎಂದರೆ ಕನಿಷ್ಠ 100 ಕೋಟಿ ಮೇಲಾದರೂ ಕಲೆಕ್ಷನ್​ ಆಗಬೇಕು. ಆದರೆ ‘ರಾಮ್​ ಸೇತು’ ಸಿನಿಮಾ ಅಷ್ಟು ಕಲೆಕ್ಷನ್​ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ದೀಪಾವಳಿ ಹಬ್ಬದ ಸಮಯದಲ್ಲೂ ಜನರು ಅಡ್ವಾನ್ಸ್​ ಬುಕಿಂಗ್​ಗೆ ನೀರಸ ಪ್ರತಿಕ್ರಿಯೆ ತೋರಿಸುತ್ತಿರುವುದು ಅಚ್ಚರಿ ಉಂಟುಮಾಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ