Cuttputlli: ಒಟಿಟಿಯಲ್ಲಿ ಅಕ್ಷಯ್​ ಕುಮಾರ್​ ಚಿತ್ರಕ್ಕೆ ಗೆಲುವು; ಪೂರ್ತಿ ಬದಲಾಗುತ್ತಾ ಸ್ಟಾರ್​ ನಟನ ಭವಿಷ್ಯದ ಪ್ಲ್ಯಾನ್​?

Akshay Kumar: ಚಿತ್ರಮಂದಿರಕ್ಕಿಂತಲೂ ಒಟಿಟಿಯಲ್ಲಿ ಅಕ್ಷಯ್​ ಕುಮಾರ್​ಗೆ ಹೆಚ್ಚು ಯಶಸ್ಸು ಸಿಗುತ್ತಿದೆ. ಅವರ ಮುಂಬರುವ ಸಿನಿಮಾಗಳು ಕೂಡ ಒಟಿಟಿ ಹಾದಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ.

Cuttputlli: ಒಟಿಟಿಯಲ್ಲಿ ಅಕ್ಷಯ್​ ಕುಮಾರ್​ ಚಿತ್ರಕ್ಕೆ ಗೆಲುವು; ಪೂರ್ತಿ ಬದಲಾಗುತ್ತಾ ಸ್ಟಾರ್​ ನಟನ ಭವಿಷ್ಯದ ಪ್ಲ್ಯಾನ್​?
ಅಕ್ಷಯ್ ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 15, 2022 | 8:25 AM

ಸಿನಿಮಾ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಚಿತ್ರಮಂದಿರದ ಬದಲು ಒಟಿಟಿಯಲ್ಲಿ ಮನರಂಜನೆ ಬಯಸುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಕೆಲವು ಸಿನಿಮಾಗಳನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್​ ಮಾಡಲಾಗುತ್ತದೆ. ಚಿತ್ರಮಂದಿರದಲ್ಲಿ ಸೋತ ಸಿನಿಮಾಗಳು ಒಟಿಟಿಯಲ್ಲಿ ಸೂಪರ್​ ಹಿಟ್​ ಆದ ಉದಾಹರಣೆ ಕೂಡ ಇದೆ. ಅಕ್ಷಯ್​ ಕುಮಾರ್ (Akshay Kumar) ಅವರಿಗೆ ಈ ವರ್ಷ ಚಿತ್ರಮಂದಿರದಲ್ಲಿ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ಆದರೆ ಒಟಿಟಿ ಪ್ಲಾಟ್​ಫಾರ್ಮ್ ಅವರ ಕೈ ಹಿಡಿದಿದೆ. ಇತ್ತೀಚೆಗೆ ಅವರು ನಟಿಸಿದ ‘ಕಟ್​ಪುಟ್ಲಿ’ (Cuttputlli) ಸಿನಿಮಾ ನೇರವಾಗಿ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ ಮೂಲಕ ರಿಲೀಸ್​ ಆಯಿತು. ಆ ಚಿತ್ರವನ್ನು ಜನರು ಕೋಟ್ಯಂತರ ಬಾರಿ ವೀಕ್ಷಿಸಿದ್ದಾರೆ. ಆ ಮೂಲಕ ಅಕ್ಷಯ್​ ಕುಮಾರ್​ ಅವರ ಚಿತ್ರಗಳಿಗೆ ಒಟಿಟಿಯಲ್ಲಿ (OTT Platform) ದೊಡ್ಡ ಮಟ್ಟದ ಬೇಡಿಕೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಅಕ್ಷಯ್​ ಕುಮಾರ್​ ಸಿನಿಮಾಗಳು ಮಿನಿಮಮ್​ ಬಿಸ್ನೆಸ್​ ಮಾಡುತ್ತವೆ ಎಂಬುದು ನಂಬಿಕೆ. ಹಾಗಿದ್ದರೂ ಕೂಡ ಚಿತ್ರಮಂದಿರದಲ್ಲಿ ರಿಲೀಸ್​ ಆದ ‘ಬಚ್ಚನ್​ ಪಾಂಡೆ’, ‘ಸಾಮ್ರಾಟ್​ ಪೃಥ್ವಿರಾಜ್​’ ಹಾಗೂ ‘ರಕ್ಷಾ ಬಂಧನ್​’ ಚಿತ್ರಗಳು ಹೀನಾಯವಾಗಿ ಸೋತಿದ್ದು ಬೇಸರದ ಸಂಗತಿ. ಹಾಗಾಗಿ ಚಿತ್ರಮಂದಿರದಲ್ಲಿ ರಿಲೀಸ್​ ಮಾಡಿ ದುಡ್ಡು ಕಳೆದುಕೊಳ್ಳುವುದು ಬೇಡ ಎಂಬ ಉದ್ದೇಶದಿಂದ ‘ಕಟ್​ಪುಟ್ಲಿ’ ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲಾಯಿತು. ಈ ಪ್ಲ್ಯಾನ್​ನಿಂದ ಅಕ್ಷಯ್​ ಕುಮಾರ್​ಗೆ ಗೆಲುವು ಸಿಕ್ಕಿದೆ.

ಅಕ್ಷಯ್​ ಕುಮಾರ್​ ಅವರು ಸಿನಿಮಾ ಮಾಡುವ ಶೈಲಿಯ ಬಗ್ಗೆ ಅನೇಕರಿಗೆ ತಕರಾರು ಇದೆ. ಅವರು ತುಂಬ ಗಡಿಬಿಡಿಯಲ್ಲಿ ಸಿನಿಮಾ ಕೆಲಸಗಳನ್ನು ಮುಗಿಸುತ್ತಾರೆ. ವರ್ಷಕ್ಕೆ ಮೂರು, ನಾಲ್ಕು ಸಿನಿಮಾ ಮಾಡಬೇಕು ಎಂಬ ಹಪಾಹಪಿ ಅವರಿಗೆ ಇದೆ. ಇದರಿಂದ ಚಿತ್ರದ ಗುಣಮಟ್ಟ ಹಾಳಾಗುತ್ತದೆ ಎಂದು ಅನೇಕರು ಟೀಕಿಸುತ್ತಿದ್ದಾರೆ. ಅದೇನೇ ಇದ್ದರೂ ಅವರಿಗೆ ಇರುವ ಡಿಮ್ಯಾಂಡ್​ ಕಿಂಚಿತ್ತೂ ಕಡಿಮೆ ಆಗಿಲ್ಲ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ
Image
Akshay Kumar: ವರದಕ್ಷಿಣೆ ಪಿಡುಗಿಗೆ ಅಕ್ಷಯ್​ ಕುಮಾರ್ ಪ್ರೋತ್ಸಾಹ? ಸರ್ಕಾರಿ ಜಾಹೀರಾತಿನಲ್ಲಿ ದೊಡ್ಡ ಎಡವಟ್ಟು
Image
Cuttputlli: ತಪ್ಪು ತಿದ್ದಿಕೊಂಡ ಅಕ್ಷಯ್​ ಕುಮಾರ್​; ಒಂದು ನಿರ್ಧಾರದಿಂದ ಆಯ್ತು ನೂರಾರು ಕೋಟಿ ರೂ. ಲಾಭ
Image
ಅಕ್ಷಯ್​ ಕುಮಾರ್​ಗೆ 3ನೇ ಸೋಲು; ಭಾರತ ಬಿಟ್ಟು ಕೆನಡಾಗೆ ಪಲಾಯನ ಮಾಡುವ ಪ್ಲ್ಯಾನ್​ ನೆನಪಿಸಿದ ನೆಟ್ಟಿಗರು
Image
Akshay Kumar: ಸೋದರಿಯನ್ನು ನೆನೆದು ಎಲ್ಲರ ಎದುರು ಕಣ್ಣೀರು ಹಾಕಿದ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​

ಚಿತ್ರಮಂದಿರಕ್ಕಿಂತಲೂ ಒಟಿಟಿಯಲ್ಲಿ ಅಕ್ಷಯ್​ ಕುಮಾರ್​ಗೆ ಹೆಚ್ಚು ಯಶಸ್ಸು ಸಿಕ್ಕಿರುವುದರಿಂದ ಅವರ ಮುಂಬರುವ ಸಿನಿಮಾಗಳು ಕೂಡ ಒಟಿಟಿ ಹಾದಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಭವಿಷ್ಯದ ಪ್ಲ್ಯಾನ್​ನಲ್ಲಿ ಅಕ್ಷಯ್​ ಕುಮಾರ್​ ಅವರು ದೊಡ್ಡ ಬದಲಾವಣೆ ಮಾಡಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ‘ರಾಮ್​ ಸೇತು’, ‘ಕ್ಯಾಪ್ಸೂಲ್​ ಗಿಲ್​’, ‘ಓಹ್​ ಮೈ ಗಾಡ್​ 2’, ‘ಗೋರ್ಖಾ’, ‘ಸೂರರೈ ಪೋಟ್ರು’ ಚಿತ್ರದ ರಿಮೇಕ್​ ಸೇರಿದಂತೆ ಹಲವು ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್