BBK: ‘ಪರೋಕ್ಷವಾಗಿ ರಾಕಿ ಎಚ್ಚರಿಕೆ ಕೊಟ್ಟಿದಾರೆ, ಆದ್ರೆ ನಿಮಗೆ ಗೊತ್ತಾಗಿಲ್ಲ ಅಷ್ಟೇ’: ಲೋಕೇಶ್
Bigg Boss Kannada OTT: ಕೊನೇ ಸಮಯದಲ್ಲಿ ಅತಿಥಿಯಾಗಿ ಲೋಕೇಶ್ ಅವರು ದೊಡ್ಮನೆ ಪ್ರವೇಶಿಸಿದ್ದಾರೆ. ರಾಕೇಶ್ ಅಡಿಗ ಅವರ ಆಟದ ವೈಖರಿಯನ್ನು ಲೋಕೇಶ್ ವಿವರಿಸಿದ್ದಾರೆ.
ಆರು ವಾರಗಳ ಕಾಲ ನಡೆದುಕೊಂಡ ಬಂದ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಶೋ ಈಗ ಅಂತ್ಯವಾಗುವ ಸಮಯ ಬಂದಿದೆ. ಈ ವೀಕೆಂಡ್ನಲ್ಲಿ ಇದರ ಫಿನಾಲೆ ನಡೆಯಲಿದೆ. ಶೋ ಆರಂಭದಲ್ಲಿ ಸ್ಪರ್ಧಿಯಾಗಿ ಬಂದಿದ್ದ ಲೋಕೇಶ್ ಅವರು ಅನಿವಾರ್ಯ ಕಾರಣದಿಂದ ಆಟ ಬಿಟ್ಟು ಮನೆಯಿಂದ ಹೊರಹೋಗಬೇಕಾಯಿತು. ಈಗ ಅವರು ಮತ್ತೆ ಅತಿಥಿಯಾಗಿ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ. ಹೊರಗಿನಿಂದ ತಾವು ನೋಡಿದ ಸಂಗತಿಗಳನ್ನು ಅವರು ಎಲ್ಲ ಸ್ಪರ್ಧಿಗಳ ಜೊತೆ ಹಂಚಿಕೊಂಡಿದ್ದಾರೆ. ರಾಕೇಶ್ ಅಡಿಗ (Rakesh Adiga) ಅವರ ಆಟದ ವೈಖರಿಯನ್ನು ಲೋಕೇಶ್ ವಿವರಿಸಿದ್ದಾರೆ. ‘ನಿಮ್ಮೆಲ್ಲರಿಗೂ ರಾಕೇಶ್ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ ನಿಮಗೆ ಯಾರಿಗೂ ಅದು ಗೊತ್ತಾಗಿಲ್ಲ’ ಎಂದು ಲೋಕೇಶ್ ಹೇಳಿದ್ದಾರೆ. ಫಿನಾಲೆ ವಾರದಲ್ಲಿ ಸೋನು ಶ್ರೀನಿವಾಸ್ ಗೌಡ, ಸೋಮಣ್ಣ ಮಾಚಿಮಾಡ, ಜಶ್ವಂತ್ ಬೋಪಣ್ಣ, ಆರ್ಯವರ್ಧನ್ ಗುರೂಜಿ (Aryavardhan Guruji), ಜಯಶ್ರೀ ಆರಾಧ್ಯ, ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ರೂಪೇಶ್ ಶೆಟ್ಟಿ ನಡುವೆ ಹಣಾಹಣಿ ನಡೆಯುತ್ತಿದೆ.