ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಅವನಿಂದ ಪ್ರಮಾದ ನಡೆದಿದ್ದರೆ ಲೋಕಾಯುಕ್ತ ತನಿಖೆಗೆ ಒಳಗಾಗಬೇಕು: ಬಸನಗೌಡ ಯತ್ನಾಳ್

ವ್ಯಕ್ತಿ ಎಷ್ಟೇ ಪ್ರಭಾವಿಯಾಗಿದ್ದರೂ ಅವನಿಂದ ಪ್ರಮಾದ ನಡೆದಿದ್ದರೆ ಲೋಕಾಯುಕ್ತ ತನಿಖೆಗೆ ಒಳಗಾಗಬೇಕು: ಬಸನಗೌಡ ಯತ್ನಾಳ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 15, 2022 | 12:40 PM

ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ, ಪ್ರಭಾವಿಯಾಗಿರಲಿ ಮತ್ತು ವರ್ಚಸ್ವೀಯಾಗಿರಲಿ ಅವನು ತಪ್ಪೆಸಗಿದ್ದರೆ ಲೋಕಾಯುಕ್ತ ತನಿಖೆಗೆ ಒಳಪಡಬೇಕು ಎಂದು ಯತ್ನಾಳ್ ಹೇಳಿದರು.

ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಅವರು ಗುರುವಾರ ಬೆಂಗಳೂರಲ್ಲಿ ವಿಧಾನ ಮಂಡಲದ ಕಾರ್ಯಕಲಾಪಗಳಲ್ಲಿ ಭಾಗವಹಿಸಲು ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತಾಡಿದರು. ರಾಜಾ ಹುಲಿ ರಾಜಾಹುಲಿ ಅಂತ ಕರೆಯುವುದನ್ನು ಛೇಡಿಸುತ್ತಾ ಮಾತು ಆರಂಭಿಸಿದ ಯತ್ನಾಳ್ ಲೋಕಾಯುಕ್ತಕ್ಕೆ (Lokayukta) ಸಂಪೂರ್ಣ ಅಧಿಕಾರ ನೀಡುವ ಹೈಕೋರ್ಟ್ (High Court) ನಿರ್ಣಯವನ್ನು ಸ್ವಾಗತಿಸಿದರು. ವ್ಯಕ್ತಿ ಎಷ್ಟೇ ದೊಡ್ಡವನಾಗಿರಲಿ, ಪ್ರಭಾವಿಯಾಗಿರಲಿ ಮತ್ತು ವರ್ಚಸ್ವೀಯಾಗಿರಲಿ ಅವನು ತಪ್ಪೆಸಗಿದ್ದರೆ ಲೋಕಾಯುಕ್ತ ತನಿಖೆಗೆ ಒಳಪಡಬೇಕು ಎಂದು ಯತ್ನಾಳ್ ಹೇಳಿದರು.