AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ ಸಿನಿಮಾದಲ್ಲಿ ಸೋಮಣ್ಣ ಹೀರೋ, ಸೋನು ಹೀರೋಯಿನ್​, ರಾಕೇಶ್​ ವಿಲನ್​: ಕಾಮಿಡಿ ಯಾರು?

Bigg Boss Kannada OTT: ಬಿಗ್​ ಬಾಸ್​ನಲ್ಲಿ ಆರ್ಯವರ್ಧನ್​ ಗುರೂಜಿ ಮಾತನಾಡುವಾಗ ಸಖತ್​ ಫನ್​ ಇರುತ್ತದೆ. ಕಿಚ್ಚ ಸುದೀಪ್​ ಕೇಳುವ ಪ್ರಶ್ನೆಗಳಿಗೆ ಅವರು ತಮ್ಮದೇ ರೀತಿಯಲ್ಲಿ ಉತ್ತರ ನೀಡುತ್ತಾರೆ.

ಬಿಗ್ ಬಾಸ್​ ಸಿನಿಮಾದಲ್ಲಿ ಸೋಮಣ್ಣ ಹೀರೋ, ಸೋನು ಹೀರೋಯಿನ್​, ರಾಕೇಶ್​ ವಿಲನ್​: ಕಾಮಿಡಿ ಯಾರು?
ಗುರೂಜಿ, ಸೋಮಣ್ಣ, ಸೋನು, ರಾಕೇಶ್​
TV9 Web
| Edited By: |

Updated on:Sep 05, 2022 | 6:48 PM

Share

ವೂಟ್​ ಸೆಲೆಕ್ಟ್​ನಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಶೋ ಮುಗಿಯಲು ಇನ್ನು ಎರಡೇ ವಾರಗಳು ಬಾಕಿ ಇವೆ. ಈಗಾಗಲೇ ನಾಲ್ಕು ವಾರಗಳು ಕಳೆದಿವೆ. ಆರ್ಯವರ್ಧನ್​ ಗುರೂಜಿ (Aryavardhan Guruji), ಜಯಶ್ರೀ ಆರಾಧ್ಯ, ಸೋನು ಶ್ರೀನಿವಾಸ್​ ಗೌಡ (Sonu Srinivas Gowda), ರಾಕೇಶ್​ ಅಡಿಗ, ರೂಪೇಶ್​ ಶೆಟ್ಟಿ, ಸಾನ್ಯಾ ಅಯ್ಯರ್​, ಸೋಮಣ್ಣ ಮಾಚಿಮಾಡ (Somanna Machimada), ನಂದಿನಿ, ಜಶ್ವಂತ್​ ಆಟ ಮುಂದುವರಿಸಿದ್ದಾರೆ. ಎಲ್ಲರೂ ಇಷ್ಟು ದಿನಗಳ ಕಾಲ ಟಫ್​ ಸ್ಪರ್ಧೆ ನೀಡಿ ತಮ್ಮ ಸ್ಥಾನ ಉಳಿಸಿಕೊಂಡಿರುವುದು ಸುಲಭದ ಮಾತಲ್ಲ. ಪ್ರತಿ ವಾರದಂತೆ ನಾಲ್ಕನೇ ವಾರ ಕೂಡ ಕಿಚ್ಚ ಸುದೀಪ್​ ಅವರು ‘ಸೂಪರ್​ ಸಂಡೇ ವಿಥ್​ ಸುದೀಪ’ ಎಪಿಸೋಡ್​ ನಡೆಸಿಕೊಟ್ಟಿದ್ದಾರೆ. ಈ ವೇಳೆ ಸ್ಪರ್ಧಿಗಳ ಜೊತೆ ಅವರು ನಡೆಸಿದ ಮಾತುಕತೆ ಫನ್ನಿಯಾಗಿತ್ತು.

ಸುದೀಪ್​ ಕೇಳೋದು ಒಂದಾದರೆ, ಆರ್ಯವರ್ಧನ್​ ಗುರೂಜಿ ಅರ್ಥ ಮಾಡಿಕೊಳ್ಳೋದು ಮತ್ತೊಂದು. ಇದು ಬಿಗ್​ ಬಾಸ್​ನಲ್ಲಿ ಹಲವು ಬಾರಿ ಆಗಿದೆ. ಅದೇನೇ ಇರಲಿ, ಗುರೂಜಿ ಮಾತನಾಡುವಾಗ ಸಖತ್​ ಫನ್​ ಇರುತ್ತದೆ ಎಂಬುದಂತೂ ನಿಜ. ‘ಸೋಮಣ್ಣ ಮಾಚಿಮಾಡ ಅವರಿಗೆ ಹೀರೋ ಆಗುವ ಗುಣ ಇದೆ. ಸಿನಿಮಾದಲ್ಲಿ ನಟಿಸುವ ಆಸೆ ಕೂಡ ಅವರಿಗೆ ಇದೆ. ಹೀರೋ ಅಥವಾ ಹೀರೋ ಫ್ರೆಂಡ್​ ಪಾತ್ರವನ್ನು ಅವರು ಮಾಡಬಹುದು’ ಎಂದು ಆರ್ಯವರ್ಧನ್​ ಹೇಳಿದರು. ‘ಒಂದು ವೇಳೆ ಸೋಮಣ್ಣ ಹೀರೋ ಆದರೆ ಹೀರೋಯಿನ್​ ಯಾರು’ ಎಂದು ಸುದೀಪ್​ ಪ್ರಶ್ನಿಸಿದರು. ಅದಕ್ಕೆ ಥಟ್​ ಅಂತ ಸೋನು ಗೌಡ ಹೆಸರು ಹೇಳಿದರು ಗುರೂಜಿ.

ಈ ಮಾತುಕತೆ ಹೀಗೇ ಮುಂದುವರಿಯಿತು. ‘ಈ ಮನೆಯಲ್ಲಿ ವಿಲನ್​ ಯಾರು’ ಎಂದು ಕೇಳಿದ್ದಕ್ಕೆ ರಾಕೇಶ್​ ಅಡಿಗ ಮತ್ತು ಜಯಶ್ರೀ ಅವರ ಹೆಸರನ್ನು ಗುರೂಜಿ ಹೇಳಿದರು. ‘ಸೋಮಣ್ಣ ಹೀರೋ, ರಾಕೇಶ್ ವಿಲನ್​ ಆದರೆ ಇಬ್ಬರ ನಡುವೆ ಜಗಳ ತುಂಬ ಜೋರಾಗಿ ಇರುತ್ತದೆ, ಇಂಟರೆಸ್ಟಿಂಗ್​ ಆಗಿರುತ್ತದೆ. ಯಾಕೆಂದರೆ ಸೋನು ಗೌಡ ಆಗಾಗ ಮನಸ್ಸು ಬದಲಾಯಿಸುತ್ತಾ ಇರುತ್ತಾಳೆ’ ಎಂದು ಅವರು ಅಭಿಪ್ರಾಯ ತಿಳಿಸಿದರು.

ಇದನ್ನೂ ಓದಿ
Image
ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
Image
BBK: ಬಿಗ್​ ಬಾಸ್​ಗೆ ಅವಮಾನ ಮಾಡಿದ ಸೋನು ಗೌಡ; ಮುಲಾಜಿಲ್ಲದೇ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ್​
Image
ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
Image
‘ಬಿಗ್​ ಬಾಸ್​ ಒಟಿಟಿ’ ಮನೆಯೊಳಗೆ ನಿಜವಾಗಿ ಏನೆಲ್ಲ ನಡೆಯಿತು? ಎಲ್ಲವನ್ನೂ ವಿವರಿಸಿದ ಸ್ಫೂರ್ತಿ ಗೌಡ

‘ಈ ಸಿನಿಮಾದಲ್ಲಿ ಕಾಮಿಡಿ ಮಾಡೋದು ಯಾರು?’ ಸುದೀಪ್​ ಕೇಳಿದ ಈ ಪ್ರಶ್ನೆ ಉತ್ತರ ಬಂದಿದ್ದು ಸೋಮಣ್ಣನ ಕಡೆಯಿಂದ. ‘ಗುರೂಜಿಯೇ ಕಾಮಿಡಿಯನ್​ ಆಗಬೇಕು. ಕೆಲವೊಂದು ಸಮಯದಲ್ಲಿ ಅವರ ಗೆಟಪ್​ ಹಾಗೆಯೇ ಇರುತ್ತದೆ. ಅದನ್ನು ನೋಡಿ ನಾವು ಬಿದ್ದು ಬಿದ್ದು ನಕ್ಕಿದ್ದೇವೆ. ಅವರೊಳಗೆ ಒಬ್ಬ ಕಲಾವಿದ ಇದ್ದಾನೆ. ಕಾಮಿಡಿ ಟಚ್​ ಇರುವ ವಿಲನ್​ ಪಾತ್ರಕ್ಕೆ ಅವರು ತುಂಬ ಚೆನ್ನಾಗಿ ಹೊಂದಿಕೆ ಆಗುತ್ತಾರೆ’ ಎಂದು ಸೋಮಣ್ಣ ಹೇಳಿದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:48 pm, Mon, 5 September 22

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ