ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು

ಬಿಗ್ ಬಾಸ್​ನಲ್ಲಿ ತಿನ್ನುವ ಯಾವುದೇ ವಸ್ತುಗಳನ್ನು ಹೊರಗಿನಿಂದ ತರುವಂತಿಲ್ಲ. ಎಲ್ಲವನ್ನೂ ಚೆಕ್ ಮಾಡಿದ ನಂತರವೇ ಸ್ಪರ್ಧಿಗಳನ್ನು ಒಳಗೆ ಕಳುಹಿಸಲಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿ ಸಿಗುವುದನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು.

ಬಿಗ್​ ಬಾಸ್​ನಲ್ಲಿ ಹುಡುಗರಿಗೆ ಹೊರಗಿನಿಂದ ಸಿಗುತ್ತಿದೆ ಆ ಒಂದು ವಸ್ತು; ಸೋನು ಹೇಳಿಯೇ ಬಿಟ್ರು
ಸೋನು ಶ್ರೀನಿವಾಸ್ ಗೌಡ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 31, 2022 | 9:19 PM

‘ಬಿಗ್​ ಬಾಸ್ ಒಟಿಟಿ’ (Bigg Boss OTT) ದಿನ ಕಳೆದಂತೆ ಕುತೂಹಲ ಹುಟ್ಟಿಸುತ್ತಿದೆ. ಈಗಾಗಲೇ ಸ್ಪರ್ಧಿಗಳು ದೊಡ್ಮನೆಯಲ್ಲಿ 25 ದಿನ ಕಳೆದಿದ್ದಾರೆ. ಇನ್ನು ಎರಡು ವಾರಗಳ ಕಾಲ ಬಿಗ್ ಬಾಸ್ ಒಟಿಟಿ ನಡೆಯಲಿದ್ದು ಆ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಲಿದೆ. ಟಿವಿ ಶೋಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಮಧ್ಯೆ ಸ್ಪರ್ಧಿಗಳಿಗೆ ಹೊರಗಿಂದ ಒಂದು ವಸ್ತು ಪೂರೈಕೆ ಆಗುತ್ತಿರುವ ಬಗ್ಗೆ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಆರೋಪ ಮಾಡಿದ್ದಾರೆ. ಇದು ಸರಿ ಅಲ್ಲ ಎಂಬುದನ್ನೂ ಹೇಳಿದ್ದಾರೆ. ಅಷ್ಟಕ್ಕೂ ಏನು ಅದು? ಈ ಸ್ಟೋರಿ ಓದಿ.

ಬಿಗ್ ಬಾಸ್​ನಲ್ಲಿ ತಿನ್ನುವ ಯಾವುದೇ ವಸ್ತುಗಳನ್ನು ಹೊರಗಿನಿಂದ ತರುವಂತಿಲ್ಲ. ಎಲ್ಲವನ್ನೂ ಚೆಕ್ ಮಾಡಿದ ನಂತರವೇ ಸ್ಪರ್ಧಿಗಳನ್ನು ಒಳಗೆ ಕಳುಹಿಸಲಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿ ಸಿಗುವುದನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು. ಆದರೆ, ಬಿಗ್ ಬಾಸ್​ನಲ್ಲಿ ಪುರುಷ ಸ್ಪರ್ಧಿಗಳಿಗೆ ಹೊರಗಿನಿಂದ ಪ್ರೋಟಿನ್ ಪೌಡರ್ ತರೋಕೆ ಅವಕಾಶ ಇದೆ ಎಂಬುದನ್ನು ಸೋನು ಗೌಡ ರಿವೀಲ್ ಮಾಡಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್​ನಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಮೊದಲು ಬಂದಾಗ ಎಲ್ಲರಿಂದ ಟೀಕೆಗೆ ಒಳಗಾಗಿದ್ದರು. ಆದರೆ, ದಿನಕಳೆದಂತೆ ಅವರು ಅನೇಕರಿಗೆ ಇಷ್ಟವಾಗಿದ್ದಾರೆ. ಎಲ್ಲರ ಜತೆ ಜೋಕ್ ಮಾಡುತ್ತಾ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈಗ ಅವರು ನೀಡಿದ ಒಂದು ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

‘ಅಮ್ಮ ನನಗೆ ಮನೆಯಿಂದ ಹಾರ್ಲಿಕ್ಸ್ ಪೌಡರ್ ಕಳುಹಿಸಿ’ ಎಂದಿದ್ದಾರೆ ಸೋನು. ಇದಕ್ಕೆ ಅವಕಾಶ ಇಲ್ಲ ಎಂಬ ಮಾತನ್ನು ಮನೆ ಮಂದಿ ಹೇಳಿದರು. ‘ಮನೆಯಿಂದ ಯಾವ ವಸ್ತುಗಳನ್ನು ಪಡೆದುಕೊಳ್ಳುವಂತಿಲ್ಲ. ಎಲ್ಲರಿಗೂ ಇದು ಅಪ್ಲೈ ಆಗುತ್ತದೆ’ ಎಂದರು. ಇದಕ್ಕೆ ಸೋನು ಶ್ರೀನಿವಾಸ್ ಗೌಡ ಅಸಲಿ ವಿಚಾರ ತೆರೆದಿಟ್ಟರು. ‘ಹುಡುಗರಿಗೆ ಪ್ರೋಟಿನ್ ಪೌಡರ್ ಕಳಿಸ್ತಾರೆ. ಆದರೆ, ನಮಗೆ ಯಾಕೆ ಹಾರ್ಲಿಕ್ಸ್ ತರೋಕೆ ಏಕೆ ಅವಕಾಶ ಇಲ್ಲ. ಇದು ಮೋಸ’ ಎಂದು ಬೇಸರ ಹೊರಹಾಕಿದರು ಅವರು. ಸೋನು ಹೇಳಿದ ಮಾತು ಕೇಳಿ ಮನೆ ಮಂದಿ ಸೈಲೆಂಟ್ ಆದರು.

Published On - 9:05 pm, Wed, 31 August 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು