‘ಚೆನ್ನಾಗಿದ್ದವರನ್ನೆಲ್ಲ ಅಳಿಸಿಬಿಟ್ರಲ್ಲ’: ಬಿಗ್ ಬಾಸ್ ಸರ್ಪ್ರೈಸ್ಗೆ ಕಣ್ಣೀರಿಟ್ಟ ಮನೆಮಂದಿ
‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟ ನಂತರ ಹೊರಗಿನ ಪ್ರಪಂಚದ ಜತೆ ಸಂಪೂರ್ಣ ಕನೆಕ್ಷನ್ ತಪ್ಪಿ ಹೋಗುತ್ತದೆ. ಹೊರಗಿನವರ ಜತೆ ಸಂಪರ್ಕದಲ್ಲಿ ಇರಲು ಆಗುವುದಿಲ್ಲ. ಆದರೆ, ಗಣೇಶ ಚತುರ್ಥಿ ಪ್ರಯುಕ್ತ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು.
‘ಬಿಗ್ ಬಾಸ್ ಒಟಿಟಿ’ಯಲ್ಲಿ (Bigg Boss OTT Kannada) ನಾಲ್ಕನೇವಾರ ಪೂರ್ಣಗೊಳ್ಳುತ್ತಿದೆ. ಮನೆಯಲ್ಲಿ ಕಾಂಪಿಟೇಷನ್ ಹೆಚ್ಚುತ್ತಿದೆ. ಎಲ್ಲಾ ಸ್ಪರ್ಧಿಗಳ ಮಧ್ಯೆ ಬಾಂಡಿಂಗ್ ಕೂಡ ಉತ್ತಮವಾಗಿ ಬೆಳೆದಿದೆ. ಆರಂಭದಲ್ಲಿ ಸಣ್ಣಸಣ್ಣ ವಿಚಾರಕ್ಕೆ ಕಿತ್ತಾಡಿಕೊಳ್ಳುತ್ತಿದ್ದ ಸ್ಪರ್ಧಿಗಳು ಈಗ ಗೆಳೆಯರಾಗಿದ್ದಾರೆ. ಗಣೇಶ ಚತುರ್ಥಿ (Ganesh Chaturthi) ಸಂದರ್ಭದಲ್ಲಿ ಬಿಗ್ ಬಾಸ್ ಕಡೆಯಿಂದ ಸ್ಪರ್ಧಿಗಳಿಗೆ ಸರ್ಪ್ರೈಸ್ ಸಿಕ್ಕಿದೆ. ಸರ್ಪ್ರೈಸ್ ನೋಡಿ ಮನೆ ಮಂದಿ ಕಣ್ಣೀರು ಹಾಕಿದ್ದಾರೆ. ‘ಚೆನ್ನಾಗಿದ್ದವರನ್ನೆಲ್ಲ ಅಳಿಸಿಬಿಟ್ರಲ್ಲ’ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.
‘ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟ ನಂತರ ಹೊರಗಿನ ಪ್ರಪಂಚದ ಜತೆ ಸಂಪೂರ್ಣ ಕನೆಕ್ಷನ್ ತಪ್ಪಿ ಹೋಗುತ್ತದೆ. ಮನೆಯಲ್ಲಿರುವ ಸ್ಪರ್ಧಿಗಳ ಮಧ್ಯವಷ್ಟೇ ಫ್ರೆಂಡ್ಶಿಪ್ ಬೆಳೆಸಬೇಕು. ಹೊರಗಿನವರ ಜತೆ ಸಂಪರ್ಕದಲ್ಲಿ ಇರಲು ಆಗುವುದಿಲ್ಲ. ಆದರೆ, ಗಣೇಶ ಚತುರ್ಥಿ ಪ್ರಯುಕ್ತ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು.
‘ಬಿಗ್ ಬಾಸ್ ಕನ್ನಡ ಒಟಿಟಿ’ ಸ್ಪರ್ಧಿಗಳು ದೊಡ್ಮನೆಗೆ ಬಂದು ಒಂದು ತಿಂಗಳು ಕಳೆದಿದ್ದಾರೆ. ಹೊರಗಿನ ಜಗತ್ತಿನ ಸಂಪರ್ಕ ಇಲ್ಲದೆ ಇರೋದು ನಿಜಕ್ಕೂ ಸವಾಲಿನ ವಿಚಾರ. ಇದೇ ವಿಚಾರಕ್ಕೆ ಮನೆ ಮಂದಿ ಕಣ್ಣೀರು ಹಾಕಿದ ಉದಾಹರಣೆಯೂ ಇದೆ. ಹೀಗಾಗಿ, ‘ಬಿಗ್ ಬಾಸ್’ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ವಿಶೇಷ ವಿಡಿಯೋ ಕ್ಲಿಪ್ ಪ್ಲೇ ಮಾಡಲಾಯಿತು.
ಎಲ್ಲಾ ಸ್ಪರ್ಧಿಗಳ ಕುಟುಂಬ ಹಾಗೂ ಆಪ್ತರು 30 ಸೆಕೆಂಡ್ನ ವಿಡಿಯೋ ಮಾಡಿದ್ದರು. ಇದನ್ನು ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರ ಮಾಡಲಾಯಿತು. ಕುಟುಂಬದವರನ್ನು ನೋಡಿ, ಅವರ ಹಿತನುಡಿ ಕೇಳಿ, ಅವರು ನೆನಪಿಸಿದ ಹಳೆಯ ಘಟನೆಯನ್ನು ನೆನೆದು ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ. ‘ಎಲ್ಲರೂ ಚೆನ್ನಾಗಿದ್ವಿ. ಯಾಕೆ ಕಣ್ಣೀರು ಹಾಕಿಸಿದ್ರಿ ಬಿಗ್ ಬಾಸ್’ ಎಂದು ಸೋನು ಗೌಡ ಕೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಐದನೇ ವಿಕೆಟ್ ಪತನ; ಉದಯ್ ಹೊರಹೋಗಲು ಕಾರಣವಾದ ವಿಚಾರಗಳೇನು?
ಹಬ್ಬ ಆದ್ದರಿಂದ ‘ಬಿಗ್ ಬಾಸ್’ ಸ್ಪರ್ಧಿಗಳಿಗೆ ಹಬ್ಬದ ಊಟ ನೀಡಲಾಯಿತು. ಎಲ್ಲರೂ ಹಬ್ಬದ ಊಟ ಸವಿದು ಖುಷಿಪಟ್ಟಿದ್ದಾರೆ. ಹೋಳಿಗೆ ಊಟವನ್ನು ಸವಿದು ಖುಷಿಪಟ್ಟಿದ್ದಾರೆ. ಒಟ್ಟಿನಲ್ಲಿ ಹಬ್ಬದ ಸಂದರ್ಭದಲ್ಲಿ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ನೋಡಿ ಸ್ಪರ್ಧಿಗಳು ಖುಷಿಯಾಗಿದ್ದಾರೆ. ಸದ್ಯ 11 ಸ್ಪರ್ಧಿಗಳು ಇದ್ದಾರೆ. ಆ ಪೈಕಿ ಕೆಲವರು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಎಲಿಮಿನೇಟ್ ಆಗುತ್ತಿದ್ದಾರೆ. ರೂಪೇಶ್ ಅವರು ಮನೆಯ ಕ್ಯಾಪ್ಟನ್ ಆಗಿದ್ದಾರೆ.