Sonu Srinivas Gowda: ‘ಬಿಗ್ ಬಾಸ್’ ಮನೆಯಲ್ಲಿ ಕಳಪೆ ಆಟ ತೋರಿದ ಸೋನು ಶ್ರೀನಿವಾಸ್ ಗೌಡಗೆ ಶಿಕ್ಷೆ

ಅತೀ ಹೆಚ್ಚು ವೋಟ್ ಪಡೆದವರಿಗೆ ಈ ಎರಡು ಪಟ್ಟ ಸಿಗುತ್ತದೆ. ಈ ವಾರ ಸೋನು ಶ್ರೀನಿವಾಸ್ ಗೌಡ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಮನೆಯ ಬಹುತೇಕರು ಸೋನು ಹೆಸರನ್ನು ತೆಗೆದುಕೊಂಡಿದ್ದಾರೆ.

Sonu Srinivas Gowda: ‘ಬಿಗ್ ಬಾಸ್’ ಮನೆಯಲ್ಲಿ ಕಳಪೆ ಆಟ ತೋರಿದ ಸೋನು ಶ್ರೀನಿವಾಸ್ ಗೌಡಗೆ ಶಿಕ್ಷೆ
ಸೋನು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 02, 2022 | 8:11 PM

ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಬಿಗ್ ಬಾಸ್ ಮನೆಯಲ್ಲಿ ನಾಲ್ಕು ವಾರ ಕಳೆದಿದ್ದಾರೆ. ಈ ವಾರ ಅವರು ನಾಮಿನೇಷನ್ ಲಿಸ್ಟ್​ನಲ್ಲಿದ್ದಾರೆ. ಕಡಿಮೆ ವೋಟ್ ಬಿದ್ದರೆ ಅವರು ಮನೆಯಿಂದ ಹೊರಹೋಗೋದು ಪಕ್ಕಾ. ಅದಕ್ಕೂ ಮೊದಲು ‘ಬಿಗ್ ಬಾಸ್’ ಮನೆಯಲ್ಲಿ ಸೋನು ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಸೋನು ಶ್ರೀನಿವಾಸ್ ಗೌಡ ಜೈಲಿಗೆ ಹೋಗಿದ್ದಾರೆ. ಒಂದು ದಿನ ಅವರು ಜೈಲಿನಲ್ಲಿ ಕಳೆದುಬರಬೇಕಿದೆ.

ಬಿಗ್ ಬಾಸ್ ಮನೆಯಲ್ಲಿ ಪ್ರತಿ ವೀಕೆಂಡ್​ಗೂ ಒಂದು ದಿನ ಮೊದಲು ‘ಬಿಗ್ ಬಾಸ್​’ ಮನೆಯಲ್ಲಿ ಕಳಪೆ ಹಾಗೂ ಉತ್ತಮ ಯಾರು ಎಂಬ ಆಯ್ಕೆ ನಡೆಯುತ್ತದೆ. ಎಲ್ಲಾ ಸ್ಪರ್ಧಿಗಳು ಕಳಪೆ ಯಾರು ಹಾಗೂ ಉತ್ತಮ ಯಾರು ಎಂದು ಹೇಳಬೇಕು. ಅತೀ ಹೆಚ್ಚು ವೋಟ್ ಪಡೆದವರಿಗೆ ಈ ಎರಡು ಪಟ್ಟ ಸಿಗುತ್ತದೆ. ಈ ವಾರ ಸೋನು ಶ್ರೀನಿವಾಸ್ ಗೌಡ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಮನೆಯ ಬಹುತೇಕರು ಸೋನು ಹೆಸರನ್ನು ತೆಗೆದುಕೊಂಡಿದ್ದಾರೆ.

ಸೋನು ಶ್ರೀನಿವಾಸ್ ಗೌಡ ಮನೆಯಲ್ಲಿ ಎಲ್ಲರನ್ನೂ ಎಂಟರ್​ಟೇನ್ ಮಾಡುತ್ತಿದ್ದಾರೆ ನಿಜ. ಆದರೆ, ಟಾಸ್ಕ್​ ವಿಚಾರದಲ್ಲಿ ಅವರು ಅಷ್ಟಾಗಿ ಪರ್ಫಾರ್ಮೆನ್ಸ್ ತೋರಿಸುತ್ತಿಲ್ಲ. ಇನ್ನು, ಮನೆಯ ಕೆಲಸದ ವಿಚಾರದಲ್ಲಿ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಮನೆಯ ಕ್ಲೀನಿಂಗ್, ಪಾತ್ರೆ ತೊಳೆಯುವ ವಿಚಾರದಲ್ಲಿ ಸೋನು ಶ್ರೀನಿವಾಸ್ ಗೌಡ ಅಂತರ ಕಾಯ್ದುಕೊಳ್ಳುತ್ತಲೇ ಬಂದಿದ್ದರು.

ಇದನ್ನೂ ಓದಿ
Image
Sonu Srinivas Gowda: ರಾತ್ರಿ 2.15ಕ್ಕೆ ಸೋನು ಗೌಡ ಜತೆ ಮಾತಾಡಲು ಬಂದ ರಾಕೇಶ್; ವೈರಲ್​ ಹುಡುಗಿಯ ಪ್ರತಿಕ್ರಿಯೆ ಹೇಗಿತ್ತು?​
Image
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Image
Sonu Srinivas Gowda: ‘ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ’: ಸುದೀಪ್​ ಕೋಪಕ್ಕೆ ಕಾರಣವಾಯ್ತು ಸೋನು ಗೌಡ ವರ್ತನೆ
Image
Sonu Srinivas Gowda: ‘ಸೋನು ಬಾತ್​ ರೂಮ್​ ಯಾಕೆ ಹುಡುಕಲಿಲ್ಲ?’: ವೇದಿಕೆ ಮೇಲೆ ಸುದೀಪ್​ ಕೇಳಿದ್ರು ನೇರ ಪ್ರಶ್ನೆ

ಸೋನುಗೆ ಅಡುಗೆ ಮಾಡೋಕೆ ಬರುತ್ತದೆ ಎಂಬ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಅವರು ಅಡುಗೆ ಮಾಡೋಕೆ ಬಂದ ಹೊರತಾಗಿಯೂ ಒಂದೇ ಒಂದು ದಿನವೂ ಕಿಚನ್ ಕಡೆ ಮುಖ ಮಾಡಿರಲಿಲ್ಲ. ಬಿಗ್ ಬಾಸ್ ಆದೇಶದ ಹಿನ್ನೆಲೆಯಲ್ಲಿ ಅವರು ಒಂದು ದಿನ ಅಡುಗೆ ಮಾಡಬೇಕಾಗಿ ಬಂದಿತ್ತು. ಈ ವೇಳೆ ಅವರಿಗೆ ಅಡುಗೆ ಬರುತ್ತದೆ ಎಂಬ ವಿಚಾರ ಗೊತ್ತಾಗಿತ್ತು. ಈ ಕಾರಣದಿಂದಲೂ ಮನೆ ಮಂದಿ ಅವರಿಗೆ ಕಳಪೆ ನೀಡಿದ್ದಾರೆ.

ಇದನ್ನೂ ಓದಿ: ನಾಮಿನೇಷನ್​ನಿಂದ ಈವಾರ ಸೇಫ್ ಆದ ರೂಪೇಶ್​; ಸಂಕಷ್ಟದಲ್ಲಿ ಸೋನು ಶ್ರೀನಿವಾಸ್ ಗೌಡ

ಕಳಪೆ ಪಟ್ಟ ಪಡೆದುಕೊಂಡ ವ್ಯಕ್ತಿ ಒಂದು ದಿನ ಜೈಲಿನಲ್ಲಿ ಕಳೆಯಬೇಕು. ಕೇವಲ ರಾಗಿಗಂಜಿ ಊಟ ಮಾಡಿಕೊಂಡು ಜೀವನ ನಡೆಸಬೇಕು. ಹೊರಗಿನ ಯಾವುದೇ ಸೌಲಭ್ಯವನ್ನು ಅವರು ಬಳಕೆ ಮಾಡುವಂತಿಲ್ಲ. ಹೀಗಾಗಿ, ಇದು ಸ್ಪರ್ಧಿಗಳಿಗೆ ಕೊಂಚ ಕಷ್ಟವೇ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ