ನಾಮಿನೇಷನ್​ನಿಂದ ಈವಾರ ಸೇಫ್ ಆದ ರೂಪೇಶ್​; ಸಂಕಷ್ಟದಲ್ಲಿ ಸೋನು ಶ್ರೀನಿವಾಸ್ ಗೌಡ

ಐದು ಮಂದಿ ಕಡಿಮೆ ಆಗಿರುವುದರಿಂದ ಮನೆಯಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಈ ವಾರ ರೂಪೇಶ್ ಅವರು ನಾಮಿನೇಷನ್​ನಿಂದ ಬಚಾವ್ ಆಗುವ ಮೂಲಕ ಮುಂದಿನ ವಾರಕ್ಕೆ ಮುಂದುವರಿದಿದ್ದಾರೆ.  

ನಾಮಿನೇಷನ್​ನಿಂದ ಈವಾರ ಸೇಫ್ ಆದ ರೂಪೇಶ್​; ಸಂಕಷ್ಟದಲ್ಲಿ ಸೋನು ಶ್ರೀನಿವಾಸ್ ಗೌಡ
ಸೋನು-ರೂಪೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 29, 2022 | 9:07 PM

‘ಬಿಗ್ ಬಾಸ್ ಒಟಿಟಿ’ (Bigg Boss OTT) ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಹೊಸ ವಾರದ ಮೊದಲ ದಿನವೇ ಎಲಿಮಿನೇಷನ್​ಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಕೆಲವರು ನೇರವಾಗಿ ನಾಮಿನೇಟ್ ಆದರೆ, ಇನ್ನೂ ಕೆಲವರನ್ನು ಸ್ಪರ್ಧಿಗಳು ನಾಮಿನೇಟ್ ಮಾಡಿದ್ದಾರೆ. ಈ ವಾರ 11 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಆ ಪೈಕಿ 8 ಮಂದಿ ಎಲಿಮಿನೇಷನ್​ಗೆ ನಾಮಿನೇಟ್ ಆಗಿದ್ದಾರೆ.

ಈಗಾಗಲೇ ಮೂರು ವಾರಗಳಲ್ಲಿ ಐದು ಮಂದಿ ಎಲಿಮಿನೇಟ್ ಆಗಿದ್ದಾರೆ. ಐದು ಮಂದಿ ಪೈಕಿ ಇಬ್ಬರು ಗಾಯಗೊಂಡು ಎಲಿಮಿನೇಟ್ ಆಗಿದ್ದಾರೆ. ಅರ್ಜುನ್ ಹಾಗೂ ಲೋಕೇಶ್ ಅವರು ಗಾಯಗೊಂಡು ಔಟ್ ಆದರು. ಐದು ಮಂದಿ ಕಡಿಮೆ ಆಗಿರುವುದರಿಂದ ಮನೆಯಲ್ಲಿ ಸ್ಪರ್ಧೆ ಹೆಚ್ಚಾಗಿದೆ. ಈ ವಾರ ರೂಪೇಶ್ ಅವರು ನಾಮಿನೇಷನ್​ನಿಂದ ಬಚಾವ್ ಆಗುವ ಮೂಲಕ ಮುಂದಿನ ವಾರಕ್ಕೆ ಮುಂದುವರಿದಿದ್ದಾರೆ.  ಈ ವಾರ ಜಶ್ವಂತ್ ಬೋಪಣ್, ಚೈತ್ರಾ ಹಳ್ಳಿಕೇರಿ, ಅಕ್ಷತಾ, ಸಾನ್ಯಾ ಐಯ್ಯರ್, ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ, ನಂದಿನಿ, ಜಯಶ್ರೀ ಆರಾಧ್ಯ ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಜಶ್ವಂತ್ ಅವರು ಹೆಚ್ಚು ವೋಟ್ ಪಡೆದು ನಾಮಿನೇಟ್ ಆಗಿದ್ದಾರೆ. ಅವರು ಕಳೆದ ಮೂರು ವಾರಗಳಿಂದ ನಾಮಿನೇಟ್ ಆಗಿಲ್ಲ. ಈ ಕಾರಣಕ್ಕೆ ಮನೆಯವರು ಅವರನ್ನು ನಾಮಿನೇಟ್ ಮಾಡಿದ್ದಾರೆ. ಚೈತ್ರಾ ಅವರು ಸೇಫ್ ಗೇಮ್ ಆಡುತ್ತಿದ್ದಾರೆ ಎಂಬ ಕಾರಣಕ್ಕೆ ನಾಮಿನೇಟ್ ಆದರು. ಸೋನು ಶ್ರೀನಿವಾಸ್ ಗೌಡ, ಅಕ್ಷತಾ, ರಾಕೇಶ್ ಹೆಚ್ಚು ವೋಟ್ ಪಡೆದು ಡೇಂಜರ್​ಜೋನ್​ಗೆ ಬಂದರು.

ಇದನ್ನೂ ಓದಿ
Image
Sonu Srinivas Gowda: ರಾತ್ರಿ 2.15ಕ್ಕೆ ಸೋನು ಗೌಡ ಜತೆ ಮಾತಾಡಲು ಬಂದ ರಾಕೇಶ್; ವೈರಲ್​ ಹುಡುಗಿಯ ಪ್ರತಿಕ್ರಿಯೆ ಹೇಗಿತ್ತು?​
Image
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Image
Sonu Srinivas Gowda: ‘ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ’: ಸುದೀಪ್​ ಕೋಪಕ್ಕೆ ಕಾರಣವಾಯ್ತು ಸೋನು ಗೌಡ ವರ್ತನೆ
Image
Sonu Srinivas Gowda: ‘ಸೋನು ಬಾತ್​ ರೂಮ್​ ಯಾಕೆ ಹುಡುಕಲಿಲ್ಲ?’: ವೇದಿಕೆ ಮೇಲೆ ಸುದೀಪ್​ ಕೇಳಿದ್ರು ನೇರ ಪ್ರಶ್ನೆ

ಕ್ಯಾಪ್ಟನ್​ಗೆ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡುವ ಅವಕಾಶವನ್ನು ಬಿಗ್ ಬಾಸ್ ನೀಡಿದರು. ಈ ವೇಳೆ ಅವರು ನಂದಿನಿಯನ್ನು ನೇರವಾಗಿ ನಾಮಿನೇಟ್ ಮಾಡಿದರು. ಇನ್ನು, ಜಯಶ್ರೀ ಅವರು ಕಳೆದ ವಾರವೇ ನಾಮಿನೇಟ್ ಆಗಿದ್ದರು. ಅವರು ಟಾಸ್ಕ್ ಆಡುವಾಗ ಸ್ಪರ್ಧಿಗಳ ಕಣ್ಣಿಗೆ ನೀರು ಹಾಗೂ ಪರ್ಫ್ಯೂಮ್ ಎರಚಿದ್ದರು. ಇದರಿಂದ ಮನೆಯವರ ಕಣ್ಣಿಗೆ ತೊಂದರೆ ಉಂಟಾಗಿತ್ತು. ಈ ಕಾರಣದಿಂದ ಅವರು ನೇರವಾಗಿ ನಾಮಿನೇಟ್ ಆಗಿದ್ದರು.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ರೂಪೇಶ್ ಶೆಟ್ಟಿಗೆ ಹೆಚ್ಚುತ್ತಿದೆ ಫ್ಯಾನ್​​ ಬೇಸ್; ವಿಫಲವಾಗಲಿದೆ ಮನೆಯವರ ತಂತ್ರ?

ರೂಪೇಶ್ ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರಿಗೆ ಮನೆಯ ಹೊರಗೆ ಹೆಚ್ಚು ಫ್ಯಾನ್ಸ್ ಇದ್ದಾರೆ. ಈ ವಾರ ಅವರು ಸೇಫ್ ಆಗಿರುವುದರಿಂದ ಫೈನಲ್​ಗೆ ಮತ್ತಷ್ಟು ಹತ್ತಿರ ಆಗಿದ್ದಾರೆ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ