ಗಣೇಶ ಚತುರ್ಥಿಯಂದು ಪೀಯುಷ್ ಗೋಯಲ್ ಮನೆಯಲ್ಲಿ ಗಣಪತಿಗೆ ಆರತಿ ಬೆಳಗಿದ ಮೋದಿ
ಗಣೇಶ ಪೂಜೆಯ ಚಿತ್ರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, “ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ನನ್ನ ಸಹೋದ್ಯೋಗಿ ಪೀಯುಷ್ ಗೋಯಲ್ ಜಿ ಅವರ ನಿವಾಸದಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದೆ...
ಗಣೇಶ ಚತುರ್ಥಿಯ ಸಂದರ್ಭದಲ್ಲಿ (Ganesh Chaturthi) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಕೇಂದ್ರ ಸಚಿವ ಪೀಯುಷ್ ಗೋಯಲ್ (Piyush Goyal) ಅವರ ನಿವಾಸದಲ್ಲಿ ಗಣೇಶ ಆರತಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರು ಕಿತ್ತಳೆ ಬಣ್ಣದ ಹಳದಿ ಕುರ್ತಾ ಮತ್ತು ಬಿಳಿ ಧೋತಿಯನ್ನು ಧರಿಸಿದ್ದರು. ಶುಭ ಸಮಾರಂಭದಲ್ಲಿ ಪ್ರಕಾಶಮಾನವಾದ ಕಿತ್ತಳೆ ‘ಅಂಗವಸ್ತ್ರ’ವನ್ನೂ ಸಹ ಧರಿಸಿದ್ದರು. ಆರತಿಯ ಮೊದಲು, ಅವರು ಗೋಯಲ್ ಅವರ ಮನೆಯಲ್ಲಿ ನೆರೆದಿದ್ದ ಜನರ ಗುಂಪಿಗೆ ಮೋದಿ ಶುಭಾಶಯಗಳನ್ನು ವ್ಯಕ್ತಪಡಿಸಿದರು ಎಂದು ಎಎನ್ಐ ವರದಿ ಮಾಡಿದೆ. ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಮತ್ತು ಉದ್ಯಮಿ ಸುನಿಲ್ ಭಾರತಿ ಮಿತ್ತಲ್ ಕೂಡ ಅಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಗಣೇಶ ಪೂಜೆಯ ಚಿತ್ರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, “ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ನನ್ನ ಸಹೋದ್ಯೋಗಿ ಪೀಯುಷ್ ಗೋಯಲ್ ಜಿ ಅವರ ನಿವಾಸದಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಭಗವಾನ್ ಶ್ರೀ ಗಣೇಶನ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಜನರಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ದಯೆ ಮತ್ತು ಸಹೋದರತ್ವದ ಮನೋಭಾವ ಸದಾ ಮೇಲುಗೈ ಸಾಧಿಸಲಿ ಎಂದು ಹಾರೈಸಿದರು. ಸಂಸ್ಕೃತ ಶ್ಲೋಕವನ್ನು ಹಂಚಿಕೊಂಡ ಅವರು “ಗಣೇಶ ಚತುರ್ಥಿಯ ಶುಭಾಶಯಗಳು. ಶ್ರೀ ಗಣೇಶನ ಆಶೀರ್ವಾದ ಯಾವಾಗಲೂ ನಮ್ಮ ಮೇಲೆ ಇರಲಿ” ಎಂದು ಬರೆದಿದ್ದಾರೆ.
On the auspicious occasion of Ganesh Chaturthi, went to the programme at my colleague @PiyushGoyal Ji’s residence.
May the blessings of Bhagwan Shri Ganesh always remain upon us. pic.twitter.com/mKfsfcY23H
— Narendra Modi (@narendramodi) August 31, 2022
ಭಾರತದಲ್ಲಿ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಪ್ರತಿ ವರ್ಷ ಸಂಭ್ರಮದಿಂದ ಆಚರಿಸಲಾಗುತ್ತದೆ. ಸಾವಿರಾರು ಭಕ್ತರು ದೇವಾಲಯಗಳು ಮತ್ತು ‘ಗಣೇಶೋತ್ಸವ ಪೆಂಡಾಲ್ ಗಳಲ್ಲಿ’ ಪ್ರಾರ್ಥನೆ ಸಲ್ಲಿಸಲು ಸೇರುತ್ತಾರೆ. ಹತ್ತು ದಿನಗಳ ಆಚರಣೆಯು ಚತುರ್ಥಿ ತಿಥಿಯಿಂದ ಪ್ರಾರಂಭವಾಗಿ ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ. ಕೊವಿಡ್ -19 ಸಾಂಕ್ರಾಮಿಕ ರೋಗವು ಕಡಿಮೆ ಆದ ನಂತರ 2022 ರಲ್ಲಿ ಗಣೇಶ ಚತುರ್ಥಿ ಹಬ್ಬಗಳಿಗೆ ಸಾಂಪ್ರದಾಯಿಕ ಉತ್ಸಾಹವನ್ನು ಮರಳಿ ತಂದಿತು.ಇದು ಕಳೆದ ವರ್ಷ ವಿಧಿಸಲಾದ ಹೆಚ್ಚಿನ ನಿರ್ಬಂಧಗಳನ್ನು ಈ ಬಾರಿ ತೆಗೆದು ಹಾಕಲಾಗಿದೆ.