ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?

Bigg Boss Kannada OTT: ‘ನನಗೆ ಇಲ್ಲಿ ಇರಲು ಆಗುತ್ತಿಲ್ಲ ಬಿಗ್​ ಬಾಸ್​.. ತುಂಬ ವೀಕ್ ಆದಂತೆ ಅನಿಸುತ್ತಿದೆ’ ಎಂದು ಜಯಶ್ರೀ ಗಳಗಳನೆ ಅತ್ತಿದ್ದಾರೆ. ಅವರನ್ನು ಸಮಾಧಾನ ಮಾಡಲು ಇನ್ನುಳಿದ ಸ್ಪರ್ಧಿಗಳು ಪ್ರಯತ್ನಿಸಿದ್ದಾರೆ.

ದೊಡ್ಮನೆಯಲ್ಲಿ ಎದೆ ಬಡಿದುಕೊಂಡು ಅತ್ತ ಜಯಶ್ರೀ; ಬಿಗ್​ ಬಾಸ್​ ಶೋನಲ್ಲಿ ಅಂಥದ್ದೇನಾಯ್ತು?
ಜಯಶ್ರೀ ಆರಾಧ್ಯ
Follow us
TV9 Web
| Updated By: ಮದನ್​ ಕುಮಾರ್​

Updated on:Sep 04, 2022 | 9:06 PM

ದಿನ ಕಳೆದಂತೆ ‘ಬಿಗ್​ ಬಾಸ್​ ಕನ್ನಡ ಒಟಿಟಿ’ ಕಾರ್ಯಕ್ರಮ ರಂಗು ಪಡೆದುಕೊಳ್ಳುತ್ತಿದೆ. ಐದನೇ ವಾರಕ್ಕೆ ಕಾಲಿಟ್ಟಿರುವ ಶೋನಲ್ಲಿ ಈಗ 9 ಜನರ ನಡುವೆ ಸ್ಪರ್ಧೆ ಮುಂದುವರಿದಿದೆ. ಶನಿವಾರ (ಸೆ.3) ಡಬಲ್​ ಎಲಿಮಿನೇಷನ್​ (Bigg Boss Elimination) ನಡೆಯಿತು. ಅಕ್ಷತಾ ಕುಕ್ಕಿ ಮತ್ತು ಚೈತ್ರಾ ಹಳ್ಳಿಕೇರಿ (Chaitra Hallikeri) ಅವರು ಆಟ ಮುಗಿಸಿ ಮನೆಯಿಂದ ಹೊರನಡೆದರು. ಚೈತ್ರಾ ಔಟ್​ ಆಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅವರು ಎಲಿಮಿನೇಟ್​ ಆಗಿದ್ದರಿಂದ ಜಯಶ್ರೀ ಆರಾಧ್ಯ (Jayashree Aradhya) ಅವರಿಗೆ ಹೆಚ್ಚು ನೋವು ಆಗಿದೆ. ಒಬ್ಬರೇ ಕುಳಿತು ಅವರು ಕಣ್ಣೀರು ಹಾಕಿದ್ದಾರೆ. ಎದೆ ಬಡಿದುಕೊಂಡು ಅತ್ತಿದ್ದಾರೆ.

ಜಯಶ್ರೀ ಮತ್ತು ಚೈತ್ರಾ ನಡುವೆ ಸಿಕ್ಕಾಪಟ್ಟೆ ಸ್ನೇಹ ಬೆಳೆದಿತ್ತು. ಸದಾ ಕಾಲ ಅವರಿಬ್ಬರು ಜೊತೆಯಾಗಿ ಕಾಲ ಕಳೆಯುತ್ತಿದ್ದರು. ಮನೆಯಲ್ಲಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು. ಆದರೆ ಈಗ ಏಕಾಏಕಿ ಚೈತ್ರಾ ಎಲಿಮಿನೇಟ್​ ಆಗಿದ್ದರಿಂದ ಜಯಶ್ರೀಗೆ ಒಂಟಿತನ ಕಾಡುತ್ತಿದೆ. ಅದನ್ನು ಅವರು ನೇರವಾಗಿಯೇ ಹೇಳಿದ್ದಾರೆ. ಚೈತ್ರಾ ಔಟ್​ ಆದ ಬಳಿಕ ಜಯಶ್ರೀ ಅವರು ಎದೆ ಬಡಿದುಕೊಂಡು ಅತ್ತಿದ್ದಾರೆ. ಭಾನುವಾರ ಕೂಡ ಅವರ ಕಣ್ಣೀರು ನಿಲ್ಲಲಿಲ್ಲ.

‘ನನಗೆ ಇಲ್ಲಿ ಇರಲು ಆಗುತ್ತಿಲ್ಲ ಬಿಗ್​ ಬಾಸ್​. ತುಂಬ ಒಂಟಿತನ ಫೀಲ್​ ಆಗುತ್ತಿದೆ. ತುಂಬ ವೀಕ್ ಆದಂತೆ ಅನಿಸುತ್ತಿದೆ’ ಎಂದು ಜಯಶ್ರೀ ಗಳಗಳನೆ ಅತ್ತಿದ್ದಾರೆ. ಅವರನ್ನು ಸಮಾಧಾನ ಮಾಡಲು ಇನ್ನುಳಿದ ಸ್ಪರ್ಧಿಗಳು ಪ್ರಯತ್ನಿಸಿದ್ದಾರೆ. ಅವರ ಕಣ್ಣೀರು ಒರೆಸಿ ಸಮಾಧಾನ ಮಾಡಿದ್ದಾರೆ ಸೋಮಣ್ಣ ಮಾಚಿಮಾಡ. ‘ನಾವೆಲ್ಲ ಇದ್ದೇವೆ. ಒಂಟಿ ಎಂದುಕೊಳ್ಳೋದು ಬೇಡ’ ಎಂದು ರಾಕೇಶ್​ ಅಡಿಗ ಕೂಡ ಹೇಳಿ ಧೈರ್ಯ ತುಂಬಿದ್ದಾರೆ.

ಇದನ್ನೂ ಓದಿ
Image
Sonu Srinivas Gowda: ‘ಬಿಗ್ ಬಾಸ್’ ಮನೆಯಲ್ಲಿ ಕಳಪೆ ಆಟ ತೋರಿದ ಸೋನು ಶ್ರೀನಿವಾಸ್ ಗೌಡಗೆ ಶಿಕ್ಷೆ
Image
‘ಬಿಗ್ ಬಾಸ್​ಗೆ ಬಂದಿದ್ದು ಆಟ ಆಡೋಕೆ, ಶೋಕಿ ಮಾಡೋಕೆ’: ಸೋನು ಶ್ರೀನಿವಾಸ್ ಗೌಡ
Image
Sonu Srinivas Gowda: ಮೂಡ್ ಇಲ್ಲ ಅಂದ್ರೆ ಸೋನು ಶ್ರೀನಿವಾಸ್​ ಗೌಡ 3 ದಿನ ಸ್ನಾನ ಮಾಡಲ್ಲ; ಎಲ್ಲರ ಎದುರು ಸತ್ಯ ಬಯಲು
Image
Sonu Srinivas Gowda: ಸೋನು ಶ್ರೀನಿವಾಸ್​ ಗೌಡ ಫೋನ್​ ನಂಬರ್​ ಏನು? ಅದ್ರಲ್ಲೂ ಚಾಲಕಿತನ ತೋರಿದ ರೀಲ್ಸ್​ ಬೆಡಗಿ

‘ಹೊರಗಡೆಯ ಜೀವನದಲ್ಲಿ ಈ ರೀತಿ ಆದಾಗ ನಮಗೆ ಬೇರೆ ಆಯ್ಕೆ ಇರುತ್ತದೆ. ಮೊಬೈಲ್​ ಇರುತ್ತದೆ. ಆದರೆ ಇಲ್ಲಿ ಸಂಪೂರ್ಣ ಒಂಟಿ ಎನಿಸುತ್ತದೆ’ ಎಂದು ಜಯಶ್ರೀ ಆರಾಧ್ಯ ಹೇಳಿದ್ದಾರೆ. ನಾಲ್ಕು ವಾರಗಳ ಕಾಲ​ ಸ್ಪರ್ಧೆ ನೀಡಿಕೊಂಡು ಬಂದಿದ್ದ ಅವರು ಈಗ ಏಕಾಏಕಿ ಐದನೇ ವಾರದಲ್ಲಿ ಡಲ್​ ಆಗಿದ್ದಾರೆ. ಚೈತ್ರಾ ಇಲ್ಲ ಎಂಬ ಕೊರಗು ಅವರನ್ನು ಹೆಚ್ಚು ಕಾಡುತ್ತಿದೆ. ಇದರಿಂದ ಅವರು ಆತ್ಮವಿಶ್ವಾಸ ಕಳೆದುಕೊಂಡರೆ ಐದನೇ ವಾರದ ಬಿಗ್​ ಬಾಸ್​ ಆಟ ಅವರಿಗೆ ಹೆಚ್ಚು ಕಷ್ಟ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:06 pm, Sun, 4 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ