Shah Rukh Khan: ಶಾರುಖ್​ ಖಾನ್​ ಮನೆಯಲ್ಲಿ ಗಣೇಶ ಚತುರ್ಥಿ; ಮೋದಕ ತಿಂದು ನಟ ಹೇಳಿದ್ದೇನು?

Ganesh Chaturthi 2022 | SRK: ಶಾರುಖ್​ ಖಾನ್​ ಮನೆಯ ಗಣಪತಿ ಫೋಟೋ ಸಖತ್​ ವೈರಲ್ ಆಗಿದೆ. ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಗಣೇಶ ಚತುರ್ಥಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

Shah Rukh Khan: ಶಾರುಖ್​ ಖಾನ್​ ಮನೆಯಲ್ಲಿ ಗಣೇಶ ಚತುರ್ಥಿ; ಮೋದಕ ತಿಂದು ನಟ ಹೇಳಿದ್ದೇನು?
ಗಣೇಶ ಮೂರ್ತಿ, ಶಾರುಖ್​ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on:Sep 01, 2022 | 8:34 AM

ದೇಶಾದ್ಯಂತ ಗಣೇಶ ಚತುರ್ಥಿ (Ganesh Chaturthi 2022) ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಮನೆ-ಮನಗಳಲ್ಲಿ ಗಣಪತಿಯ ಆರಾಧನೆ ನಡೆದಿದೆ. ಜನ ಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಅದ್ದೂರಿಯಾಗಿ ಈ ಹಬ್ಬ ಆಚರಿಸಿದ್ದಾರೆ. ಬಾಲಿವುಡ್​ನ ಅನೇಕ ನಟ-ನಟಿಯರ ಮನೆಯಲ್ಲಿ ಗಣೇಶನನ್ನು ಕೂರಿಸಿ ಸಂಭ್ರಮಿಸಲಾಗಿದೆ. ಶಾರುಖ್​ ಖಾನ್​ ಕೂಡ ಇದಕ್ಕೆ ಹೊರತಾಗಿಲ್ಲ. ಅವರ ಮುಂಬೈ ನಿವಾಸ ಮನ್ನತ್​ನಲ್ಲಿ (Mannat) ಗಣೇಶ ಚತುರ್ಥಿ ಸಂಭ್ರಮ ಕಳೆಗಟ್ಟಿದೆ. ಎಂದಿನ ಶೂಟಿಂಗ್​ ಕೆಲಸಗಳಿಗೆ ಶಾರುಖ್ ಖಾನ್ (Shah Rukh Khan)​ ಬ್ರೇಕ್​ ನೀಡಿದ್ದಾರೆ. ಮನೆಯವರ ಜೊತೆ ಸೇರಿ ಹಬ್ಬ ಆಚರಿಸಿದ್ದಾರೆ. ಮನೆಯಲ್ಲಿ ಹಬ್ಬದ ವಾತಾವರಣ ಹೇಗಿತ್ತು ಎಂಬುದನ್ನು ತಿಳಿಸಲು ಅವರು ಫೋಟೋವೊಂದನ್ನು ಪೋಸ್ಟ್​ ಮಾಡಿದ್ದಾರೆ.

‘ಮನೆಗೆ ಗಣಪತಿಯನ್ನು ಬರಮಾಡಿಕೊಳ್ಳಲಾಯಿತು. ನಂತರ ಸವಿದ ಮೋದಕ ತುಂಬ ರುಚಿಕರವಾಗಿತ್ತು. ಪರಿಶ್ರಮ ಮತ್ತು ದೇವರ ಮೇಲಿನ ನಂಬಿಕೆಯಿಂದ ನಾವು ನಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು’ ಎಂದು ಶಾರುಖ್​ ಖಾನ್​ ಪೋಸ್ಟ್​ ಮಾಡಿದ್ದಾರೆ. ತಮ್ಮ ಮನೆಯಲ್ಲಿ ಕೂರಿಸಿದ ಗಣೇಶನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
Shah Rukh Khan: ಶಾರುಖ್​ ಖಾನ್​ ಬಾಲಿವುಡ್​ಗೆ ಕಾಲಿಟ್ಟು ಕಳೆಯಿತು 30 ವರ್ಷ; 14 ಬಾರಿ ‘ಫಿಲ್ಮ್​ಫೇರ್’​ ಪಡೆದ ಕಿಂಗ್​ ಖಾನ್
Image
Suhana Khan: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ಗೆ ಏನು ಚಿಂತೆ? ಗಡಿಬಿಡಿಯಲ್ಲಿ ಹೊರಟ ಸ್ಟಾರ್​ ಕಿಡ್​
Image
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?
Image
8 ಪ್ಯಾಕ್​ ಅವತಾರದಲ್ಲಿ ಬಂದ ಶಾರುಖ್​ ಖಾನ್​; ಮಸ್ತ್​ ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?

ಶಾರುಖ್​ ಖಾನ್​ ಮನೆಯ ಗಣಪತಿ ಫೋಟೋ ಸಖತ್​ ವೈರಲ್ ಆಗಿದೆ. 8 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಲೈಕ್​ ಮಾಡಿದ್ದಾರೆ. 11 ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ. ‘ಶಾರುಖ್​ ಖಾನ್​ ಅವರು ಎಲ್ಲ ಧರ್ಮವನ್ನು ಗೌರವಿಸುವಂತಹ ವ್ಯಕ್ತಿ’ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಎಲ್ಲರೂ ಗಣೇಶ ಚತುರ್ಥಿ ಹಬ್ಬದ ಶುಭಾಶಯ ಕೋರಿದ್ದಾರೆ. ಶಾರುಖ್​ ಖಾನ್​ ಮಾತ್ರವಲ್ಲದೇ ಆಲಿಯಾ ಭಟ್​, ಶಿಲ್ಪಾ ಶೆಟ್ಟಿ, ಅಮಿತಾಭ್​ ಬಚ್ಚನ್​, ಶ್ರದ್ಧಾ ಕಪೂರ್​ ಸೇರಿದಂತೆ ಎಲ್ಲ ಸೆಲೆಬ್ರಿಟಿಗಳ ಮನೆಯಲ್ಲೂ ಗಣೇಶ ಚತುರ್ಥಿಯನ್ನು ಸಡಗರದಿಂದ ಆಚರಿಸಲಾಗಿದೆ.

View this post on Instagram

A post shared by Shah Rukh Khan (@iamsrk)

ಇತ್ತೀಚಿನ ವರ್ಷಗಳಲ್ಲಿ ಶಾರುಖ್​ ಖಾನ್​ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿಲ್ಲ. ನಟಿಸಿದ ಎಲ್ಲ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಮುಗ್ಗರಿಸಿವೆ. ಹಾಗಾಗಿ ಅವರು ಅದ್ದೂರಿಯಾಗಿ ಕಮ್​ಬ್ಯಾಕ್​ ಮಾಡಲು ಕಾದಿದ್ದಾರೆ. ಸದ್ಯ ಅವರು ಹಲವು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಪಠಾಣ್​’, ಜವಾನ್​’ ಹಾಗೂ ‘ಡಂಕಿ’ ಸಿನಿಮಾಗಳು ಸಖತ್​ ನಿರೀಕ್ಷೆ ಮೂಡಿಸಿವೆ. ಘಟಾನುಘಟಿ ನಿರ್ದೇಶಕರು ಈ ಚಿತ್ರಗಳಿಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ.

ಆದಷ್ಟು ಬೇಗ ಶಾರುಖ್​ ಖಾನ್​ ಅವರನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂದು ಅಭಿಮಾನಿಗಳು ಕಾದಿದ್ದಾರೆ. 2018ರಲ್ಲಿ ತೆರೆಗೆ ಬಂದು ‘ಜೀರೋ’ ಬಳಿಕ ಶಾರುಖ್​ ಖಾನ್​ ಅವರ ಬೇರೆ ಯಾವುದೇ ಸಿನಿಮಾ ತೆರೆಕಂಡಿಲ್ಲ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:22 am, Thu, 1 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ