AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Independence Day: ಶಾರುಖ್​ ಖಾನ್​ ಮನೆ ಮೇಲೆ ರಾರಾಜಿಸಿತು ರಾಷ್ಟ್ರ ಧ್ವಜ; ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ ಕುಟುಂಬ

Shah Rukh Khan Mannat: ಹರ್​ ಘರ್​ ತಿರಂಗ ಅಭಿಯಾನದಲ್ಲಿ ಶಾರುಖ್​ ಖಾನ್​ ಭಾಗಿ ಆಗಿದ್ದಾರೆ. ಆರ್ಯನ್​ ಖಾನ್​, ಅಬ್​ರಾಮ್​, ಗೌರಿ ಖಾನ್​ ಜೊತೆಗೂಡಿ ಅವರು​ ‘ಮನ್ನತ್​’ ನಿವಾಸದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ.

Independence Day: ಶಾರುಖ್​ ಖಾನ್​ ಮನೆ ಮೇಲೆ ರಾರಾಜಿಸಿತು ರಾಷ್ಟ್ರ ಧ್ವಜ; ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ ಕುಟುಂಬ
‘ಮನ್ನತ್’ ನಿವಾಸದಲ್ಲಿ ತ್ರಿವರ್ಣ ಧ್ವಜ
TV9 Web
| Edited By: |

Updated on: Aug 15, 2022 | 8:35 AM

Share

75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಹರ್​ ಘರ್​ ತಿರಂಗ (Har Ghar Tiranga) ಅಭಿಯಾನಕ್ಕೆ ದೇಶದ ಜನತೆ ಸಾಥ್​ ನೀಡಿದ್ದಾರೆ. ರಾಷ್ಟ್ರದ ಕೋಟ್ಯಂತರ ಮನೆ, ಮಳಿಗೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕೂಡ ಹರ್​ ಘರ್​ ತಿರಂಗ ಅಭಿಯಾನದಲ್ಲಿ ಭಾಗಿ ಆಗಿದ್ದಾರೆ. ಬಾಲಿವುಡ್​ ನಟ-ನಟಿಯರ ಮನೆಯಲ್ಲಿ ರಾಷ್ಟ್ರ ಧ್ವಜ ರಾರಾಜಿಸುತ್ತಿದೆ. ಆಮಿರ್​ ಖಾನ್​, ಶಾರುಖ್​ ಖಾನ್​ (Shah Rukh Khan), ಸಲ್ಮಾನ್​ ಖಾನ್​ ಮುಂತಾದ ನಟರು ತ್ರಿವರ್ಣ ಧ್ವಜ(National Flag) ಹಾರಿಸಿದ್ದಾರೆ. ಆ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಆ ಮೂಲಕ ನಾಡಿನ ಜನತೆಗೆ ಸ್ವಾತಂತ್ರೋತ್ಸವದ ಶುಭಾಶಯ ತಿಳಿಸಲಾಗುತ್ತಿದೆ.

ಶಾರುಖ್​ ಖಾನ್​ ಅವರ ಸುಂದರವಾದ ಬಂಗಲೆ ಮುಂಬೈನಲ್ಲಿ ಇದೆ. ಇದಕ್ಕೆ ‘ಮನ್ನತ್’ ಎಂದು ಹೆಸರು ಇಡಲಾಗಿದೆ. ಹಲವು ವಿಶೇಷ ಸಂದರ್ಭಗಳಿಗೆ ಈ ಮನೆ ಸಾಕ್ಷಿ ಆಗುತ್ತದೆ. ಶಾರುಖ್​ ಅವರನ್ನು ನೋಡಬೇಕು ಎಂದು ಈ ಮನೆಯ ಮುಂದೆ ಸಾವಿರಾರು ಜನರು ಜಮಾಯಿಸುತ್ತಾರೆ. ‘ಮನ್ನತ್​’ನಲ್ಲಿ ಆಗಾಗ ಸೆಲೆಬ್ರಿಟಿಗಳಿಗಾಗಿ ಔತಣಕೂಟ ನಡೆಯುತ್ತದೆ. ಈಗ ಈ ಬಂಗಲೆ ಮೇಲೆ ರಾಷ್ಟ್ರ ಧ್ವಜ ಹಾರಾಡುತ್ತಿದೆ.

ಇದನ್ನೂ ಓದಿ
Image
Har Ghar Tiranga: ಚಿತ್ರಮಂದಿರದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ‘ಗೋಲ್ಡನ್​ ಸ್ಟಾರ್​’ ಗಣೇಶ್​
Image
Aamir Khan: ಆಮಿ​ರ್​ ಖಾನ್​ ಮನೆ ಮೇಲೆ ಹಾರಾಡಿದ ರಾಷ್ಟ್ರ ಧ್ವಜ; ಫೋಟೋ ವೈರಲ್​
Image
ಸುದೀಪ್​, ಉಪ್ಪಿ, ತಾರಾ, ರಮೇಶ್​ ಮನೆ ಮೇಲೆ ತ್ರಿವರ್ಣ ಧ್ವಜ; ಇಲ್ಲಿದೆ ಫೋಟೋ ಗ್ಯಾಲರಿ
Image
‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಯಶ್ ಸಾಥ್​; ಫ್ಯಾನ್ಸ್ ಬಳಿ ರಾಕಿಂಗ್ ಸ್ಟಾರ್ ಹೊಸ ಕೋರಿಕೆ

ಹರ್​ ಘರ್​ ತಿರಂಗ ಅಭಿಯಾನದಲ್ಲಿ ಶಾರುಖ್​ ಖಾನ್​ ಕುಟುಂಬ ಭಾಗಿ ಆಗಿದೆ. ಪುತ್ರರಾದ ಆರ್ಯನ್​ ಖಾನ್​, ಅಬ್​ರಾಮ್​, ​ಪತ್ನಿ ಗೌರಿ ಖಾನ್​ ಅವರ ಜೊತೆಗೂಡಿ ಶಾರುಖ್​ ಖಾನ್​ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಈ ಫೋಟೋವನ್ನು ಗೌರಿ ಖಾನ್​ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

View this post on Instagram

A post shared by Gauri Khan (@gaurikhan)

ದೇಶಭಕ್ತಿ ಸಿನಿಮಾ ಮಾಡುವಲ್ಲಿಯೂ ಶಾರುಖ್​ ಖಾನ್​ ಹಿಂದೆ ಬಿದ್ದಿಲ್ಲ. ‘ಸ್ವದೇಸ್​’, ‘ಚಕ್​ ದೇ ಇಂಡಿಯಾ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಪ್ರಸ್ತುತ ಅವರ ಅನೇಕ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬಾಕ್ಸ್​ ಆಫೀಸ್​ನಲ್ಲಿ ಅವರು ಗೆಲುವು ಕಾಣದೇ ಹಲವು ವರ್ಷ ಕಳೆದಿದೆ. ಹಾಗಾಗಿ ತುರ್ತಾಗಿ ಅವರಿಗೊಂದು ಹಿಟ್​ ಬೇಕಿದೆ. ‘ಪಠಾಣ್​’, ‘ಜವಾನ್​’ ‘ಡಂಕಿ’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ. ಘಟಾನುಘಟಿ ನಿರ್ದೇಶಕರ ಜೊತೆ ಶಾರುಖ್​ ಕೈ ಜೋಡಿಸಿದ್ದು, ಭರ್ಜರಿ ಕಮ್​ ಬ್ಯಾಕ್​ ಮಾಡಲು ಸೂಚನೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​