Aamir Khan: ಆಮಿ​ರ್​ ಖಾನ್​ ಮನೆ ಮೇಲೆ ಹಾರಾಡಿದ ರಾಷ್ಟ್ರ ಧ್ವಜ; ಫೋಟೋ ವೈರಲ್​

Aamir Khan | Har Ghar Tiranga: ಅನೇಕ ಸೆಲೆಬ್ರಿಟಿಗಳ ಮನೆ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ನಟ ಆಮಿರ್​ ಖಾನ್​ ಕೂಡ ‘ಹರ್​ ಘರ್​ ತಿರಂಗ’ ಅಭಿಯಾನದಲ್ಲಿ ಭಾಗಿ ಆಗಿದ್ದಾರೆ.

Aamir Khan: ಆಮಿ​ರ್​ ಖಾನ್​ ಮನೆ ಮೇಲೆ ಹಾರಾಡಿದ ರಾಷ್ಟ್ರ ಧ್ವಜ; ಫೋಟೋ ವೈರಲ್​
ಆಮಿರ್ ಖಾನ್. ಇರಾ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on:Aug 14, 2022 | 5:32 PM

ಬಾಲಿವುಡ್​ ನಟ ಆಮಿರ್​ ಖಾನ್ (Aamir Khan)​ ಅವರು ಪ್ರತಿದಿನ ಒಂದೊಂದು ಕಾರಣಕ್ಕೆ ಸುದ್ದಿ ಆಗುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅವರನ್ನು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಅವರ ಸಿನಿಮಾಗಳನ್ನು ಬಹಿಷ್ಕಾರ ಮಾಡಲೆಂದೇ ಒಂದು ವರ್ಗದ ಜನರು ಪಣ ತೊಟ್ಟಂತಿದೆ. ಇತ್ತೀಚೆಗೆ ತೆರೆಕಂಡಿರುವ ಆಮಿರ್​ ಖಾನ್​ ಅವರ ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೊರಗುತ್ತಿದೆ. ಈ ನಡುವೆ ಅವರ ಮನೆ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಹರ್​ ಘರ್​ ತಿರಂಗ’ ಅಭಿಯಾನದಲ್ಲಿ ಆಮಿರ್​ ಖಾನ್​ ಭಾಗಿ ಆಗಿದ್ದಾರೆ. ಅವರ ಮನೆಯಲ್ಲಿ ತ್ರಿವರ್ಣ ಧ್ವಜ (National Flag) ಹಾರಿಸಲಾಗಿದೆ. ಅದರ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ಹಿಂದೆ ಆಮಿರ್​ ಖಾನ್​ ಅವರು ಅಸಹಿಷ್ಣುತೆ ಬಗ್ಗೆ ಮಾತನಾಡಿ ಅನೇಕರ ಕೆಂಗಣ್ಣಿಗೆ ಗುರಿ ಆಗಿದ್ದರು. ಅದರ ಬಿಸಿ ಇನ್ನೂ ತಣ್ಣಗಾಗಿಲ್ಲ. ಅನೇಕ ಕಡೆಗಳಲ್ಲಿ ‘ಲಾಲ್​ ಸಿಂಗ್ ಚಡ್ಡಾ’ ಸಿನಿಮಾವನ್ನು ಬಹಿಷ್ಕಾರ ಮಾಡಲಾಗಿದೆ. ಒಂದು ರೀತಿಯಲ್ಲಿ ಆಮಿರ್​ ಖಾನ್​ ಅವರನ್ನು ದೇಶ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ತಾವು ಆ ರೀತಿಯ ವ್ಯಕ್ತಿ ಅಲ್ಲ ಎಂಬುದನ್ನು ಆಮಿರ್​ ಖಾನ್​ ಪದೇಪದೇ ಒತ್ತಿ ಹೇಳುತ್ತಿದ್ದಾರೆ.

ಇತ್ತೀಚಿನ ಸಂದರ್ಶನದಲ್ಲಿ ಆಮಿರ್​ ಖಾನ್​ ಅವರು ಈ ಕುರಿತು ಮಾತನಾಡಿದ್ದರು. ‘ಅನಗತ್ಯವಾಗಿ ನನ್ನ ಬಗ್ಗೆ ದ್ವೇಷ ಹಬ್ಬಿಸುತ್ತಿರುವುದರಿಂದ ನನಗೆ ಬೇಸರ ಆಗುತ್ತದೆ. ನಾನು ಭಾರತವನ್ನು ಇಷ್ಟಪಡುವ ವ್ಯಕ್ತಿ ಅಲ್ಲ ಎಂದು ಕೆಲವರು ನಂಬಿದ್ದಾರೆ. ಆದರೆ ಅದು ನಿಜವಲ್ಲ. ಜನರು ಹಾಗೆ ಅಂದುಕೊಂಡಿರುವುದು ದುರದೃಷ್ಟಕರ. ದಯವಿಟ್ಟು ನನ್ನ ಸಿನಿಮಾಗಳನ್ನು ನೋಡಿ. ಬಹಿಷ್ಕಾರ ಮಾಡಬೇಡಿ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ
Image
Box Office Collection: ಆಮಿರ್​​ Vs ಅಕ್ಷಯ್​​; ಮೊದಲ ದಿನ ‘ಲಾಲ್​ ಸಿಂಗ್​ ಚಡ್ಡಾ’ ಗಳಿಕೆ 12 ಕೋಟಿ ರೂ., ‘ರಕ್ಷಾ ಬಂಧನ್’​ಗೆ 8.20 ಕೋಟಿ
Image
Laal Singh Chaddha Twitter review: ಲಾಲ್​ ಸಿಂಗ್ ಚಡ್ಡಾ ಟ್ವಿಟರ್​ ವಿಮರ್ಶೆ: ಅಮೀರ್ ಅಭಿನಯಕ್ಕೆ ಸಿನಿಪ್ರಿಯರು ಫಿದಾ
Image
Aamir Khan: ದೇಶದ ಜನರ ಕ್ಷಮೆ ಕೇಳಿದ ಆಮಿರ್ ಖಾನ್​; ‘ಲಾಲ್​ ಸಿಂಗ್ ಚಡ್ಡಾ’ ರಿಲೀಸ್​ ವೇಳೆ ಹೊಸ ಹೇಳಿಕೆ
Image
Aamir Khan: ‘ನನಗೆ ಭಾರತ ಇಷ್ಟವಿಲ್ಲ ಅನ್ನೋದು ಸುಳ್ಳು, ನನ್ನ ಸಿನಿಮಾ ಬಹಿಷ್ಕಾರ ಮಾಡಬೇಡಿ ಪ್ಲೀಸ್​’: ಆಮಿರ್​ ಖಾನ್​

‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಬಿಡುಗಡೆಯ ಹೊಸ್ತಿಲಿನಲ್ಲಿ ಆಮಿರ್​ ಖಾನ್​ ಅವರು ದೇಶದ ಜನರ ಕ್ಷಮೆ ಕೇಳಿದ ಸುದ್ದಿ ಕೂಡ ಗಮನ ಸೆಳೆಯಿತು. ‘ಯಾವುದೇ ರೀತಿಯಲ್ಲಿ ನಾನು ಯಾರ ಭಾವನೆಗಾದರೂ ಧಕ್ಕೆ ತಂದಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಯಾರನ್ನೂ ನೋಯಿಸಲು ನಾನು ಬಯಸುವುದಿಲ್ಲ. ಯಾರಿಗಾದರೂ ನನ್ನ ಸಿನಿಮಾ ನೋಡಲು ಇಷ್ಟವಿಲ್ಲ ಎಂದಾದರೆ ಅವರ ಭಾವನೆಯನ್ನೂ ನಾನು ಗೌರವಿಸುತ್ತೇನೆ’ ಎಂದು ಆಮಿರ್​ ಖಾನ್​ ಇತ್ತೀಚೆಗೆ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:32 pm, Sun, 14 August 22

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ