ಸುಕೇಶ್ ಕಳ್ಳಾಟ ಜಾಕ್ವೆಲಿನ್​ಗೆ ಗೊತ್ತಿತ್ತು, ಆದರೂ ರಿಲೇಶನ್​ಶಿಪ್​ನಲ್ಲಿದ್ದರು; ಚಾರ್ಜ್​ಶೀಟ್​​ನಲ್ಲಿ ಅಚ್ಚರಿಯ ಉಲ್ಲೇಖ

ಸುಕೇಶ್ ಬಂಧನದ ನಂತರದಲ್ಲಿ ಜಾಕ್ವೆಲಿನ್ ಹೆಸರು ರಿವೀಲ್ ಆಯಿತು. ‘ಸುಕೇಶ್ ಚಂದ್ರಶೇಖರ್ ಪರಿಚಯ ಇದೆ. ಆದರೆ, ಅವರು ನಡೆಸುತ್ತಿದ್ದ ಈ ಅಕ್ರಮಗಳ ಬಗ್ಗೆ ನನಗೆ ತಿಳಿದಿರಲಿಲ್ಲ’ ಎಂದು ಜಾಕ್ವೆಲಿನ್ ಹೇಳಿದ್ದರು. ಆದರೆ, ಇದು ಸುಳ್ಳು ಎಂಬುದನ್ನು ಇಡಿ ಅಧಿಕಾರಿಗಳು ಹೇಳಿದ್ದಾರೆ.

ಸುಕೇಶ್ ಕಳ್ಳಾಟ ಜಾಕ್ವೆಲಿನ್​ಗೆ ಗೊತ್ತಿತ್ತು, ಆದರೂ ರಿಲೇಶನ್​ಶಿಪ್​ನಲ್ಲಿದ್ದರು; ಚಾರ್ಜ್​ಶೀಟ್​​ನಲ್ಲಿ ಅಚ್ಚರಿಯ ಉಲ್ಲೇಖ
ಜಾಕ್ವೆಲಿನ್-ಸುಕೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 31, 2022 | 10:00 PM

ಸುಕೇಶ್ ಚಂದ್ರಶೇಖರ್ (Sukesh Chandrashekhar) ನಡೆಸಿದ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೆಸರು ಸೇರಿಕೊಂಡಿದೆ. 200 ಕೋಟಿ ರೂಪಾಯಿ ವಂಚನೆ ಪ್ರಕರಣ ಇದಾಗಿದ್ದು, ಇದಕ್ಕೂ ಜಾಕ್ವೆಲಿನ್​ಗೂ ನಂಟಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಸಾಕ್ಷಿ ಸಿಕ್ಕಿದೆ. ಈ ಕಾರಣಕ್ಕೆ ಚಾರ್ಜ್​ಶೀಟ್​ನಲ್ಲಿ ಜಾಕ್ವೆಲಿನ್ (Jacqueline Fernandez) ಅವರನ್ನು ಆರೋಪಿ ಎಂದು ಇಡಿ ಹೆಸರಿಸಿದೆ. ಇದರಿಂದ ನಟಿಗೆ ಸಂಕಷ್ಟ ಹೆಚ್ಚಿದೆ. ಈ ಮಧ್ಯೆ ಇಡಿ ಅಧಿಕಾರಿಗಳು ಶಾಕಿಂಗ್ ವಿಚಾರ ಒಂದನ್ನು ರಿವೀಲ್ ಮಾಡಿದ್ದಾರೆ. ಸುಕೇಶ್ ನಡೆಸುತ್ತಿದ್ದ ಈ ಅಕ್ರಮಗಳ ಬಗ್ಗೆ ನಟಿಗೆ ತಿಳಿದಿತ್ತು ಎಂಬ ಮಾಹಿತಿ ಬಹಿರಂಗ ಆಗಿದೆ.

ಸುಕೇಶ್ ಬಂಧನದ ನಂತರದಲ್ಲಿ ಜಾಕ್ವೆಲಿನ್ ಹೆಸರು ರಿವೀಲ್ ಆಯಿತು. ‘ಸುಕೇಶ್ ಚಂದ್ರಶೇಖರ್ ಪರಿಚಯ ಇದೆ. ಆದರೆ, ಅವರು ನಡೆಸುತ್ತಿದ್ದ ಈ ಅಕ್ರಮಗಳ ಬಗ್ಗೆ ನನಗೆ ತಿಳಿದಿರಲಿಲ್ಲ’ ಎಂದು ಜಾಕ್ವೆಲಿನ್ ಹೇಳಿದ್ದರು. ಆದರೆ, ಇದು ಸುಳ್ಳು ಎಂಬುದನ್ನು ಜಾರಿನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಜಾಕ್ವೆಲಿನ್​​ಗೆ ಎದುರಾಗಿದ್ದ ಸಂಕಷ್ಟ ಮತ್ತಷ್ಟು ಹೆಚ್ಚಿದೆ.

‘ಸುಕೇಶ್ ಚಂದ್ರಶೇಖರ್ ನಡೆಸುತ್ತಿದ್ದ ಅಕ್ರಮಗಳ ಬಗ್ಗೆ ಜಾಕ್ವೆಲಿನ್​ಗೆ ತಿಳಿದಿತ್ತು. ಆದಾಗ್ಯೂ ಅವರು ಸುಕೇಶ್​ನಿಂದ ಆರ್ಥಿಕ ಸಹಾಯವನ್ನು ಪಡೆದುಕೊಳ್ಳುತ್ತಿದ್ದರು. ಜಾಕ್ವೆಲಿನ್ ಅವರ ಕೇಶ ವಿನ್ಯಾಸಕ ಶಾನ್ ಅವರು ಸುಕೇಶ್​ ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದ್ದರು. ಆದರೆ, ಜಾಕ್ವೆಲಿನ್ ಅವರು ಈ ವಿಚಾರವನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಸುಕೇಶ್ ಜತೆ ರಿಲೇಶನ್​ಶಿಪ್ ಮುಂದುವರಿಸಿದ್ದರು’ ಎಂದು ಇಡಿ ತನ್ನ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಿದೆ.

ಇದನ್ನೂ ಓದಿ
Image
‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್​ ಖಾನ್​; ಕಾರಣ ಏನು?
Image
Salman Khan: ‘ವಿಕ್ರಾಂತ್​ ರೋಣ’ ವೇದಿಕೆಯಲ್ಲಿ ಸುದೀಪ್​-ಸಲ್ಮಾನ್​​; ಕಿಚ್ಚನ ಜತೆಗಿನ ಬಾಂಧವ್ಯದ ಬಗ್ಗೆ ಸಲ್ಲು ಮಾತು
Image
Kichcha Sudeep: ಮುಂಬೈ, ಚೆನ್ನೈನಿಂದಲೂ ಸುದೀಪ್​ ಕಟೌಟ್​ಗೆ ಬಂತು ಬೇಡಿಕೆ; ಹೇಗಿದೆ ನೋಡಿ ‘ವಿಕ್ರಾಂತ್​ ರೋಣ’ ಕ್ರೇಜ್​
Image
Kichcha Sudeep: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡ ‘ವಿಕ್ರಾಂತ್​ ರೋಣ’ ಟ್ರೇಲರ್​

ಸುಕೇಶ್ ಚಂದ್ರಶೇಖರ್ ಹಲವು ಉದ್ಯಮಿಗಳಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚನೆ ಮಾಡಿದ್ದ. ಈ ಪ್ರಕರಣ ಬೆಳಕಿಗೆ ಬಂದ ನಂತರದಲ್ಲಿ ಆತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಜಾಕ್ವೆಲಿನ್ ಹೆಸರನ್ನು ಆತ ರಿವೀಲ್ ಮಾಡಿದ್ದ. ಅಷ್ಟೇ ಅಲ್ಲದೆ ಜಾಕ್ವೆಲಿನ್ ಹಾಗು ತಾನು ಒಟ್ಟಾಗಿ ಕಳೆದ ಖಾಸಗಿ ಫೋಟೋಗಳನ್ನು ಲೀಕ್ ಮಾಡಿಸಿದ್ದ. ಈ ಫೋಟೋಗಳು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು.

ಇದನ್ನೂ ಓದಿ: ಸಂಕಷ್ಟ ಪರಿಹಾರಕ್ಕೆ ಕೋರಿ ದೇವರ ಮೊರೆ ಹೋದ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಇತ್ತೀಚೆಗೆ ತೆರೆಗೆ ಬಂದ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಒಂದು ಪಾತ್ರ ಮಾಡಿದ್ದರು. ಅವರು ಹೆಜ್ಜೆ ಹಾಕಿದ ‘ರಾ ರಾ ರಕ್ಕಮ್ಮ’ ಹಾಡು ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈ ಹಾಡಿನಿಂದ ಸಿನಿಮಾದ ಮೈಲೇಜ್ ಹೆಚ್ಚಿತ್ತು. ಜಾಕ್ವೆಲಿನ್ ಅವರ ಡ್ಯಾನ್ಸ್ ನೋಡಿ ಪಡ್ಡೆಗಳು ಕಣ್ಣರಳಿಸಿದ್ದರು.

Published On - 10:00 pm, Wed, 31 August 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ