AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KRK: ಬಂಧನದ ಬಳಿಕ ಕಿರಿಕ್​ ನಟನಿಗೆ ಎದೆನೋವು ಶುರು; ಕಮಾಲ್​ ಆರ್​. ಖಾನ್​ಗೆ ಹೆಚ್ಚಿತು ಸಂಕಷ್ಟ

Kamaal R Khan Arrest: ಕಮಾಲ್​ ಆರ್​. ಖಾನ್​ ಅವರು ನ್ಯಾಯಾಂಗ ಬಂಧನದಲ್ಲಿದಾರೆ. ಅರೆಸ್ಟ್​ ಆದ ಕೆಲವೇ ಗಂಟೆಗಳಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ.

KRK: ಬಂಧನದ ಬಳಿಕ ಕಿರಿಕ್​ ನಟನಿಗೆ ಎದೆನೋವು ಶುರು; ಕಮಾಲ್​ ಆರ್​. ಖಾನ್​ಗೆ ಹೆಚ್ಚಿತು ಸಂಕಷ್ಟ
ಕಮಾಲ್ ಆರ್. ಖಾನ್
TV9 Web
| Edited By: |

Updated on:Aug 31, 2022 | 8:25 AM

Share

ವಿವಾದಗಳಿಂದ ಕುಖ್ಯಾತಿ ಪಡೆದ ವಿಮರ್ಶಕ, ನಟ ಕಮಾಲ್​ ಆರ್​. ಖಾನ್ (Kamaal R Khan)​ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಇತ್ತೀಚೆಗೆಷ್ಟೇ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಸೆಲೆಬ್ರಿಟಿಗಳು ಮತ್ತು ಮಹಿಳೆಯರ ಬಗ್ಗೆ ಕೆಟ್ಟದಾಗಿ ಪೋಸ್ಟ್​ ಮಾಡಿದ ಆರೋಪ ಅವರ ಮೇಲಿದೆ. ದುಬೈಗೆ ತೆರಳಿದ್ದ ಕಮಾಲ್​ ಆರ್​. ಖಾನ್​ ಅವರು ಭಾರತಕ್ಕೆ ವಾಪಸ್​ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಅರೆಸ್ಟ್​ (KRK Arrest) ಮಾಡಲಾಯಿತು. ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಕೋರ್ಟ್​ ಆದೇಶ ನೀಡಿದೆ. ಆ ಬಳಿಕ ಕಮಾಲ್​ ಆರ್​. ಖಾನ್​ (ಕೆಆರ್​ಕೆ) ಅವರಿಗೆ ಎದೆನೋವು (Chest Pain) ಕಾಣಿಸಿಕೊಂಡಿದೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಶತಾಬ್ದಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ ಎಂದು ವರದಿ ಆಗಿದೆ. ‘ಹಿಂದಿಯ ‘ಲಕ್ಷ್ಮೀ’ ಸಿನಿಮಾಗೆ ಸಂಬಂಧಿಸಿದಂತೆ ನಟ ಅಕ್ಷಯ್​ ಕುಮಾ​ರ್​ ಮತ್ತು ಚಿತ್ರದ ನಿರ್ಮಾಪಕರ ವಿರುದ್ಧ ಟ್ವೀಟ್​ ಮಾಡಿದ್ದಕ್ಕಾಗಿ ಕಮಾಲ್​ ಆರ್​. ಖಾನ್​ ಅವರನ್ನು ಅರೆಸ್ಟ್​ ಮಾಡಲಾಗಿದೆ’ ಎಂದು ಕೆಆರ್​ಕೆ ಪರ ವಕೀಲರು ಹೇಳಿಕೆ ನೀಡಿದ್ದಾರೆ.

ಅನೇಕ ವಿವಾದಾತ್ಮಕ ಟ್ವೀಟ್​ ಮತ್ತು ವಿಡಿಯೋಗಳ ಮೂಲಕ ಕಮಾಲ್​ ಆರ್​. ಖಾನ್​ ಕಿರಿಕ್​ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಅದರಿಂದ ಈಗ ಅವರಿಗೆ ಬ್ಯಾಕ್​ ಟು ಬ್ಯಾಕ್​ ಸಂಕಷ್ಟ ಎದುರಾಗುತ್ತಿದೆ. ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಕಮೆಂಟ್​ಗಳನ್ನು ಮಾಡಿದ್ದಕ್ಕಾಗಿ ಕೆಆರ್​ಕೆ ವಿರುದ್ಧ ದೂರು ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಮುಂಬೈ ಪೊಲೀಸರಿಗೆ ತಿಳಿಸಿದೆ.

ಇದನ್ನೂ ಓದಿ
Image
RRR ಕಲೆಕ್ಷನ್​ ರಿಪೋರ್ಟ್​ ಸುಳ್ಳು ಎಂದ ಕಮಾಲ್​ ಆರ್​ ಖಾನ್​; ಸಾಬೀತು ಮಾಡುವುದಾಗಿ ಘೋಷಣೆ
Image
‘ಭಕ್ತರ ಭಕ್ತ ಮಹಾಭಕ್ತ’, ‘ಕಾಶ್ಮೀರದ ಶರ್ಮಾ’: ಖಾನ್​ ಚಿತ್ರಕ್ಕೆ ಹೊಸ ಹೆಸರು ಸೂಚಿಸಿದ ಇನ್ನೊಬ್ಬ ಖಾನ್​
Image
‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​
Image
ಸಲ್ಮಾನ್​ ಖಾನ್​ ವಿರುದ್ಧ ಯಾವುದೇ ಹೇಳಿಕೆ ನೀಡಬೇಡಿ; ಕಮಾಲ್​ ಆರ್​ ಖಾನ್​ಗೆ ಕೋರ್ಟ್​ ಆದೇಶ

ನಟನಾಗಬೇಕು ಎಂಬುದು ಕಮಾಲ್​ ಆರ್​. ಖಾನ್ ಅವರ ಉದ್ದೇಶ ಆಗಿತ್ತು. ಆದರೆ ಚಿತ್ರರಂಗದಲ್ಲಿ ಅವರಿಗೆ ಸಕ್ಸಸ್​ ಸಿಗಲಿಲ್ಲ. ಅವರೇ ನಿರ್ಮಿಸಿ, ನಟಿಸಿದ್ದ ‘ದೇಶದ್ರೋಹಿ’ ಸಿನಿಮಾ ಹೀನಾಯವಾಗಿ ಸೋತಿತು. ಬಳಿಕ ಬೇರೆಯವರ ಸಿನಿಮಾಗಳನ್ನು ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡುವುದನ್ನೇ ಅವರು ಕಾಯಕ ಮಾಡಿಕೊಂಡಿದ್ದಾರೆ. ಅವರ ಯೂಟ್ಯೂಬ್​ ಚಾನೆಲ್​ಗೆ​ 10 ಲಕ್ಷಕ್ಕೂ ಅಧಿಕ subscribes ಇದ್ದಾರೆ. ಪದೇಪದೇ ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಟ್ವೀಟ್​ ಮಾಡುವ ಚಾಳಿ ಕಮಾಲ್​ ಆರ್​. ಖಾನ್​ ಅವರಿಗೆ ಇದೆ. ಅದೇ ಕಾರಣಕ್ಕಾಗಿ ಅವರು ವಿವಾದದ ಕೇಂದ್ರ ಬಿಂದು ಆಗಿದ್ದಾರೆ. ಕಂಗನಾ ರಣಾವತ್​, ಅಭಿಷೇಕ್​ ಬಚ್ಚನ್​, ಆಮಿರ್​ ಖಾನ್​, ಸಲ್ಮಾನ್​ ಖಾನ್, ಅಕ್ಷಯ್​ ಕುಮಾರ್​​ ಮುಂತಾದ ಸೆಲೆಬ್ರಿಟಿಗಳ ಬಗ್ಗೆ ಅವರು ಕೆಟ್ಟದಾಗಿ ಟ್ವೀಟ್​ ಮಾಡಿದ ಉದಾಹರಣೆಗಳಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:25 am, Wed, 31 August 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್