‘ಭಕ್ತರ ಭಕ್ತ ಮಹಾಭಕ್ತ’, ‘ಕಾಶ್ಮೀರದ ಶರ್ಮಾ’: ಖಾನ್​ ಚಿತ್ರಕ್ಕೆ ಹೊಸ ಹೆಸರು ಸೂಚಿಸಿದ ಇನ್ನೊಬ್ಬ ಖಾನ್​

Kamaal R Khan: ಆಮಿರ್​ ಖಾನ್​ ಮತ್ತು ಶಾರುಖ್​ ಖಾನ್ ಅವರ ಹೊಸ ಸಿನಿಮಾಗಳ ಬಗ್ಗೆ ಕಮಾಲ್​ ಆರ್​. ಖಾನ್​ ಅವರು ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ. ಸದ್ಯ ಈ ಟ್ವೀಟ್​ ಸಖತ್​ ವೈರಲ್​ ಆಗುತ್ತಿದೆ.

‘ಭಕ್ತರ ಭಕ್ತ ಮಹಾಭಕ್ತ’, ‘ಕಾಶ್ಮೀರದ ಶರ್ಮಾ’: ಖಾನ್​ ಚಿತ್ರಕ್ಕೆ ಹೊಸ ಹೆಸರು ಸೂಚಿಸಿದ ಇನ್ನೊಬ್ಬ ಖಾನ್​
ಆಮಿರ್ ಖಾನ್, ಕಮಾಲ್ ಆರ್. ಖಾನ್, ಶಾರುಖ್ ಖಾನ್
Follow us
| Updated By: ಮದನ್​ ಕುಮಾರ್​

Updated on: Mar 23, 2022 | 8:49 AM

ಒಂದು ಕಾಲದಲ್ಲಿ ನಟನಾಗಿ, ನಿರ್ದೇಶಕನಾಗಿ ಬಾಲಿವುಡ್​ನಲ್ಲಿ ಮಿಂಚಬೇಕು ಎಂಬ ಆಸೆ ಇಟ್ಟುಕೊಂಡಿದ್ದರು ಕಮಾಲ್​ ಆರ್​. ಖಾನ್​. ಆದರೆ ಅವರಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಗಲೇ ಇಲ್ಲ. ಅವರು ಮಾಡಿದ ‘ದೇಶದ್ರೋಹಿ’ ಮುಂತಾದ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತು ಸುಣ್ಣವಾದವು. ಆ ಬಳಿಕ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆದರು. ವಿವಾದಗಳ ಮೂಲಕವೇ ಕಮಾಲ್ ಆರ್​. ಖಾನ್​ (Kamaal R Khan) ಹೆಚ್ಚು ಸದ್ದು ಮಾಡಲು ಆರಂಭಿಸಿದರು. ತಮ್ಮನ್ನು ತಾವು ವಿಮರ್ಶಕ ಎಂದು ಘೋಷಿಸಿಕೊಂಡು ಅನೇಕ ಸ್ಟಾರ್​ ಸಿನಿಮಾಗಳ ಬಗ್ಗೆ ಅನಿಸಿಕೆ ಹಂಚಿಕೊಳ್ಳಲು ಶುರುಮಾಡಿದರು. ಅವರ ಜನಪ್ರಿಯತೆ ಕಮ್ಮಿ ಏನಿಲ್ಲ. ಟ್ವಿಟರ್​ನಲ್ಲಿ ಅವರನ್ನು ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ತಮ್ಮ ನೇರ-ನಿಷ್ಠುರ ಅಭಿಪ್ರಾಯಗಳ ಕಾರಣದಿಂದಾಗಿ ಕಮಾಲ್​ ಆರ್​. ಖಾನ್​ ಅವರು ಬಾಲಿವುಡ್​ನ ಅನೇಕ ಸ್ಟಾರ್​ ನಟರ ವಿರೋಧ ಕಟ್ಟಿಕೊಂಡಿದ್ದಾರೆ. ಈಗ ಆಮಿರ್​ ಖಾನ್​ (Aamir Khan) ಮತ್ತು ಶಾರುಖ್​ ಖಾನ್​ ವಿಚಾರದಲ್ಲಿ ಅವರು ಬಿಟ್ಟಿ ಸಲಹೆ ನೀಡಲು ಬಂದಿದ್ದಾರೆ. ಆಮಿರ್​ ಖಾನ್​ ನಟನೆಯ ‘ಲಾಲ್​ ಸಿಂಗ್​ ಚಡ್ಡಾ’ ಹಾಗೂ ಶಾರುಖ್​ ಖಾನ್​ (Shah Rukh Khan) ಅಭಿನಯದ ‘ಪಠಾಣ್​’ ಸಿನಿಮಾಗಳ ಟೈಟಲ್​ ಬದಲಾಗಬೇಕು ಎಂದು ಕಮಾಲ್​ ಆರ್​. ಖಾನ್​ ಅಭಿಪ್ರಾಯಪಟ್ಟಿದ್ದಾರೆ.

ಆಮಿರ್​ ಖಾನ್​ ಮತ್ತು ಶಾರುಖ್​ ಖಾನ್ ಅವರ ಹೊಸ ಸಿನಿಮಾಗಳ ಬಗ್ಗೆ ಕಮಾಲ್​ ಆರ್​. ಖಾನ್​ ಅವರು ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದಾರೆ. ‘ಲಾಲ್​ ಸಿಂಗ್​ ಚಡ್ಡಾ’ ಮತ್ತು ‘ಪಠಾಣ್​’ ಚಿತ್ರಗಳು ಗೆಲ್ಲಬೇಕು ಎಂದರೆ ಟೈಟಲ್​ ಬದಲಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ. ‘ಪಠಾಣ್​’ ಸಿನಿಮಾ ಬದಲಿಗೆ ‘ಭಕ್ತರ ಭಕ್ತ ಮಹಾಭಕ್ತ’ ಎಂದು ಹೆಸರು ಇಡಬೇಕು. ‘ಲಾಲ್​ ಸಿಂಗ್​ ಚಡ್ಡಾ’ ಬದಲಿಗೆ ‘ಕಾಶ್ಮೀರದ ಶರ್ಮಾ’ ಎಂದು ಟೈಟಲ್​ ಚೇಂಜ್​ ಮಾಡಬೇಕು ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

ಸದ್ಯ ಈ ಟ್ವೀಟ್​ ವೈರಲ್​ ಆಗುತ್ತಿದೆ. ನೆಟ್ಟಿಗರು ಇದಕ್ಕೆ ಬಗೆಬಗೆಯಲ್ಲಿ ಟ್ವೀಟ್​ ಮಾಡುತ್ತಿದ್ದಾರೆ. ‘ಈಗ ಆಮಿರ್ ಖಾನ್​, ಶಾರುಖ್​ ಖಾನ್​, ಸಲ್ಮಾನ್​ ಖಾನ್​ ಅವರ ಕಾಲ ಮುಗಿಯಿತು. ಏನೇ ಹೆಸರು ಬದಲಾಯಿಸಿದರೂ ಸಿನಿಮಾ ಗೆಲ್ಲುವುದಿಲ್ಲ. ಈಗೇನಿದ್ದರೂ ಅಕ್ಷಯ್​ ಕುಮಾರ್​ ಅವರ ಕಾಲ’ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಈ ಕುರಿತಾಗಿ ಶಾರುಖ್​ ಆಗಲಿ, ಸಲ್ಮಾನ್​ ಖಾನ್​ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಈ ಹಿಂದೆ ಸಲ್ಮಾನ್​ ಖಾನ್​ ಅವರನ್ನು ಕಮಾಲ್​ ಆರ್​. ಖಾನ್ ಅವರು ಎದುರು ಹಾಕಿಕೊಂಡಿದ್ದರು. ಅದಕ್ಕಾಗಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಲಾಗಿತ್ತು. ಅದೇ ರೀತಿ ಹಲವಾರು ಸೆಲೆಬ್ರಿಟಿಗಳನ್ನು ಕಮಾಲ್​ ಆರ್​. ಖಾನ್​ ಕೆಣಕಿದ್ದಾರೆ. ತಮ್ಮದೇ ಯೂಟ್ಯೂಬ್​ ಚಾನಲ್​ ಹೊಂದಿರುವ ಅವರು ಆಗಾಗ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ನಟ ಅಭಿಷೇಕ್​ ಬಚ್ಚನ್​ ಅವರು ಖಡಕ್​ ತಿರುಗೇಟು ನೀಡಿದ್ದರು.

ಮಲಯಾಳಂನ ‘ವಾಶಿ’ ಸಿನಿಮಾ ಬಗ್ಗೆ ಅಭಿಷೇಕ್​ ಬಚ್ಚನ್​ ಟ್ವೀಟ್​ ಮಾಡಿದ್ದರು. ‘ಮಲಯಾಳಂ ಚಿತ್ರರಂಗದಿಂದ ಬರುತ್ತಿರುವ ಮತ್ತೊಂದು ಅತ್ಯುತ್ತಮ ಸಿನಿಮಾ ಇದು. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಅಭಿಷೇಕ್​ ಬಚ್ಚನ್​ ಬರೆದುಕೊಂಡಿದ್ದರು. ಅದಕ್ಕೆ ಕಮಾಲ್​ ಆರ್​. ಖಾನ್​ ಕೊಂಕು ನುಡಿದಿದ್ದರು. ‘ಅಣ್ಣಾ.. ನೀವು ಬಾಲಿವುಡ್​ನವರು ಯಾವಾಗಲಾದರೂ ಅತ್ಯುತ್ತಮ ಸಿನಿಮಾ ಮಾಡಿ’ ಎಂದು ಕಮಾಲ್​ ಟ್ವೀಟ್​ ಮಾಡಿದ್ದರು. ಅದಕ್ಕೆ ಉತ್ತರಿಸಿದ ಅಭಿಷೇಕ್​ ಅವರು ವ್ಯಂಗ್ಯವಾಗಿ ತಿರುಗೇಟು ನೀಡಿದ್ದರು. ‘ಪ್ರಯತ್ನ ಮಾಡುತ್ತೇವೆ. ನೀವೂ ಮಾಡಿದ್ರಲ್ಲ ‘ದೇಶದ್ರೋಹಿ’ ಸಿನಿಮಾ’ ಎಂದು ಅಭಿಷೇಕ್​ ಬಚ್ಚನ್​ ಕುಟುಕಿದ್ದು ಸಖತ್ ವೈರಲ್​ ಆಗಿತ್ತು. ಕಮಾಲ್​ ಆರ್​. ಖಾನ್​ ನಟಿಸಿ, ನಿರ್ಮಾಣ ಮಾಡಿದ್ದ ‘ದೇಶದ್ರೋಹಿ’ ಸಿನಿಮಾ 2008ರಲ್ಲಿ ರಿಲೀಸ್​ ಆಗಿತ್ತು. ಅದನ್ನು ನೋಡಿದ ವಿಮರ್ಶಕರು ‘ಹಿಂದಿ ಚಿತ್ರರಂಗದ ಅತಿ ಕೆಟ್ಟ ಸಿನಿಮಾ’ ಎಂದು ವಿಮರ್ಶೆ ಬರೆದಿದ್ದರು.

ಇದನ್ನೂ ಓದಿ:

ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್​ 2’ ನಟಿ

ದೀಪಿಕಾ ಪಡುಕೋಣೆ ಬಿಕಿನಿ ಫೋಟೋಗಳು ಲೀಕ್​; ಶಾರುಖ್​ ಕೂಡ ಇದ್ದಾರೆ ಅಂತ ಪತ್ತೆಹಚ್ಚಿದ ಫ್ಯಾನ್ಸ್​

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ