SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

Gauri Khan | Shah Rukh Khan: ಶಾರುಖ್​ ಖಾನ್​ ಹೊಸ ಫೋಟೋ ವೈರಲ್​ ಆಗಿದೆ. ‘ಅಯ್ಯೋ ದೇವರೇ.. ಈಗ ಇವರು ತಮ್ಮ ಶರ್ಟ್​​ ಜೊತೆಗೂ ಮಾತನಾಡಲು ಶುರುಮಾಡಿದ್ರು’ ಎಂದು ಗೌರಿ ಖಾನ್​ ಕಮೆಂಟ್​ ಮಾಡಿದ್ದಾರೆ.

SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ
ಶಾರುಖ್ ಖಾನ್, ಗೌರಿ ಖಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Sep 26, 2022 | 12:23 PM

ಬಹುನಿರೀಕ್ಷಿತ ‘ಪಠಾಣ್​’ (Pathaan) ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ. ಈ ಚಿತ್ರದಿಂದ ನಟ ಶಾರುಖ್​ ಖಾನ್ (Shah Rukh Khan)​ ಅವರು ಅದ್ದೂರಿಯಾಗಿ ಕಮ್​ಬ್ಯಾಕ್​ ಮಾಡಲಿದ್ದಾರೆ. ಈಗಾಗಲೇ ಅವರು ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಭಾನುವಾರ (ಸೆ.25) ಅವರೊಂದು ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದರು. ಶರ್ಟ್​ಲೆಸ್​ ಆಗಿ ಶಾರುಖ್​ ಪೋಸ್​ ನೀಡಿದ್ದಾರೆ. ಹಾಗಂತ ಅವರು ಈ ರೀತಿ ಫೋಟೋ ಶೇರ್​ ಮಾಡಿಕೊಂಡಿದ್ದು ಇದೇ ಮೊದಲೇನೂ ಅಲ್ಲ. ಆದರೆ ಈ ಬಾರಿ ಅವರು ಬರೆದಿರುವ ಕ್ಯಾಪ್ಷನ್​ ಹೆಚ್ಚು ಹೈಲೈಟ್​ ಆಗಿದೆ. ಅದನ್ನು ಕಂಡು ಪತ್ನಿ ಗೌರಿ ಖಾನ್​ (Gauri Khan) ಗಲಿಬಿಲಿ ಆಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಇದಕ್ಕೆ ಕಮೆಂಟ್​ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡುತ್ತಿರುವ ‘ಪಠಾಣ್​’ ಚಿತ್ರಕ್ಕಾಗಿ ಶಾರುಖ್​ ಖಾನ್ ಅವರು ದೇಹ ಹುರಿಗೊಳಿಸಿಕೊಂಡಿದ್ದಾರೆ. 8 ಪ್ಯಾಕ್​ ಆ್ಯಬ್ಸ್​ ಮಾಡಿಕೊಂಡು ನಟಿಸಿದ್ದಾರೆ. ಅದನ್ನು ಹೈಲೈಟ್​ ಮಾಡುವ ಸಲುವಾಗಿಯೇ ಕೆಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ತಮ್ಮ ಶರ್ಟ್​ ಜೊತೆ ತಾವೇ ಮಾತನಾಡುತ್ತಿರುವ ರೀತಿಯಲ್ಲಿ ಈ ಹೊಸ ಫೋಟೋಗೆ ಶಾರುಖ್​ ಕ್ಯಾಪ್ಷನ್​ ನೀಡಿದ್ದಾರೆ.

ಇದನ್ನೂ ಓದಿ
Image
Shah Rukh Khan: ಶಾರುಖ್​ ಖಾನ್​ ಮನೆಯಲ್ಲಿ ಗಣೇಶ ಚತುರ್ಥಿ; ಮೋದಕ ತಿಂದು ನಟ ಹೇಳಿದ್ದೇನು?
Image
ಬೋಲ್ಡ್ ಫೋಟೋಗಳ ಮೂಲಕ ಗಮನ ಸೆಳೆದ ಶಾರುಖ್ ಮಗಳು ಸುಹಾನಾ ಖಾನ್
Image
Shah Rukh Khan: ಶಾರುಖ್​ ಖಾನ್​ ಬಾಲಿವುಡ್​ಗೆ ಕಾಲಿಟ್ಟು ಕಳೆಯಿತು 30 ವರ್ಷ; 14 ಬಾರಿ ‘ಫಿಲ್ಮ್​ಫೇರ್’​ ಪಡೆದ ಕಿಂಗ್​ ಖಾನ್
Image
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?

‘ನೀನು ಇದ್ದಿದ್ದರೆ ಹೇಗಿರುತ್ತಿತ್ತು. ಈ ವಿಷಯದಲ್ಲಿ ನಿನಗೆ ಅಚ್ಚರಿ ಆಗುತ್ತಿತ್ತು. ನೀನು ಎಷ್ಟೊಂದು ನಗುತ್ತಿದ್ದೆ’ ಎಂದು ಶಾರುಖ್​ ಖಾನ್​ ಅವರು ಶರ್ಟ್​ ಜೊತೆ ಮಾತನಾಡಿಕೊಂಡಿದ್ದಾರೆ. ಇದನ್ನು ನೋಡಿ ‘ಅಯ್ಯೋ ದೇವರೇ.. ಈಗ ಇವರು ತಮ್ಮ ಶರ್ಟ್​​ ಜೊತೆಗೂ ಮಾತನಾಡಲು ಶುರುಮಾಡಿದ್ರು’ ಎಂದು ಗೌರಿ ಖಾನ್​ ಕಮೆಂಟ್​ ಮಾಡಿದ್ದಾರೆ. ಟೈಗರ್​ ಶ್ರಾಫ್​, ರಿಚಾ ಚಡ್ಡಾ ಮುಂತಾದವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ವೈರಲ್​ ಆಗಿರುವ ಈ ಫೋಟೋ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಕಟ್ಟುಮಸ್ತಾದ ಈ ಅವತಾರದಲ್ಲಿ ಕಾಣಿಸಿಕೊಳ್ಳಲಿರುವ ತಮ್ಮ ನೆಚ್ಚಿನ ನಟನನ್ನು ಬೆಳ್ಳಿಪರದೆ ಮೇಲೆ ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾಡಿದ್ದಾರೆ.

ಸದ್ಯ ಶಾರುಖ್​ ಖಾನ್​ ಅವರು ‘ಪಠಾಣ್​’ ಮಾತ್ರವಲ್ಲದೇ ‘ಡಂಕಿ’, ‘ಜವಾನ್​’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲ ಚಿತ್ರಗಳ ಬಗ್ಗೆ ಅಭಿಮಾನಿಗಳಿಗೆ ಸಖತ್​ ನಿರೀಕ್ಷೆ ಇದೆ. 2023ರ ಜನವರಿ 25ರಂದು ‘ಪಠಾಣ್​’ ರಿಲೀಸ್​ ಆಗಲಿದೆ. ನಂತರ ಅವರ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳು ಬಿಡುಗಡೆ ಆಗಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ