Vivek Agnihotri: ಶಾರುಖ್ ನಟನೆಯ ‘ಬೇಷರಂ ರಂಗ್’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್ ಅಗ್ನಿಹೋತ್ರಿ
Shah Rukh Khan | Pathaan Movie: ಸೋಶಿಯಲ್ ಮೀಡಿಯಾದಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ಸಕ್ರಿಯರಾಗಿದ್ದಾರೆ. ಈಗ ‘ಬೇಷರಂ ರಂಗ್..’ ಹಾಡಿನ ಬಗ್ಗೆ ಅವರು ಪರೋಕ್ಷವಾಗಿ ಬರೆದುಕೊಂಡಿದ್ದಾರೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರು ತಮ್ಮ ನೇರ ನಡೆ-ನುಡಿಯ ಕಾರಣದಿಂದ ಸುದ್ದಿ ಆಗುತ್ತಿದ್ದಾರೆ. ಹಿಂದಿ ಚಿತ್ರರಂಗದ ಕುರಿತಂತೆ ಅವರು ತಮ್ಮ ಅಭಿಪ್ರಾಯವನ್ನು ಆಗಾಗ ವ್ಯಕ್ತಪಡಿಸುತ್ತಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸೂಪರ್ ಹಿಟ್ ಆದ ಬಳಿಕ ವಿವೇಕ್ ಅಗ್ನಿಹೋತ್ರಿ ಅವರ ಜನಪ್ರಿಯತೆ ಹೆಚ್ಚಿತು. ಬಾಲಿವುಡ್ನಲ್ಲಿ ಅವರು ಕೆಲವರನ್ನು ಎದುರು ಹಾಕಿಕೊಂಡಿದ್ದಾರೆ. ಸಿದ್ಧಾಂತಗಳ ಕಾರಣದಿಂದ ಬಿ-ಟೌನ್ನಲ್ಲಿ ಬಣಗಳು ಸೃಷ್ಟಿ ಆಗಿವೆ. ಒಬ್ಬರನ್ನು ಮತ್ತೊಬ್ಬರು ವಿರೋಧಿಸುವ ಟ್ರೆಂಡ್ ಜೋರಾಗಿದೆ. ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ ಸಿನಿಮಾದ ‘ಬೇಷರಂ ರಂಗ್..’ (Besharam Rang song) ಹಾಡು ರಿಲೀಸ್ ಆಗಿದ್ದು, ಇದರ ಬಗ್ಗೆ ವಿವೇಕ್ ಅಗ್ನಿಹೋತ್ರಿ ಅವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ ಎಲ್ಲಿಯೂ ಅವರು ಈ ಹಾಡಿನ ಹೆಸರನ್ನಾಗಲಿ, ಸಿನಿಮಾದ ಹೆಸರನ್ನಾಗಲಿ ಪ್ರಸ್ತಾಪ ಮಾಡಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ವಿವೇಕ್ ಅಗ್ನಿಹೋತ್ರಿ ಅವರು ಸಕ್ರಿಯರಾಗಿದ್ದಾರೆ. ಒಂದಿಲ್ಲೊಂದು ವಿಚಾರದ ಕುರಿತು ಅವರು ಪೋಸ್ಟ್ ಮಾಡುತ್ತಾರೆ. ಈಗ ‘ಬೇಷರಂ ರಂಗ್..’ ಹಾಡು ರಿಲೀಸ್ ಆದ ಬೆನ್ನಲ್ಲೇ ಅವರು ವ್ಯಂಗ್ಯವಾಗಿ ಒಂದು ಟ್ವೀಟ್ ಮಾಡಿದ್ದಾರೆ. ‘ಮೊದಲೆಲ್ಲ ಇನ್ಸ್ಟಾಗ್ರಾಮ್ ರೀಲ್ಸ್ ನೋಡಿದರೆ ಬಾಲಿವುಡ್ ಹಾಡಿನ ಕೆಟ್ಟ ಕಾಪಿ ಎನಿಸುತ್ತಿತ್ತು. ಈಗ ಬಾಲಿವುಡ್ ಹಾಡುಗಳೇ ಇನ್ಸ್ಟಾಗ್ರಾಮ್ ರೀಲ್ಸ್ನ ಕೆಟ್ಟ ಕಾಪಿ ರೀತಿ ಕಾಣಿಸುತ್ತಿವೆ’ ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ.
First Insta reels used to look like bad copies of Bollywood songs. Now Bollywood songs look like bad copies of Insta reels.
— Vivek Ranjan Agnihotri (@vivekagnihotri) December 13, 2022
ಇದನ್ನೂ ಓದಿ: Deepika Padukone: ‘ಬೇಷರಂ ರಂಗ್’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು
ನೈಜ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವಲ್ಲಿ ವಿವೇಕ್ ಅಗ್ನಿಹೋತ್ರಿ ಫೇಮಸ್. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಆಧರಿಸಿ ತಯಾರಾದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಿಂದ ಅವರು ದೇಶಾದ್ಯಂತ ಖ್ಯಾತಿ ಪಡೆದರು. ಈಗ ಕೊರೊನಾ ವ್ಯಾಕ್ಸಿನ್ ಕುರಿತು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ‘ದಿ ವ್ಯಾಕ್ಸಿನ್ ವಾರ್’ ಎಂದು ಶೀರ್ಷಿಕೆ ಇಡಲಾಗಿದೆ. ಅದರ ಚಿತ್ರೀಕರಣಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: Besharam Rang: ಹೊಸ ಹಾಡಿನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
ಟ್ರೋಲ್ ಆದ ‘ದಿ ವ್ಯಾಕ್ಸಿನ್ ವಾರ್’:
2020ರಲ್ಲಿ ಕೊರೊನಾ ವೈರಸ್ ಹಾವಳಿ ಎದುರಾದಾಗ ಅದರ ವಿರುದ್ಧ ಭಾರತ ಹೇಗೆ ಹೋರಾಟ ನಡೆಸಿತು ಎಂಬುದನ್ನು ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದಲ್ಲಿ ತೋರಿಸಲು ವಿವೇಕ್ ಅಗ್ನಿಹೋತ್ರಿ ನಿರ್ಧರಿಸಿದ್ದಾರೆ. ಅದರ ಬೆನ್ನಲ್ಲೇ ಕೆಲವು ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ವಿವೇಕ್ ಅಗ್ನಿಹೋತ್ರಿ ಅವರು ಮೋದಿ ಸರ್ಕಾರದ ಪರವಾಗಿ ಇದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಈಗ ಅವರು ವ್ಯಾಕ್ಸಿನ್ ಕುರಿತು ಮಾಡಲು ಹೊರಟಿರುವ ಚಿತ್ರ ಕೂಡ ಮೋದಿ ಸರ್ಕಾರವನ್ನು ಹೊಗಳುವ ಪ್ರಚಾರದ ಸಿನಿಮಾ ಆಗಲಿದೆ ಎಂದು ಅನೇಕರು ಕಾಲೆಳೆಯುತ್ತಿದ್ದಾರೆ. 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟು ಈ ಚಿತ್ರವನ್ನು ಮಾಡಲಾಗುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:11 am, Wed, 14 December 22