AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು

Besharam Rang Controversy | Shah Rukh Khan: ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಚಿತ್ರದ ‘ಬೇಷರಂ​ ರಂಗ್​’ ಹಾಡಿನ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ಇದು ‘ಅಶ್ಲೀಲ ಸಾಂಗ್​’ ಎಂದು ನೆಟ್ಟಿಗರು ಹಣೆಪಟ್ಟಿ ಕಟ್ಟುತ್ತಿದ್ದಾರೆ.

Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು
ದೀಪಿಕಾ ಪಡುಕೋಣೆ, ಶಾರುಖ್ ಖಾನ್
TV9 Web
| Edited By: |

Updated on:Dec 14, 2022 | 7:47 AM

Share

ನಟ ಶಾರುಖ್​ ಖಾನ್​ (Shah Rukh Khan) ಏನೇ ಮಾಡಿದರೂ ಅದನ್ನು ವಿರೋಧಿಸಲು ಒಂದು ವರ್ಗದ ಜನರು ಕಾದಿರುತ್ತಾರೆ. ಎಲ್ಲ ಕಾರ್ಯದಲ್ಲಿಯೂ ಕೊಂಕು ತೆಗೆಯುವ ಮಂದಿ ಇದ್ದಾರೆ. ಈಗ ಶಾರುಖ್​ ಖಾನ್​ ಅವರ ಹೊಸ ಸಿನಿಮಾ ‘ಪಠಾಣ್​’ (Pathaan Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಆ ಚಿತ್ರದ ‘ಬೇಷರಂ ರಂಗ್​..’ ಹಾಡು ರಿಲೀಸ್​ ಆಗಿ ಧೂಳೆಬ್ಬಿಸುತ್ತಿದೆ. ಎರಡೇ ದಿನದಲ್ಲಿ 3 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಾಣುವ ಮೂಲಕ ಈ ಗೀತೆ ಸೂಪರ್​ ಹಿಟ್​ ಆಗಿದೆ. ಆದರೆ ಕೆಲವರು ‘ಬೇಷರಂ ರಂಗ್​..’ ಹಾಡಿನ ಬಗ್ಗೆ ತಕರಾರು ತೆಗೆದಿದ್ದಾರೆ. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ (Deepika Padukone) ಕಾಣಿಸಿಕೊಂಡ ರೀತಿ ಅಶ್ಲೀಲವಾಗಿದೆ ಎಂದು ಜನರು ಟ್ರೋಲ್​ ಮಾಡುತ್ತಿದ್ದಾರೆ. ಅಲ್ಲದೇ, ದೀಪಿಕಾ ಧರಿಸಿದ ಬಿಕಿನಿಯ ಬಣ್ಣದ ಬಗ್ಗೆಯೂ ತಕರಾರು ತೆಗೆಯಲಾಗಿದೆ.

ಶಾರುಖ್​ ಖಾನ್​ ನಟನೆಯ ಸಿನಿಮಾಗಳನ್ನು ಬಹಿಷ್ಕಾರ ಮಾಡಬೇಕು ಎಂದು ಒಂದಷ್ಟು ಜನರು ಪಣತೊಟ್ಟಿದ್ದಾರೆ. ಆ ಕಾರಣಕ್ಕೆ ಎಲ್ಲದರಲ್ಲೂ ಕೊಂಕು ತೆಗೆಯಲಾಗುತ್ತಿದೆ. ಈಗ ಸೋಶಿಯಲ್​ ಮೀಡಿಯಾದಲ್ಲಿ #BoycottPathaan ಎಂಬ ಟ್ರೆಂಡ್​ ಶುರುವಾಗಿದೆ. ಇದು ಹೀಗೆಯೇ ಮುಂದುವರಿದರೆ ‘ಪಠಾಣ್​’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ.

ಇದನ್ನೂ ಓದಿ
Image
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Image
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Image
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
Image
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

ಇದನ್ನೂ ಓದಿ: Besharam Rang: ಹೊಸ ಹಾಡಿನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್​’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ

‘ಬೇಷರಂ ರಂಗ್​..’ ಗೀತೆಯನ್ನು ಗ್ಲಾಮರಸ್​ ಆಗಿ ಚಿತ್ರಿಸಲಾಗಿದೆ. ದೀಪಿಕಾ ಪಡುಕೋಣೆ ಅವರು ತುಂಬ ಹಾಟ್​ ಆಗಿ ಕಾಣಿಸಿಕೊಂಡು ಪಡ್ಡೆಗಳ ನಿದ್ದೆ ಕದ್ದಿದ್ದಾರೆ. ಅವರು ಇಷ್ಟೊಂದು ಎಕ್ಸ್​ಪೋಸ್​ ಮಾಡುವ ಅವಶ್ಯಕತೆ ಏನಿತ್ತು ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಇದೊಂದು ‘ಅಶ್ಲೀಲ ಸಾಂಗ್​’ ಎಂದು ನೆಟ್ಟಿಗರು ಹಣೆಪಟ್ಟಿ ಕಟ್ಟುತ್ತಿದ್ದಾರೆ. ‘ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ಬೇಷರಮ್​ ರಂಗ್​ (ನಾಚಿಕೆಯಿಲ್ಲದ ಬಣ್ಣ) ಎಂದಿರುವುದು ಸರಿಯಲ್ಲ’ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​

ಶಾರುಖ್​ ಖಾನ್ ಅವರು ಈ ಚಿತ್ರಕ್ಕಾಗಿ ತುಂಬ ಶ್ರಮಪಟ್ಟಿದ್ದಾರೆ. ದೇಹ ಹುರಿಗೊಳಿಸಿಕೊಂಡು ಸಿಕ್ಸ್​ ಪ್ಯಾಕ್​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಝಲಕ್​ ಕೂಡ ಈ ಹಾಡಿನಲ್ಲಿ ಹೈಲೈಟ್​ ಆಗಿದೆ. ಶಾರುಖ್​ ಮತ್ತು ದೀಪಿಕಾ ಪಡುಕೋಣೆ ಅವರ ಅಪ್ಪಟ ಅಭಿಮಾನಿಗಳಿಗೆ ಈ ಹಾಡು ತುಂಬ ಇಷ್ಟ ಆಗಿದೆ.

2023ರ ಜನವರಿ 25ರಂದು ‘ಪಠಾಣ್​’ ಚಿತ್ರ ರಿಲೀಸ್​ ಆಗಲಿದೆ. ಸಿದ್ದಾರ್ಥ್​ ಆನಂದ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶಾರುಖ್​ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆ ಜಾನ್​ ಅಬ್ರಾಹಂ ಕೂಡ ಪ್ರಮುಖ ಪಾತ್ರವೊಂದನ್ನು ಮಾಡಿದ್ದಾರೆ. ಟೀಸರ್​ನಲ್ಲಿ ಅವರ ಪಾತ್ರ ಹೈಲೈಟ್​ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:47 am, Wed, 14 December 22

Follow Us
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್‌
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
ನೌಕಾ ಡ್ರೋನ್​ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
13 ವರ್ಷ ನಂತರ ಜೈಲಿನಿಂದ ರಿಲೀಸ್ ಆಗುತ್ತಿದ್ದಂತೆಯೇ ಕೈದಿ ಫುಲ್ ಖುಷ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು