AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Salman Khan: ಸಲ್ಮಾನ್​ ಖಾನ್​-ಪೂಜಾ ಹೆಗ್ಡೆ ಪ್ರೀತಿಸ್ತಾರೆ ಅಂತ ಗಾಸಿಪ್​ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಸಲ್ಲು ಆಪ್ತರು

Salman Khan Dating Pooja Hegde: ‘ಕಿಸಿ ಕಾ ಭಾಯ್​ ಕಿಸಿ ಕಿ ಜಾನ್​​’ ಸಿನಿಮಾದಲ್ಲಿ ಸಲ್ಮಾನ್​ ಖಾನ್​ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಅದೇ ಕಾರಣಕ್ಕಾಗಿ ಇಬ್ಬರ ನಡುವೆ ಸಂಬಂಧ ಕಲ್ಪಿಸಲಾಗಿದೆ.

Salman Khan: ಸಲ್ಮಾನ್​ ಖಾನ್​-ಪೂಜಾ ಹೆಗ್ಡೆ ಪ್ರೀತಿಸ್ತಾರೆ ಅಂತ ಗಾಸಿಪ್​ ಹಬ್ಬಿಸಿದವರಿಗೆ ತಿರುಗೇಟು ನೀಡಿದ ಸಲ್ಲು ಆಪ್ತರು
ಪೂಜಾ ಹೆಗ್ಡೆ-ಸಲ್ಮಾನ್ ಖಾನ್
TV9 Web
| Edited By: |

Updated on:Dec 13, 2022 | 11:56 AM

Share

ನಟ ಸಲ್ಮಾನ್​ ಖಾನ್​ (Salman Khan) ಬದುಕಿನಲ್ಲಿ ಸಾಕಷ್ಟು ಹುಡುಗಿಯರು ಬಂದು ಹೋದರು. ಆದರೆ ಮದುವೆ ತನಕ ಯಾವ ಪ್ರೀತಿಯೂ ಉಳಿದುಕೊಳ್ಳಲಿಲ್ಲ. ಅವರಿಗೆ ಈಗ 56 ವರ್ಷ ವಯಸ್ಸು. ಈಗಲೂ ಅವರು ಮದುವೆ ಬಗ್ಗೆ ಆಲೋಚನೆ ಮಾಡಿದಂತಿಲ್ಲ. ಹಾಗಿದ್ದರೂ ಕೂಡ ಆಗಾಗ ಸಲ್ಮಾನ್​ ಖಾನ್​ ಜೊತೆ ನಟಿಯರ ಹೆಸರು ತಳುಕು ಹಾಕಿಕೊಳ್ಳುತ್ತದೆ. ಈಗ ನಟಿ ಪೂಜಾ ಹೆಗ್ಡೆ (Pooja Hegde) ಜೊತೆ ಸಲ್ಲು ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗಾಸಿಪ್​ ಹಬ್ಬಿದೆ. ಇದನ್ನು ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದ್ದು ನಿಜ. ಆದರೆ ಈ ವಿಷಯದಲ್ಲಿ ಸತ್ಯ ಇಲ್ಲ ಎಂದು ಸಲ್ಮಾನ್​ ಖಾನ್​ ಅವರ ಆಪ್ತ ಸ್ನೇಹಿತರು ಸ್ಪಷ್ಟಪಡಿಸಿದ್ದಾರೆ. ‘ಕಿಸಿ ಕಾ ಭಾಯ್​ ಕಿಸಿ ಕಿ ಜಾನ್​​’ (Kisi Ka Bhai Kisi Ki Jaan) ಸಿನಿಮಾದಲ್ಲಿ ಸಲ್ಮಾನ್​ ಖಾನ್​ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಅದೇ ಕಾರಣಕ್ಕಾಗಿ ಇಬ್ಬರ ನಡುವೆ ಸಂಬಂಧ ಕಲ್ಪಿಸಲಾಗಿದೆ. ಈ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಬಗ್ಗೆ ಸಲ್ಲು ಆಪ್ತರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ ಎಂದು ‘ನ್ಯೂಸ್​ 18’ ವರದಿ ಮಾಡಿದೆ.

‘ಇಂಥ ಸುಳ್ಳು ಮಾಹಿತಿ ಹಬ್ಬಿಸುವವರಿಗೆ ನಾಚಿಕೆ ಆಗಬೇಕು. ಪೂಜಾ ಹೆಗ್ಡೆ ಅವರಿಗೆ ಸಲ್ಮಾನ್​ ಖಾನ್​ ಮಗಳ ವಯಸ್ಸು. ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದಮಾತ್ರಕ್ಕೆ ಅದನ್ನೇ ಪ್ರಚಾರಕ್ಕೆ ಬಳಸಿಕೊಳ್ಳಬಹುದು ಅಂತ ಕೆಲವು ಮೂರ್ಖರು ಅಂದುಕೊಂಡಿದ್ದಾರೆ. ಅದರೆ ಅದು ಮುಜುಗರ ತರುವಂಥದ್ದು’ ಎಂದು ಸಲ್ಲು ಸ್ನೇಹಿತರು ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಇದನ್ನೂ ಓದಿ
Image
ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
Image
ತಂಗಿ ಗಂಡನ ಜೊತೆಗೆ ಸಲ್ಮಾನ್​ ಖಾನ್​ ಕಿರಿಕ್​; ಭಾವನ ಸಿನಿಮಾದಿಂದಲೇ ಹೊರನಡೆದ ಆಯುಷ್​ ಶರ್ಮಾ?
Image
ಬಹಿರಂಗ ವೇದಿಕೆಯಲ್ಲಿ ಸಲ್ಲು ಇದೆಂಥಾ ಕೆಲಸ; ಪೂಜಾ ಹೆಗ್ಡೆ ವಿಚಾರದಲ್ಲಿ ಸಿಕ್ಕಾಪಟ್ಟೆ ಮುಜುಗರ
Image
ಸಲ್ಮಾನ್​ ಖಾನ್ ಫಾರ್ಮ್​ಹೌಸ್​ ಬೆಲೆ 80 ಕೋಟಿ ರೂ.! ಸಲ್ಲು ಮೆಚ್ಚಿನ ಈ ಸ್ಥಳದಲ್ಲಿ ಏನೆಲ್ಲ ಇದೆ?

ಅಷ್ಟಕ್ಕೂ ಈ ರೀತಿ ಗಾಸಿಪ್​ ಹುಟ್ಟಿಕೊಳ್ಳಲು ಕಾರಣ ಆಗಿದ್ದು ಒಂದೇ ಒಂದು ಟ್ವೀಟ್​. ವಿದೇಶಿ ಸೆನ್ಸಾರ್​ ಮಂಡಳಿ ಸದಸ್ಯ ಹಾಗೂ ತಮ್ಮನ್ನು ತಾವು ವಿಮರ್ಶಕ ಎಂದು ಹೇಳಿಕೊಂಡಿರುವ ಉಮೈರ್​ ಸಂಧು ಅವರು ಕಳೆದ ವಾರ ಒಂದು ಟ್ವೀಟ್​ ಮಾಡಿದ್ದರು. ‘ಸಲ್ಮಾನ್​ ಖಾನ್​ ಅವರು ಪೂಜಾ ಹೆಗ್ಡೆಯ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅವರ ಪ್ರೊಡಕ್ಷನ್​ ಹೌಸ್​ನಲ್ಲಿ ಈ ನಟಿ 2 ಸಿನಿಮಾಗೆ ಸಹಿ ಮಾಡಿದ್ದಾರೆ. ಇತ್ತೀಚೆಗೆ ಇಬ್ಬರೂ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಸಲ್ಮಾನ್​ ಖಾನ್​ ಅವರ ಆಪ್ತ ಮೂಲಗಳು ಇದನ್ನು ಖಚಿತಪಡಿಸಿವೆ’ ಎಂದು ಅವರು ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ: Salman Khan: ಲುಂಗಿ ಧರಿಸಿ ಸುತ್ತಾಡಿದ ಸಲ್ಮಾನ್​ ಖಾನ್​; ಸೌತ್​ ಸಿನಿಮಾ ಪ್ರಭಾವಕ್ಕೆ ಒಳಗಾದ್ರಾ ಭಾಯಿಜಾನ್​?

ಸಲ್ಮಾನ್​ ಖಾನ್​ ಅಭಿಮಾನಿಗಳು ಏಕಾಏಕಿ ಈ ವದಂತಿಯನ್ನು ನಂಬಿಲ್ಲ. ನಿಮಗೆ ಖಚಿತ ಪಡಿಸಿದ ಆಪ್ತ ಮೂಲ ಯಾವುದು ಎಂದು ಮರುಪ್ರಶ್ನೆ ಮಾಡಿದ್ದಾರೆ. ಸದ್ಯ ಈ ಕುರಿತು ಸಲ್ಮಾನ್​ ಖಾನ್​ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:43 am, Tue, 13 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್