AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್

ಸಲ್ಲು ಈಗ ‘ಕಭಿ ಈದ್ ಕಭಿ ದಿವಾಲಿ’ ಶೂಟಿಂಗ್​ನಲ್ಲಿ ಭಾಗಿ ಆಗುತ್ತಿದ್ದಾರೆ. ರಾಮ್ ಚರಣ್ ಅವರನ್ನು ವಿಶೇಷ ಹಾಡಿನಲ್ಲಿ ಹಾಕಿಕೊಳ್ಳಬೇಕು ಎನ್ನುವ ಐಡಿಯಾ ಹುಟ್ಟಿಕೊಂಡಿದ್ದು ಒಂದು ಮಜವಾದ ಪ್ರಸಂಗದಿಂದ.

ಸೆಟ್​​ನಲ್ಲಿ ಸಲ್ಲುನ ಭೇಟಿ ಮಾಡೋಕೆ ಬಂದ ರಾಮ್​ ಚರಣ್​ಗೆ ಸಿಕ್ತು ಹಿಂದಿ ಸಿನಿಮಾ ಆಫರ್
ರಾಮ್​ ಚರಣ್​-ಸಲ್ಮಾನ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 20, 2022 | 4:57 PM

‘ಆರ್​ಆರ್​ಆರ್’ ಚಿತ್ರದಿಂದ (RRR Movie) ರಾಮ್​ ಚರಣ್ ಖ್ಯಾತಿ ಹೆಚ್ಚಿದೆ. ಬಾಲಿವುಡ್ ಮಂದಿಗೆ ರಾಮ್​ ಚರಣ್ ಅವರ ಪರಿಚಯ ಆಗಿದೆ. ಈ ಮೊದಲು ಅವರು ಹಿಂದಿಯಲ್ಲಿ ಸಿನಿಮಾ ಮಾಡಿದ್ದರು. ಆದರೆ, ಈ ಚಿತ್ರ ಮಕಾಡೆ ಮಲಗಿತ್ತು. ಈಗ ರಾಜಮೌಳಿ ನಿರ್ದೇಶನದ ಸಿನಿಮಾದಿಂದ ಅವರಿಗೆ ಹಿಂದಿಯಲ್ಲಿ ಹೆಚ್ಚು ಜನಪ್ರಿಯತೆ ಸಿಕ್ಕಿದೆ. ಈಗ ರಾಮ್ ಚರಣ್ (Ram Charan) ಮತ್ತೆ ಬಾಲಿವುಡ್​ಗೆ ಮರಳುತ್ತಿದ್ದಾರೆ. ಸಲ್ಮಾನ್ ಖಾನ್ (Salman Khan) ಮುಂದಿನ ಚಿತ್ರ ‘ಕಭಿ ಈದ್ ಕಭಿ ದಿವಾಲಿ’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎನ್ನಲಾಗಿದೆ. ಹಾಗಂತ ಅವರು ಇಡೀ ಚಿತ್ರದುದ್ದಕ್ಕೂ ಕಾಣಿಸಿಕೊಳ್ಳುವುದಿಲ್ಲ. ಒಂದು ವಿಶೇಷ ಹಾಡಿನಲ್ಲಿ ರಾಮ್ ಚರಣ್ ಕಾಣಿಸಿಕೊಳ್ಳಲಿದ್ದಾರೆ. ಈ ವಿಚಾರ ಕೇಳಿ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಕಳೆದ ವರ್ಷ ಸಲ್ಲು ನಟನೆಯ ‘ಅಂತಿಮ್​-ದಿ ಫೈನಲ್ ಟ್ರುತ್’ ಸಿನಿಮಾ ತೆರೆಗೆ ಬಂತು. ಇದಾದ ಬಳಿಕ ‘ಟೈಗರ್ 3’ ಚಿತ್ರದ ಕೆಲಸಗಳನ್ನು ಅವರು ಪೂರ್ಣಗೊಳಿಸಿದರು. ಈಗ ‘ಕಭಿ ಈದ್ ಕಭಿ ದಿವಾಲಿ’ ಶೂಟಿಂಗ್​ನಲ್ಲಿ ಭಾಗಿ ಆಗುತ್ತಿದ್ದಾರೆ. ಹೈದರಾಬಾದ್​ನಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿದೆ. ರಾಮ್ ಚರಣ್ ಅವರನ್ನು ಈ ಹಾಡಿನಲ್ಲಿ ಹಾಕಿಕೊಳ್ಳಬೇಕು ಎನ್ನುವ ಐಡಿಯಾ ಹುಟ್ಟಿಕೊಂಡಿದ್ದು ಒಂದು ಮಜವಾದ ಪ್ರಸಂಗದಿಂದ.

ಹೈದರಾಬಾದ್​ನಲ್ಲಿ ದೊಡ್ಡ ಸೆಟ್​ಗಳನ್ನು ಹಾಕಿ ಈ ಚಿತ್ರವನ್ನು ಶೂಟ್ ಮಾಡಲಾಗುತ್ತಿದೆ. ರಾಮ್​ ಚರಣ್​ ಹಾಗೂ ಸಲ್ಮಾನ್ ಖಾನ್ ನಡುವೆ ಒಳ್ಳೆಯ ಗೆಳೆತನ ಇದೆ. ಹೀಗಾಗಿ, ಅವರು ಸೆಟ್​ಗೆ ಭೇಟಿ ನೀಡಿ ಸಲ್ಲು ಅವರ ಜತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಚಿತ್ರದ ಹಾಡಿನ ಶೂಟಿಂಗ್ ನಡೆಯುತ್ತಿತ್ತು ಎನ್ನಲಾಗಿದೆ. ಆಗ ರಾಮ್ ಚರಣ್ ಅವರ ಬಳಿ ಈ ಸಾಂಗ್​ನಲ್ಲಿ ಸ್ಟೆಪ್ ಹಾಕುವಂತೆ ಕೋರಲಾಗಿದೆ. ಅವರು ಖುಷಿಯಿಂದಲೇ ಇದನ್ನು ಒಪ್ಪಿದ್ದಾರೆ. ವೆಂಕಟೇಶ್​ ದಗ್ಗುಬಾಟಿ ಕೂಡ ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವಾರದಿಂದ ಈ ಚಿತ್ರದ ಶೂಟಿಂಗ್ ಮುಂಬೈನಲ್ಲಿ ನಡೆಯಲಿದೆ.

ಇದನ್ನೂ ಓದಿ
Image
Kamal Haasan: ವಿಶ್ವಾದ್ಯಂತ 200 ಕೋಟಿ ರೂ. ಬಾಚಿಕೊಂಡ ‘ವಿಕ್ರಮ್​’ ಸಿನಿಮಾ; ಗೆಲುವಿನ ಖುಷಿಯಲ್ಲಿ ಕಮಲ್​ ಹಾಸನ್​
Image
‘ವಿಕ್ರಮ್​’ ವಿಲನ್ ಸೂರ್ಯಗೆ ರೋಲೆಕ್ಸ್ ವಾಚ್ ಗಿಫ್ಟ್ ಕೊಟ್ಟ ಕಮಲ್ ಹಾಸನ್​; ಇದರ ಬೆಲೆ ಎಷ್ಟು ಲಕ್ಷ? ಗೆಸ್ ಮಾಡಿ
Image
‘ರಜಿನಿಕಾಂತ್​- ನಾನು ಒಳ್ಳೆಯ ಫ್ರೆಂಡ್ಸ್​, ಆದರೆ ಒಂದು ವಿಚಾರದ ಹೊರತಾಗಿ’ ಎಂದ ಕಮಲ್​ ಹಾಸನ್​; ಏನದು?
Image
ಕಮಲ್​ ಹಾಸನ್​ ಮಾಜಿ ಪತ್ನಿ ಸಾರಿಕಾಗೆ ಆರ್ಥಿಕ ಸಂಕಷ್ಟ; 3 ಸಾವಿರ ರೂಪಾಯಿಗಾಗಿ ಕಷ್ಟಪಟ್ಟ ಖ್ಯಾತ ನಟಿ

ಇದನ್ನೂ ಓದಿ: ‘ವಿಕ್ರಮ್​’ ಸಿನಿಮಾ ಸಕ್ಸಸ್​ ಪಾರ್ಟಿ ಆಯೋಜಿಸಿದ ಚಿರಂಜೀವಿ; ಗಮನ ಸೆಳೆದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ದೇವಿಶ್ರೀ ಪ್ರಸಾದ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ‘ಪುಷ್ಪ’ ಚಿತ್ರದಿಂದ ದೇವಿಶ್ರೀ ಪ್ರಸಾದ್ ಖ್ಯಾತಿ ಹೆಚ್ಚಿದೆ. ಹೀಗಾಗಿ, ಅವರಿಗೆ ಬಾಲಿವುಡ್​ನಿಂದ ಹೆಚ್ಚೆಚ್ಚು ಆಫರ್​ಗಳು ಬರುತ್ತಿವೆ. ‘ಕಭಿ ಈದ್ ಕಭಿ ದಿವಾಲಿ’ ಈ ವರ್ಷ ಡಿಸೆಂಬರ್ 30ರಂದು ತೆರೆಗೆ ಬರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ