ಬೈಕ್ನಲ್ಲೇ ಅಜಿತ್ ಕುಮಾರ್ ಯುರೋಪ್ ಪರ್ಯಟನೆ; ವೈರಲ್ ಆಯ್ತು ಫೋಟೋ
ಫೋಟೋದಲ್ಲಿ ಅಜಿತ್ ಅವರ ಲುಕ್ ಸಾಕಷ್ಟು ಗಮನ ಸೆಳೆದಿದೆ. ಅವರು ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಹೇರ್ಸ್ಟೈಲ್ ಕೂಡ ಭಿನ್ನವಾಗಿದೆ. ಅ
ನಟ ಅಜಿತ್ ಕುಮಾರ್ (Ajith Kumar) ಅವರು ಭಿನ್ನವಾಗಿ ನಿಲ್ಲುತ್ತಾರೆ. ಇದಕ್ಕೆ ಕಾರಣ ಅವರ ಪ್ಯಾಷನ್. ಅವರಿಗೆ ಬೈಕ್ಗಳ ಬಗ್ಗೆ ಸಖತ್ ಕ್ರೇಜ್ ಇದೆ. ಅವರ ಬಳಿ ದುಬಾರಿ ಕಾರು ಹಾಗೂ ಬೈಕ್ ಕಲೆಕ್ಷನ್ ಇದೆ. ಹಾಗಂತ ಅವರು ಇದನ್ನು ಮನೆಯಲ್ಲೇ ಇಟ್ಟುಕೊಳ್ಳುವುದಿಲ್ಲ. ಅದರಲ್ಲಿ ಸುತ್ತಾಟ ನಡೆಸುತ್ತಾರೆ. ಈಗ ಅವರು ಯುರೋಪ್ ರಾಷ್ಟ್ರಗಳಲ್ಲಿ ರೋಡ್ ಟ್ರಿಪ್ (Road Trip) ಮಾಡುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಜಿತ್ ಅವರ ಫೋಟೋಗೆ ಫ್ಯಾನ್ಸ್ ಲೈಕ್ಸ್ ಒತ್ತುತ್ತಿದ್ದಾರೆ.
ಅಜಿತ್ ಅವರು ಎಚ್. ವಿನೋದ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಈ ಚಿತ್ರದ ಶೂಟಿಂಗ್ ಸದ್ಯ ಪ್ರಗತಿಯಲ್ಲಿದೆ. ಅಜಿತ್ 61ನೇ ಚಿತ್ರ ಇದಾಗಿದ್ದು, ಬೋನಿ ಕಪೂರ್ ಬಂಡವಾಳ ಹೂಡುತ್ತಿದ್ದಾರೆ. ಅಜಿತ್ ಈ ಹಿಂದಿನ ಚಿತ್ರ ‘ವಲಿಮೈ’ ಚಿತ್ರವನ್ನು ಬೋನಿ ಕಪೂರ್ ಅವರೇ ನಿರ್ಮಿಸಿದ್ದರು. ಅಜಿತ್ ಅವರು ಈಗ ಚಿತ್ರದ ಕೆಲಸಗಳಿಂದ ಒಂದು ಬ್ರೇಕ್ ಪಡೆದುಕೊಂಡಿದ್ದಾರೆ. ಅವರು ವಿದೇಶದಲ್ಲಿ ಬೈಕ್ನಲ್ಲಿ ಸಂಚಾರ ಮಾಡುತ್ತಿದ್ದಾರೆ.
We take photos as a return ticket to a moment otherwise gone!#AjithKumar #ak #traveldiaries pic.twitter.com/b3KtVpfMlR
— Suprej Venkat (@suprej) June 19, 2022
ಇಂಗ್ಲೆಂಡ್ ಮೂಲದ ಉದ್ಯಮಿ ಹಾಗೂ ಅಡ್ವೆಂಚರ್ ಬೈಕ್ ರೈಡರ್ ಸುಪ್ರೇಜ್ ವೆಂಕಟ್ ಅವರ ಜತೆ ಅಜಿತ್ ಬೈಕ್ನಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಅಜಿತ್ ಅವರು ಬೈಕ್ ರೈಡಿಂಗ್ ಮಾಡಲು ರೆಡಿ ಆಗಿರುವ ಫೋಟೋಗಳನ್ನು ಸುಪ್ರೇಜ್ ಅವರು ಹಂಚಿಕೊಳ್ಳುತ್ತಿದ್ದಾರೆ. ಅಜಿತ್ ಅವರು ಈ ರೀತಿ ರೋಡ್ ಟ್ರಿಪ್ ಹೋಗಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ಅವರು ಬೈಕ್ನಲ್ಲಿ ಭಾರತ ಪರ್ಯಟನೆ ಮಾಡಿದ್ದರು.
Bruges Market Square #AjithKumarTrip #ak #ajithkumar pic.twitter.com/pZGoRd1qJw
— Suprej Venkat (@suprej) June 19, 2022
ಇದನ್ನೂ ಓದಿ: ಒಟಿಟಿಯಲ್ಲಿ ‘ವಲಿಮೈ’ ದಾಖಲೆ; ಒಂದೇ ನಿಮಿಷಕ್ಕೆ 10 ಕೋಟಿ ಸ್ಟ್ರೀಮಿಂಗ್
ಫೋಟೋದಲ್ಲಿ ಅಜಿತ್ ಅವರ ಲುಕ್ ಸಾಕಷ್ಟು ಗಮನ ಸೆಳೆದಿದೆ. ಅವರು ಉದ್ದನೆಯ ಗಡ್ಡ ಬಿಟ್ಟಿದ್ದಾರೆ. ಹೇರ್ಸ್ಟೈಲ್ ಕೂಡ ಭಿನ್ನವಾಗಿದೆ. ಅವರ ಲುಕ್ ಎಲ್ಲರಿಗೂ ಇಷ್ಟವಾಗಿದೆ. ಮುಂದಿನ ಚಿತ್ರಕ್ಕಾಗಿ ಅವರು ಈ ಅವತಾರ ತಾಳಿದ್ದಾರೆ.
ಈ ವರ್ಷ ತೆರೆಗೆ ಬಂದ ‘ವಲಿಮೈ’ ಚಿತ್ರದಲ್ಲಿ ಅಜಿತ್ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸಾಕಷ್ಟು ಬೈಕ್ ಸ್ಟಂಟ್ಗಳು ಇತ್ತು. ಸ್ವತಃ ಅಜಿತ್ ಅವರು ಬೈಕ್ಸ್ಟಂಟ್ಗಳನ್ನು ಮಾಡಿದ್ದರು. ‘ವಲಿಮೈ’ ಚಿತ್ರದ ಮೇಕಿಂಗ್ ವಿಡಿಯೋಗಳು ವೈರಲ್ ಆಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.