- Kannada News Photo gallery Deepika Padukone and Shah Rukh Khan starrer Pathaan movie second song Jhoome Jo song becomes super hit
Jhoome Jo Pathaan: ‘ಪಠಾಣ್’ ಚಿತ್ರದ 2ನೇ ಹಾಡಿನಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮಿಂಚಿಂಗ್
Deepika Padukone | Shah Rukh Khan: ಹಾಡುಗಳ ಮೂಲಕ ‘ಪಠಾಣ್’ ಚಿತ್ರ ಧೂಳೆಬ್ಬಿಸುತ್ತಿದೆ. ಈ ಸಿನಿಮಾದ 2ನೇ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
Updated on:Dec 22, 2022 | 7:23 PM

Deepika Padukone and Shah Rukh Khan starrer Pathaan movie second song Jhoome Jo song becomes super hit

Deepika Padukone and Shah Rukh Khan starrer Pathaan movie second song Jhoome Jo song becomes super hit

‘ಜೂಮೇ ಜೋ ಪಠಾಣ್..’ ಎಂಬ ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಡ್ಯಾನ್ಸ್ ಕಂಡು ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. ಈ ಗೀತೆಯಿಂದಾಗಿ ಸಿನಿಮಾ ಮೇಲಿನ ಹೈಪ್ ಹೆಚ್ಚಿದೆ.

‘ಪಠಾಣ್’ ಚಿತ್ರದ 2ನೇ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ತುಂಬ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಗೆಟಪ್ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

2023ರ ಜನವರಿ 25ರಂದು ‘ಪಠಾಣ್’ ಸಿನಿಮಾ ರಿಲೀಸ್ ಆಗಲಿದೆ. ನಾಲ್ಕು ವರ್ಷಗಳ ಬಳಿಕ ಶಾರುಖ್ ಖಾನ್ ಅವರು ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಜೋರಾಗಿದೆ.

ಈ ಸಿನಿಮಾಗೆ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಮೂಡಿಬಂದ ಈ ಚಿತ್ರವನ್ನು ಹಲವು ದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಸದ್ಯಕ್ಕಂತೂ ಹಾಡುಗಳ ಮೂಲಕ ‘ಪಠಾಣ್’ ಧೂಳೆಬ್ಬಿಸುತ್ತಿದೆ.
Published On - 7:20 pm, Thu, 22 December 22
























