AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pathaan: ಶುಭಾರಂಭದ ನಿರೀಕ್ಷೆಯಲ್ಲಿ ಬಾಲಿವುಡ್; ‘ಪಠಾಣ್​’ ಚಿತ್ರದ ಬಾಕ್ಸ್​ ಆಫೀಸ್​ ಭವಿಷ್ಯ ಏನಾಗಲಿದೆ?

Shah Rukh Khan | Pathaan Movie: ಶಾರುಖ್​ ಖಾನ್​ ಅವರ ‘ಪಠಾಣ್​’ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೊತೆಗೆ ಬಹಿಷ್ಕಾರದ ಭಯವೂ ಕಾಡುತ್ತಿದೆ.

Pathaan: ಶುಭಾರಂಭದ ನಿರೀಕ್ಷೆಯಲ್ಲಿ ಬಾಲಿವುಡ್; ‘ಪಠಾಣ್​’ ಚಿತ್ರದ ಬಾಕ್ಸ್​ ಆಫೀಸ್​ ಭವಿಷ್ಯ ಏನಾಗಲಿದೆ?
ಶಾರುಖ್ ಖಾನ್
TV9 Web
| Edited By: |

Updated on: Jan 02, 2023 | 8:30 AM

Share

2022ರಲ್ಲಿ ಹಿಂದಿ ಚಿತ್ರರಂಗ (Bollywood) ಸಾಕಷ್ಟು ನಷ್ಟ ಅನುಭವಿಸಿದೆ. ಭಾರಿ ನಿರೀಕ್ಷೆ ಇಟ್ಟುಕೊಂಡು ತಯಾರಾದ ಸಿನಿಮಾಗಳೆಲ್ಲ ಸೋಲಿನ ಹಾದಿ ಹಿಡಿದವು. ಸ್ಟಾರ್​ ಕಲಾವಿದರ ಚಿತ್ರಗಳು ಕೂಡ ಮೋಡಿ ಮಾಡಲಿಲ್ಲ. ದಕ್ಷಿಣ ಭಾರತದ ಸಿನಿಮಾಗಳ ಎದುರಲ್ಲಿ ಹಿಂದಿ ಚಿತ್ರಗಳು ಹೀನಾಯವಾಗಿ ಸೋತವು. ಆದರೆ 2023ರಲ್ಲಿ ಶುಭಾರಂಭ ಆಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಶಾರುಖ್​ ಖಾನ್​ ನಟನೆಯ ‘ಪಠಾಣ್​’ ಚಿತ್ರ (Pathaan Movie) ಜನವರಿ 25ರಂದು ರಿಲೀಸ್​ ಆಗಲಿದೆ. ಈ ಸಿನಿಮಾ ಬಿಗ್​ ಬಜೆಟ್​ನಲ್ಲಿ ಸಿದ್ಧವಾಗಿದ್ದು, ಅಭಿಮಾನಿಗಳ ವಲಯದಲ್ಲಿ ಸಖತ್​ ನಿರೀಕ್ಷೆ ಹುಟ್ಟುಹಾಕಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಎಷ್ಟು ಕಲೆಕ್ಷನ್​ ಮಾಡಲಿದೆ ಎಂಬ ಕೌತುಕ ಸಿನಿಪ್ರಿಯರ ಮನದಲ್ಲಿ ಮೂಡಿದೆ.

ಶಾರುಖ್​ ಖಾನ್​ ಅವರು ‘ಜೀರೋ’ ಸಿನಿಮಾದ ಸೋಲಿನ ಬಳಿಕ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡಿಲ್ಲ. ಹಾಗಾಗಿ ಅವರ ಪಾಲಿಗೆ ‘ಪಠಾಣ್​’ ಚಿತ್ರ ಕಮ್​ಬ್ಯಾಕ್​ ಪ್ರಾಜೆಕ್ಟ್​ ಆಗಲಿದೆ. ಈ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಬೇಕು ಎಂಬುದು ಅಭಿಮಾನಿಗಳ ಆಸೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. 4 ವರ್ಷಗಳ ಬಳಿಕ ಶಾರುಖ್​ ಖಾನ್​ ಅವರ ಸಿನಿಮಾ ತೆರೆಕಾಣುತ್ತಿರುವುದರಿಂದ ಜೋಶ್​ ಜೋರಾಗಿದೆ. ಆದರೆ ಅದಕ್ಕೆ ಬಹಿಷ್ಕಾರದ ಭಯವೂ ಕಾಡುತ್ತಿದೆ.

ಇದನ್ನೂ ಓದಿ: Shah Rukh Khan: ಮೋದಿ ತಾಯಿ ನಿಧನಕ್ಕೆ ಶಾರುಖ್​ ಖಾನ್​ ಸಂತಾಪ; ‘ಪಠಾಣ್’ ಹೀರೋ ಹೇಳಿದ್ದಿಷ್ಟು..

ಇದನ್ನೂ ಓದಿ
Image
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Image
Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು
Image
Besharam Rang: ಹೊಸ ಹಾಡಿನಲ್ಲಿ ಹಾಟ್​ ಆಗಿ ಕಾಣಿಸಿಕೊಂಡ ದೀಪಿಕಾ; ‘ಪಠಾಣ್​’ ಚಿತ್ರದ ಮೇಲೆ ಹೆಚ್ಚಿತು ನಿರೀಕ್ಷೆ
Image
Besharam Rang: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ ವೀಕ್ಷಣೆ ಕಂಡ ‘ಪಠಾಣ್​’ ಸಿನಿಮಾ ಹಾಡು​

ಕೆಲವು ಕಾರಣಗಳಿಂದಾಗಿ ಶಾರುಖ್​ ಖಾನ್​ ಅವರ ಸಿನಿಮಾಗಳನ್ನು ಕೆಲವರು ವಿರೋಧಿಸುತ್ತಿದ್ದಾರೆ. ‘ಪಠಾಣ್​’ ಚಿತ್ರದ ವಿಚಾರದಲ್ಲೂ ಅದು ಮುಂದುವರಿದಿದೆ. ಈ ಚಿತ್ರದ ‘ಬೇಷರಂ ರಂಗ್​..’ ಹಾಡು ಬಿಡುಗಡೆ ಆದಾಗಿನಿಂದ ವಿರೋಧದ ಕಿಚ್ಚು ಜೋರಾಗಿದೆ. ಈ ಗೀತೆಯಲ್ಲಿ ದೀಪಿಕಾ ಪಡುಕೋಣೆ ಅವರು ಕಾಣಿಸಿಕೊಂಡ ರೀತಿ ಸರಿಯಿಲ್ಲ ಮತ್ತು ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು ಸೂಕ್ತವಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂದು ಅಭಿಯಾನ ನಡೆಯುತ್ತಿದೆ.

ಇದನ್ನೂ ಓದಿ: Jhoome Jo Pathaan: ‘ಪಠಾಣ್​’ ಚಿತ್ರದ 2ನೇ ಹಾಡಿನಲ್ಲಿ ಶಾರುಖ್​ ಖಾನ್​, ದೀಪಿಕಾ ಪಡುಕೋಣೆ ಮಿಂಚಿಂಗ್​

ಎಲ್ಲ ಸಂದರ್ಭದಲ್ಲೂ ಬಹಿಷ್ಕಾರದ ಬಿಸಿ ತಟ್ಟಿಯೇಬಿಡುತ್ತದೆ ಅಂತೇನೂ ಇಲ್ಲ. ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕರು ಖಂಡಿತಾ ಚಿತ್ರಮಂದಿರಕ್ಕೆ ಬಂದು ವೀಕ್ಷಿಸುತ್ತಾರೆ. ಹಾಗಾಗಿ ‘ಪಠಾಣ್​’ ಹೇಗಿರಲಿದೆ ಎಂಬುದರ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ. ಈ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಬ್ಯಾಂಗ್ ಬ್ಯಾಂಗ್​’, ‘ವಾರ್​’ ಮುಂತಾದ ಸಾಹಸ ಪ್ರಧಾನ ಸಿನಿಮಾಗಳನ್ನು ನೀಡಿದ್ದ ಅವರು ಈಗ ‘ಪಠಾಣ್​’ ಚಿತ್ರವನ್ನು ಜನರ ಮುಂದಿಡುತ್ತಿದ್ದಾರೆ. ಹಾಗಾಗಿ ಅವರ ಕೆಲಸದ ಮೇಲೆ ಪ್ರೇಕ್ಷಕರಿಗೆ ಭರವಸೆ ಇದೆ.

‘ಪಠಾಣ್​’ ಚಿತ್ರ ಉತ್ತಮ ಕಲೆಕ್ಷನ್​ ಮಾಡಿದರೆ ಬಾಲಿವುಡ್​ಗೆ 2023ರ ಆರಂಭದಲ್ಲೇ ಒಳ್ಳೆಯ ಓಪನಿಂಗ್ ಸಿಕ್ಕಂತೆ ಆಗುತ್ತದೆ. ಶಾರುಖ್​ ಖಾನ್​ ಅವರು ಮತ್ತೆ ಗೆಲುವಿನ ಟ್ರಾಕ್​​ಗೆ ಮರಳಲು ಸಾಧ್ಯವಾಗುತ್ತದೆ. ಏನಾಗಲಿದೆ ಅಂತ ತಿಳಿಯಲು ಬಾಲಿವುಡ್ ಮಂದಿ ಕಾದಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್