Karnesh Sharma: ಅನುಷ್ಕಾ ಶರ್ಮಾ ತಮ್ಮನ ಜತೆಗಿನ ಡೇಟಿಂಗ್ ವಿಚಾರ ಅಧಿಕೃತ ಮಾಡಿದ ‘ಬುಲ್​ಬುಲ್’ ನಟಿ

ಕರ್ಣೇಶ್ ಜತೆ ತೃಪ್ತಿ​ ಸುತ್ತಾಟ ನಡೆಸುತ್ತಿರುವುದು ಅಧಿಕೃತ ಆಗಿದೆ. ಕರ್ಣೇಶ್ ಜತೆ ಆಪ್ತವಾಗಿರುವ ಫೋಟೋನ ತೃಪ್ತಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ತೃಪ್ತಿ ಕೆನ್ನೆಗೆ ಕರ್ಣೇಶ್ ಮುತ್ತಿಡುತ್ತಿದ್ದಾರೆ.

Karnesh Sharma: ಅನುಷ್ಕಾ ಶರ್ಮಾ ತಮ್ಮನ ಜತೆಗಿನ ಡೇಟಿಂಗ್ ವಿಚಾರ ಅಧಿಕೃತ ಮಾಡಿದ ‘ಬುಲ್​ಬುಲ್’ ನಟಿ
ತೃಪ್ತಿ-ಕರ್ಣೇಶ್​, ಕರ್ಣೇಶ್​-ಅನುಷ್ಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 02, 2023 | 7:00 PM

ಸೆಲೆಬ್ರಿಟಿಗಳು ಹಾಗೂ ಅವರ ಕುಟುಂಬದವರ ಮೇಲೆ ಅಭಿಮಾನಿಗಳು ಕಣ್ಣಿಟ್ಟಿರುತ್ತಾರೆ. ತಮ್ಮಿಷ್ಟದ ಸೆಲೆಬ್ರಿಟಿ ಕುಟುಂಬದವರು ಏನು ಮಾಡುತ್ತಾರೆ? ಯಾರ ಜತೆ ಸುತ್ತಾಟ ನಡೆಸುತ್ತಾರೆ ಎಂಬ ಬಗ್ಗೆ ಕಣ್ಣಿಟ್ಟಿರುತ್ತಾರೆ. ಅಭಿಮಾನಿಗಳ ದೃಷ್ಟಿ ನಟಿ ಅನುಷ್ಕಾ ಶರ್ಮಾ (Anushka Sharma) ಅವರ ಸಹೋದರ ಕರ್ಣೇಶ್​ ಶರ್ಮಾ (Karnesh Sharma) ಮೇಲಿತ್ತು. ಅವರು ನಟಿ ತೃಪ್ತಿ ದಿಮ್ರಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಇದು ನಿಜವಾಗಿದೆ. ಇದಕ್ಕೆ ಫೋಟೋ ಸಾಕ್ಷ್ಯ ಸಿಕ್ಕಿದೆ.

ನೆಟ್​​ಫ್ಲಿಕ್ಸ್​ನಲ್ಲಿ ರಿಲೀಸ್​ ಆದ ಹಿಂದಿಯ ‘ಬುಲ್​ಬುಲ್’​ ಸಿನಿಮಾದಲ್ಲಿ ತೃಪ್ತಿ ದಿಮ್ರಿ ನಟಿಸಿದ್ದರು. ‘ಬುಲ್​ಬುಲ್’ ಚಿತ್ರಕ್ಕೆ ಬಂಡವಾಳ ಹೂಡಿದ್ದು ‘ಕ್ಲೀನ್​ ಸ್ಲೇಟ್​ ಫಿಲ್ಮ್ಸ್’​​​. ಈ ಪ್ರೊಡಕ್ಷನ್​ಹೌಸ್​​ ಅನ್ನು ಅನುಷ್ಕಾ ಶರ್ಮಾ ಹಾಗೂ ಕರ್ಣೇಶ್ ಒಟ್ಟಾಗಿ ಆರಂಭಿಸಿದ್ದರು​. ಈಗ ಕರ್ಣೇಶ್ ಇದನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಮಧ್ಯೆ ಕರ್ಣೇಶ್ ಜತೆ ತೃಪ್ತಿ​ ಸುತ್ತಾಟ ನಡೆಸುತ್ತಿರುವುದು ಅಧಿಕೃತ ಆಗಿದೆ. ಕರ್ಣೇಶ್ ಜತೆ ಆಪ್ತವಾಗಿರುವ ಫೋಟೋನ ತೃಪ್ತಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ತೃಪ್ತಿ ಕೆನ್ನೆಗೆ ಕರ್ಣೇಶ್ ಮುತ್ತಿಡುತ್ತಿದ್ದಾರೆ. 2022ರಲ್ಲಿ ತೆರೆಗೆ ಬಂದ ಕರ್ಣೇಶ್ ನಿರ್ಮಾಣದ ‘ಕಲಾ’ ಸಿನಿಮಾದಲ್ಲೂ ತೃಪ್ತಿ ಬಣ್ಣ ಹಚ್ಚಿದ್ದರು.

ಸಿನಿಮಾ ಸೆಟ್​​ನಲ್ಲಿ ಲವ್ ಹುಟ್ಟಿಕೊಂಡ ಕಥೆ ಸಾಕಷ್ಟಿದೆ. ಇವರ ಕಥೆಯೂ ಹಾಗೆಯೇ ಇದೆ. ‘ಬುಲ್​ಬುಲ್’​ ಸಿನಿಮಾದ ಶೂಟಿಂಗ್​ ವೇಳೆ ಕರ್ಣೇಶ್​ ಸೆಟ್​ಗೆ ತೆರಳುತ್ತಿದ್ದರು. ಆಗ, ತೃಪ್ತಿ ಮತ್ತು ಕರ್ಣೇಶ್​​ ನಡುವೆ ಗೆಳೆತನ ಬೆಳೆದಿದೆ. ಗೆಳೆತನ ಪ್ರೀತಿಗೆ ತಿರುಗಿದೆ. ಇಬ್ಬರೂ ಜತೆಯಾಗಿ ಹಲವು ಕಡೆಗಳಲ್ಲಿ ಸುತ್ತಾಟ ನಡೆಸಿದ್ದಾರೆ. ತೃಪ್ತಿ ಡೆಹ್ರಾಡೂನ್​ ಮೂಲದವರು. ಸದ್ಯ ಅವರು ಮುಂಬೈನಲ್ಲಿ ಸೆಟಲ್​​ ಆಗಿದ್ದಾರೆ.

ಹಲವು ಸಮಯದ ಹಿಂದೆ ಕರ್ಣೇಶ್ ಹಾಗೂ ತೃಪ್ತಿ ಜತೆಗೆ ನಿಂತಿರುವ ಫೋಟೋ ಅನ್ನು ಅನುಷ್ಕಾ ಶೇರ್ ಮಾಡಿಕೊಂಡಿದ್ದರು. ಕರ್ಣೇಶ್ ಜತೆ ತೃಪ್ತಿ ಇರುವ ಫೋಟೋ ಸಾಕಷ್ಟು ಕುತೂಹಲ ಮೂಡಿತ್ತು.

ಇದನ್ನೂ ಓದಿ: ತಾವೇ ಸ್ಥಾಪಿಸಿದ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾ; ಅಂಥದ್ದೇನಾಯ್ತು?

‘ಕ್ಲೀನ್​ ಸ್ಲೇಟ್​ ಫಿಲ್ಮ್ಸ್’ ಸಿನಿಮಾ ಬ್ಯಾನರ್​ ಅಡಿಯಲ್ಲಿ ಸಾಕಷ್ಟು ಚಿತ್ರಗಳು ಸಿದ್ಧಗೊಂಡಿವೆ. ಕರ್ಣೇಶ್​ ನಿರ್ಮಾಣದ ‘ಪಾತಾಳ್​ ಲೋಕ್’​ ವೆಬ್​ ಸೀರಿಸ್​ ಜನಮನ್ನಣೆ ಪಡೆದುಕೊಂಡಿತ್ತು. ಅಲ್ಲದೆ, ಸಾಕಷ್ಟು ಅವಾರ್ಡ್​ಗಳನ್ನು ಕೂಡ ಪಡೆದುಕೊಂಡಿತ್ತು. ಈ ಸೀರಿಸ್​​ಗೆ ಪಾರ್ಟ್​ 2 ಬರಲಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ