ಪಾಕಿಸ್ತಾನದ ಸಾಂಗ್ ಕದ್ದ ‘ಪಠಾಣ್’ ತಂಡ?; ‘ಬೇಷರಂ ರಂಗ್..’ ಹಾಡನ್ನು ಹೋಲುತ್ತಿದೆ ಈ ಗೀತೆ
Besharam Rang Song: ಸಾಜಿದ್ ಅವರು ಎಲ್ಲಿಯೂ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡನ್ನು ಉಲ್ಲೇಖ ಮಾಡಿಲ್ಲ. ಆದರೆ, ಸಾಜಿದ್ ಹಾಡಿದ ಹಾಡು ಎಲ್ಲರಿಗೂ ‘ಬೇಷರಂ ರಂಗ್..’ ಸಾಂಗ್ ಅನ್ನು ನೆನಪಿಸಿದೆ.
ಶಾರುಖ್ ಖಾನ್ (Shah Rukh Khan) ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್..’ ಹಾಡು ಇತ್ತೀಚೆಗೆ ಸಾಕಷ್ಟು ವಿವಾದ ಸೃಷ್ಟಿ ಮಾಡಿದೆ. ಈ ಹಾಡಿನಿಂದ ಹಿಂದೂಗಳಿಗೆ ಅವಮಾನ ಆಗಿದೆ ಎಂದು ಅನೇಕರು ಆರೋಪಿಸಿದ್ದಾರೆ. ಈ ವಿವಾದ ಕೊಂಚ ತಣ್ಣಗಾಗುತ್ತಿರುವಾಗಲೇ ‘ಬೇಷರಂ ರಂಗ್..’ (Besharam Rang..) ಟ್ಯೂನ್ ಮೇಲೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ. ಪಾಕಿಸ್ತಾನದ ಹಾಡಿನಿಂದ ಸ್ಫೂರ್ತಿ ಪಡೆದು ‘ಬೇಷರಂ ರಂಗ್..’ ಹಾಡನ್ನು ಮಾಡಲಾಯಿತೇ ಎಂಬ ಪ್ರಶ್ನೆ ಮೂಡಿದೆ.
ಪಾಕಿಸ್ತಾನದ ಸಿಂಗರ್ ಸಾಜಿದ್ ಅಲಿ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ನಲ್ಲಿ ಅವರು ಹಾಡೊಂದನ್ನು ಹಾಡಿದ್ದಾರೆ. ಇದಕ್ಕೆ ಕ್ಯಾಪ್ಶನ್ ನೀಡಿರುವ ಅವರು, ‘ಹೊಸ ಸಿನಿಮಾದ ಹಾಡನ್ನು ಕೇಳಿದ ನಂತರದಲ್ಲಿ 26 ವರ್ಷಗಳ ಹಿಂದೆ ನಾನು ರಿಲೀಸ್ ಮಾಡಿದ ‘ಅಬ್ ಕೆ ಹಂ ಬಿಚಾರೆ..’ ಹಾಡು ನೆನಪಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಸಾಜಿದ್ ಅವರು ಎಲ್ಲಿಯೂ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡನ್ನು ಉಲ್ಲೇಖ ಮಾಡಿಲ್ಲ. ಆದರೆ, ಸಾಜಿದ್ ಹಾಡಿದ ಹಾಡು ಎಲ್ಲರಿಗೂ ‘ಬೇಷರಂ ರಂಗ್..’ ಸಾಂಗ್ ಅನ್ನು ನೆನಪಿಸಿದೆ. ಹೀಗಾಗಿ ಅನೇಕರು ಕಮೆಂಟ್ ಬಾಕ್ಸ್ನಲ್ಲಿ ಈ ಬಗ್ಗೆ ಬರೆದಿದ್ದಾರೆ. ‘ನೀವು ಹೆಸರು ಹಾಕದೆ ಇದ್ದರೂ ನಮಗೆ ಬೇಷರಂ ರಂಗ್ ಹಾಡು ನೆನಪಾಗಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಕಾನೂನಾತ್ಮಕವಾಗಿ ಹೋರಾಡುವಂತೆ ಸಾಜಿದ ಬಳಿ ಮನವಿ ಮಾಡಿದ್ದಾರೆ. ಸಾಜಿದ್ ಅವರ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಶಾರುಖ್ ಅಭಿಮಾನಿಗಳು ಈ ಆರೋಪವನ್ನು ಅಲ್ಲಗಳೆಯುತ್ತಿದ್ದಾರೆ.
View this post on Instagram
ಇದನ್ನೂ ಓದಿ: ‘ಪಠಾಣ್’ ಚಿತ್ರದ ಎರಡನೇ ಹಾಡಲ್ಲೂ ಹಾಟ್ ಆಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಅವರು ‘ಬೆಷರಂ ರಂಗ್..’ (ನಾಚಿಕೆ ಇಲ್ಲದ ಬಣ್ಣ) ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿ ಧರಿಸಿ ಕಾಣಿಸಿಕೊಂಡಿದ್ದರು. ಈ ಬಗ್ಗೆ ಅನೇಕರಿಂದ ವಿರೋಧ ವ್ಯಕ್ತವಾಗಿತ್ತು. ಈ ಸಿನಿಮಾ ಬ್ಯಾನ್ ಮಾಡುವ ಆಗ್ರಹಗಳು ಕೇಳಿಬಂದಿವೆ. ಜನವರಿ 25ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಹಾಡಿಗೆ ಮತ್ತಷ್ಟು ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಸಿನಿಮಾಗೆ ಸಿದ್ದಾರ್ಥ್ ಆನಂದ್ ನಿರ್ದೇಶನ ಇದೆ. ಈ ಮೊದಲು ‘ವಾರ್’ ಅಂತಹ ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.