AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ranbir Kapoor: ಸೆಲ್ಫಿ ಕೇಳಲು ಬಂದ ಅಭಿಮಾನಿಯ ಮೊಬೈಲ್​​ ಎಸೆದ ರಣಬೀರ್​ ಕಪೂರ್​; ವಿಡಿಯೋ ವೈರಲ್​

Ranbir Kapoor Viral Video: ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯ ಜೊತೆ ರಣಬೀರ್​ ಕಪೂರ್​ ಅವರು ಅಹಂಕಾರದಿಂದ ವರ್ತಿಸಿದ್ದಾರೆ. ಅಭಿಮಾನಿಯ ಮೊಬೈಲ್​ ಫೋನ್​ ಕಿತ್ತುಕೊಂಡು ಎಸೆದಿದ್ದಾರೆ.

Ranbir Kapoor: ಸೆಲ್ಫಿ ಕೇಳಲು ಬಂದ ಅಭಿಮಾನಿಯ ಮೊಬೈಲ್​​ ಎಸೆದ ರಣಬೀರ್​ ಕಪೂರ್​; ವಿಡಿಯೋ ವೈರಲ್​
ವೈರಲ್ ವಿಡಿಯೋದಲ್ಲಿ ರಣಬೀರ್ ಕಪೂರ್
ಮದನ್​ ಕುಮಾರ್​
|

Updated on:Jan 27, 2023 | 5:45 PM

Share

ನಟ ರಣಬೀರ್​ ಕಪೂರ್​ (Ranbir Kapoor) ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಅವರು ಹೋದಲ್ಲಿ ಬಂದಲ್ಲಿ ಜನರು ಮುತ್ತಿಕೊಳ್ಳುತ್ತಾರೆ. ನೆಚ್ಚಿನ ನಟನ ಜೊತೆ ಒಂದೇ ಒಂದು ಸೆಲ್ಫಿ ತೆಗೆದುಕೊಳ್ಳಬೇಕು ಎಂಬುದು ಫ್ಯಾನ್ಸ್​ (Ranbir Kapoor Fans) ಬಯಕೆ. ಆದರೆ ಎಲ್ಲರ ಕೈಗೂ ರಣಬೀರ್​ ಕಪೂರ್​ ಸಿಗುವುದಿಲ್ಲ. ಅಪರೂಪಕ್ಕೆ ಸಿಕ್ಕರೆ ಆ ಚಾನ್ಸ್​ ಯಾರೂ ಬಿಡಲ್ಲ. ಆದರೆ ಈ ರೀತಿ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬರ ಜೊತೆ ರಣಬೀರ್​ ಕಪೂರ್​ ಅವರು ಕೆಟ್ಟದಾಗಿ ವರ್ತಿಸಿದ್ದಾರೆ. ಅಭಿಮಾನಿಯ ಮೊಬೈಲ್​ ಫೋನ್​ ಕಿತ್ತುಕೊಂಡು ಎಸೆದಿದ್ದಾರೆ. ಈ ವಿಡಿಯೋ (Ranbir Kapoor Viral Video) ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ವಿಡಿಯೋದಲ್ಲಿನ ಘಟನೆ ನಿಜವೋ ಅಥವಾ ಸುಳ್ಳೋ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ವೈರಲ್​ ವಿಡಿಯೋದಲ್ಲಿ ಏನಿದೆ?

ರಣಬೀರ್​ ಕಪೂರ್​ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಯೊಬ್ಬರು ಬರುತ್ತಾರೆ. ಸುತ್ತಲೂ ಜನ ಜಂಗುಳಿ ಇರುತ್ತದೆ. ಆ ಗಡಿಬಿಡಿಯಲ್ಲಿಯೂ ಅಭಿಮಾನಿಗೆ ರಣಬೀರ್​ ಕಪೂರ್​ ಸೆಲ್ಫಿ ನೀಡುತ್ತಾರೆ. ಆದರೆ ಫೋಟೋ ಇನ್ನೂ ಚೆನ್ನಾಗಿ ಬರಲಿ ಎಂಬ ಕಾರಣಕ್ಕೆ ಆ ಅಭಿಮಾನಿ ಮತ್ತೆ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ. ಆಗ ರಣಬೀರ್​ ಕಪೂರ್​ಗೆ ಕೋಪ ಬರುತ್ತದೆ. ಅಭಿಮಾನಿಯ ಮೊಬೈಲ್​ ಫೋನ್​ ಕಿತ್ತುಕೊಂಡು ದೂರಕ್ಕೆ ಎಸೆಯುತ್ತಾರೆ.

ಇದನ್ನೂ ಓದಿ
Image
Alia Bhatt: ಅವಳಿ ಮಕ್ಕಳಿಗೆ ಜನ್ಮ ನೀಡ್ತಾರಾ ಆಲಿಯಾ? ಒಂದು ಸುಳ್ಳು, ಎರಡು ಸತ್ಯ ಹೇಳಿ ಗುಟ್ಟು ಬಿಟ್ಟುಕೊಟ್ಟ ರಣಬೀರ್​
Image
‘ಹೆಣ್ಣು ಮಗು ಬೇಕು’: ಮನದ ಆಸೆ ತಿಳಿಸಿ, ಮಕ್ಕಳನ್ನು ನೋಡಿಕೊಳ್ಳುವುದು ಕಲಿಯುತ್ತಿರುವ ರಣಬೀರ್​ ಕಪೂರ್
Image
10ನೇ ಕ್ಲಾಸ್​ನಲ್ಲಿ ರಣಬೀರ್​ ಕಪೂರ್​ ಪಡೆದ ಅಂಕ ಎಷ್ಟು? ನಿರೀಕ್ಷಿಸಿದ್ದೇ ಬೇರೆ, ಆಗಿದ್ದೇ ಬೇರೆ
Image
ಮದುವೆ ಆದ ಖುಷಿಗೆ ಹೆಂಡತಿಯನ್ನು ಎತ್ತಿಕೊಂಡು ಓಡಾಡಿದ​ ರಣಬೀರ್​ ಕಪೂರ್​: ವಿಡಿಯೋ ವೈರಲ್​

ಇದನ್ನೂ ಓದಿ: Ranbir Kapoor: ‘ಬ್ರಹ್ಮಾಸ್ತ್ರ ನೋಡಿ ಅಂತ ನಾನು ಎಲ್ಲರ ಮನೆಗೆ ಹೋಗಿ ಬೇಡಿಕೊಳ್ಳಬೇಕಾ?’: ಸಿಟ್ಟಾದ ರಣಬೀರ್​ ಕಪೂರ್​

ಈ ವಿಡಿಯೋ ವೈರಲ್​ ಆದ ಬಳಿಕ ನೆಟ್ಟಿಗರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಅಹಂಕಾರದಿಂದ ರಣಬೀರ್​ ಕಪೂರ್​ ಈ ರೀತಿ ಮಾಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಕಳೆದ ವರ್ಷ ರಿಲೀಸ್​ ಆದ ‘ಬ್ರಹ್ಮಾಸ್ತ್ರ’ ಸಿನಿಮಾದಿಂದ ರಣಬೀರ್​ ಕಪೂರ್​ ಅವರಿಗೆ ಯಶಸ್ಸು ಸಿಕ್ಕಿತು. ಆ ಗೆಲುವಿನ ಬಳಿಕ ಅವರ ಈ ರೀತಿ ವರ್ತಿಸಲು ಆರಂಭಿಸಿದ್ದಾರೆ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಇನ್ನೂ ಕೆಲವರಿಗೆ ಈ ವಿಡಿಯೋದ ಅಸಲಿಯತ್ತಿನ ಮೇಲೆ ಅನುಮಾನ ಮೂಡಿದೆ. ಇದು ಪ್ರಚಾರದ ಗಿಮಿಕ್​ ಎಂದು ಹಲವರು ಹೇಳುತ್ತಿದ್ದಾರೆ. ಯಾವುದೋ ಮೊಬೈಲ್​ ಫೋನ್​ ಕಂಪನಿಯ ಜಾಹೀರಾತಿನ ಶೂಟಿಂಗ್​ ಇರಬಹುದು ಎಂದು ಒಂದಷ್ಟು ಮಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಣಬೀರ್​ ಕಪೂರ್​ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಸೆಲೆಬ್ರಿಟಿಗಳು ತಾವು ಒಪ್ಪಂದ ಮಾಡಿಕೊಂಡಿರುವ ಬ್ರ್ಯಾಂಡ್​ಗಳ ಪ್ರಚಾರಕ್ಕಾಗಿ ಹಲವು ತಂತ್ರಗಳನ್ನು ಬಳಸುತ್ತಾರೆ. ಇತ್ತೀಚೆಗೆ ಇಂಥ ಪ್ರಯತ್ನಗಳು ಹೆಚ್ಚಾಗುತ್ತಿದೆ. ರಣಬೀರ್​ ಕಪೂರ್​ ಅವರ ಈ ವೈರಲ್ ವಿಡಿಯೋದ ಹಿಂದೆಯೂ ಯಾವುದೋ ಗಿಮಿಕ್​ ಇದೆ ಎಂದು ಹೇಳಲಾಗುತ್ತಿದೆ. ಆ ಬಗ್ಗೆ ಇನ್ನಷ್ಟೇ ಪಕ್ಕಾ ಮಾಹಿತಿ ಹೊರಬೀಳಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:45 pm, Fri, 27 January 23

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ