Pathaan 2nd Day Collections: ಎರಡನೇ ದಿನವೂ ಬಾಕ್ಸ್ ಆಫೀಸ್ನಲ್ಲಿ ‘ಪಠಾಣ್’ ಅಬ್ಬರ; ಬೈಕಾಟ್ ಎಂದವರು ತತ್ತರ
Pathan Movie 2nd Day Box Office Collection: ‘ಬೈಕಾಟ್ ಪಠಾಣ್’ ಎಂದು ಒಂದಷ್ಟು ಮಂದಿ ಬೊಬ್ಬೆ ಹೊಡೆದರು. ಆದರೆ, ಸಿನಿಮಾ ಅಬ್ಬರಕ್ಕೆ ಈ ಬೈಕಾಟ್ ಟ್ರೆಂಡ್ ಮೂಲೆಗುಂಪಾಗಿದೆ. ಸಿನಿಮಾ ಬೈಕಾಟ್ ಟ್ರೆಂಡ್ನ ಮೆಟ್ಟಿ ನಿಂತು ಕಲೆಕ್ಷನ್ ಮಾಡುತ್ತಿದೆ.
‘ಪಠಾಣ್’ ಸಿನಿಮಾ (Pathan Movie) ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದೆ. ಜನವರಿ 25ಕ್ಕೆ ರಿಲೀಸ್ ಆದ ಈ ಚಿತ್ರ ಶಾರುಖ್ ಖಾನ್ (Shah Rukh Khan) ವೃತ್ತಿ ಜೀವನದ ಯಶಸ್ವಿ ಸಿನಿಮಾ ಎನಿಸಿಕೊಂಡಿದೆ. ಈ ಚಿತ್ರ ಬುಧವಾರ (ಜನವರಿ 25) ಭಾರತದಲ್ಲಿ ಬರೋಬ್ಬರಿ 55 ಕೋಟಿ ರೂಪಾಯಿ ಕಮಾಯಿ ಮಾಡಿತ್ತು. ಈಗ ಜನವರಿ 26ರ ಲೆಕ್ಕ ಸಿಕ್ಕಿದೆ. ಈ ಸಿನಿಮಾ ಎರಡನೇ ದಿನವೂ ಅಬ್ಬರಿಸಿದೆ. ಈ ಚಿತ್ರದ ಒಟ್ಟಾರೆ ಕಲೆಕ್ಷನ್ ಎರಡೇ ದಿನಕ್ಕೆ 120 ಕೋಟಿ ರೂಪಾಯಿ ದಾಟಿದೆ. ಶಾರುಖ್ ಖಾನ್ ಹಾಗೂ ಮಾಸ್ ಸಿನಿಮಾಗಳನ್ನು ಮಾಡಿ ಫೇಮಸ್ ಆದ ಸಿದ್ದಾರ್ಥ್ ಆನಂದ್ ಕೈ ಜೋಡಿಸಿದಾಗಲೇ ಸಿನಿಪ್ರಿಯರಿಗೆ ನಿರೀಕ್ಷೆ ಮೂಡಿತ್ತು. ಈ ನಿರೀಕ್ಷೆಯನ್ನು ‘ಪಠಾಣ್’ ಸುಳ್ಳು ಮಾಡಿಲ್ಲ. ಭಾರತದ ಬಾಕ್ಸ್ ಆಫೀಸ್ನಲ್ಲಿ ಚಿತ್ರ ಅಬ್ಬರದ ಕಲೆಕ್ಷನ್ ಮಾಡಿದೆ. ಎರಡನೇ ದಿನ ಚಿತ್ರಕ್ಕೆ 68 ಕೋಟಿ ರೂಪಾಯಿ ಹರಿದು ಬಂದಿದೆ. ಈ ಮೂಲಕ ಸಿನಿಮಾದ ಒಟ್ಟಾರೆ ಕಲೆಕ್ಷನ್ 123 ಕೋಟಿ ರೂಪಾಯಿ ದಾಟಿದೆ.
‘ಪಠಾಣ್’ ಚಿತ್ರದ ‘ಬೇಷರಂ ರಂಗ್..’ ಹಾಡು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಣ್ಣದ ಬಿಕಿನಿ ಹಾಕಿದ್ದು ವಿವಾದ ಹುಟ್ಟಿಕೊಳ್ಳಲು ಪ್ರಮುಖ ಕಾರಣ ಆಗಿತ್ತು. ಈ ಬೆನ್ನಲ್ಲೇ ‘ಬೈಕಾಟ್ ಪಠಾಣ್’ ಎಂದು ಒಂದಷ್ಟು ಮಂದಿ ಬೊಬ್ಬೆ ಹೊಡೆದರು. ಆದರೆ, ಸಿನಿಮಾ ಅಬ್ಬರಕ್ಕೆ ಈ ಬೈಕಾಟ್ ಟ್ರೆಂಡ್ ಮೂಲೆಗುಂಪಾಗಿದೆ. ಸಿನಿಮಾ ಬೈಕಾಟ್ ಟ್ರೆಂಡ್ನ ಮೆಟ್ಟಿ ನಿಂತು ಕಲೆಕ್ಷನ್ ಮಾಡುತ್ತಿದೆ.
ALL #BO RECORDS DEMOLISHED… #Pathaan creates HISTORY on Day 2 as well… FIRST #Hindi film to near ₹ 70 cr on a *single day*… Wed 55 cr, Thu 68 cr [#RepublicDay]. Total: ₹ 123 cr. #Hindi version. #India biz. UNIMAGINABLE. UNPRECEDENTED. UNSTOPPABLE. pic.twitter.com/r6ZKG9QA5Y
— taran adarsh (@taran_adarsh) January 27, 2023
ಶಾರುಖ್ ಖಾನ್ಗೆ ಗೆಲುವು ಸಿಗದೆ ಹಲವು ವರ್ಷಗಳೇ ಕಳೆದಿದ್ದವು. ಈ ಕಾರಣಕ್ಕೆ ನಾಲ್ಕು ವರ್ಷ ಅವರು ನಟನೆಯಿಂದ ದೂರ ಉಳಿದಿದ್ದರು. ಅವರು ಒಳ್ಳೆಯ ಕಂಬ್ಯಾಕ್ ಮಾಡಲಿ ಎಂದು ಫ್ಯಾನ್ಸ್ ಕಾದಿದ್ದರು. ಅದೇ ರೀತಿ ಅವರು ದೊಡ್ಡ ಮಟ್ಟದಲ್ಲೇ ಕಂಬ್ಯಾಕ್ ಮಾಡಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ: ‘ಪಠಾಣ್’ ಚಿತ್ರಕ್ಕಾಗಿ ಶಾರುಖ್ ಖಾನ್ ಪಡೆದ ಸಂಭಾವನೆ ಇಷ್ಟೇನಾ? ಅಕ್ಷಯ್ ಕುಮಾರ್ಗಿಂತ ಕಡಿಮೆ
ಚಿತ್ರದ ಕಲೆಕ್ಷನ್ ಹೀಗೆಯೇ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ‘ಪಠಾಣ್’ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ಶನಿವಾರ (ಜನವರಿ 28) ಹಾಗೂ ಭಾನುವಾರ (ಜನವರಿ 29) ವೀಕೆಂಡ್ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ಅದು ಸಿನಿಮಾಗೆ ವರದಾನವಾಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:39 pm, Fri, 27 January 23