‘ಪಠಾಣ್​’ ಚಿತ್ರಕ್ಕಾಗಿ ಶಾರುಖ್ ಖಾನ್ ಪಡೆದ ಸಂಭಾವನೆ ಇಷ್ಟೇನಾ? ಅಕ್ಷಯ್​ ಕುಮಾರ್​​ಗಿಂತ ಕಡಿಮೆ  

Shah Rukh Khan Remuneration: ಶಾರುಖ್ ನಟನೆಯ ‘ಪಠಾಣ್​’ ಚಿತ್ರಕ್ಕೆ ಯಶ್ ರಾಜ್ ಫಿಲ್ಮ್ಸ್​ ಬಂಡವಾಳ ಹೂಡಿದೆ. ಈ ಚಿತ್ರಕ್ಕಾಗಿ ಶಾರುಖ್ ಖಾನ್ ಕಡಿಮೆ ಸಂಭಾವನೆ ಪಡೆದಿದ್ದಾರೆ.

‘ಪಠಾಣ್​’ ಚಿತ್ರಕ್ಕಾಗಿ ಶಾರುಖ್ ಖಾನ್ ಪಡೆದ ಸಂಭಾವನೆ ಇಷ್ಟೇನಾ? ಅಕ್ಷಯ್​ ಕುಮಾರ್​​ಗಿಂತ ಕಡಿಮೆ  
ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 19, 2023 | 2:50 PM

ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್​’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಮುಂದಿನ ಗುರುವಾರ (ಜನವರಿ 25) ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಶಾರುಖ್ ಖಾನ್ ಅವರು ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ದುಬೈಗೆ ತೆರಳಿ ಅವರು ‘ಪಠಾಣ್​’ ಸಿನಿಮಾಗೆ ಪ್ರಚಾರ ನೀಡಿದ್ದರು. ಈಗ ಶಾರುಖ್ ಖಾನ್ ಅವರು ‘ಪಠಾಣ್​’ ಚಿತ್ರಕ್ಕಾಗಿ (Pathan Movie) ಪಡೆದ ಸಂಭಾವನೆ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಅಕ್ಷಯ್​ ಕುಮಾರ್​ಗಿಂತ ಅವರು ಕಡಿಮೆ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿದೆ.

ಶಾರುಖ್ ಖಾನ್ ಅವರು ಸಿನಿಮಾ ಮಾಡುತ್ತಾರೆ ಎಂದರೆ ನಿರ್ಮಾಪಕರು ಹಣ ಹೂಡಲು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ, ಎಲ್ಲರಿಗೂ ಶಾರುಖ್ ಅವರನ್ನು ಭರಿಸುವ ಶಕ್ತಿ ಇರುವುದಿಲ್ಲ. ದೊಡ್ಡ ನಿರ್ಮಾಣ ಸಂಸ್ಥೆಗಳಿಗೆ ಮಾತ್ರ ಈ ರೀತಿಯ ಅವಕಾಶ ಸಿಗುತ್ತದೆ. ಶಾರುಖ್ ನಟನೆಯ ‘ಪಠಾಣ್​’ ಚಿತ್ರಕ್ಕೆ ಯಶ್ ರಾಜ್ ಫಿಲ್ಮ್ಸ್​ ಬಂಡವಾಳ ಹೂಡಿದೆ. ಈ ಚಿತ್ರಕ್ಕಾಗಿ ಶಾರುಖ್ ಖಾನ್ ಕೇವಲ 35-40 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ.

ಶಾರುಖ್ ಖಾನ್ ಅವರು ಇಷ್ಟು ಕಡಿಮೆ ಮೊತ್ತಕ್ಕೆ ಸಿನಿಮಾ ಸಹಿ ಮಾಡಿದ್ದೇಕೆ? ಆ ಪ್ರಶ್ನೆಗೆ ಉತ್ತರ ಇದೆ. ಶಾರುಖ್ ಖಾನ್ ಅವರು ಸಂಭಾವನೆ ಜತೆಗೆ ಲಾಭದಲ್ಲಿ ಬರುವ ಶೇರ್​ ಕೂಡ ಪಡೆಯಲಿದ್ದಾರೆ. ಸಿನಿಮಾ ಗಳಿಕೆಯಲ್ಲಿ ಒಂದಷ್ಟು ಭಾಗವನ್ನು ಶಾರುಖ್ ಖಾನ್ ಪಡೆಯುತ್ತಾರೆ. ಅನೇಕ ಸ್ಟಾರ್ ಹೀರೋಗಳು ಈ ಮೊದಲು ಈ ರೀತಿಯ ಒಪ್ಪಂದ ಮಾಡಿಕೊಂಡಿದ್ದಿದೆ. ಒಂದೊಮ್ಮೆ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡದೆ ಇದ್ದರೆ ಆಗ ಶಾರುಖ್​ ಖಾನ್​​ಗೆ ನಷ್ಟ ಉಂಟಾಗಲಿದೆ.

ಇದನ್ನೂ ಓದಿ
Image
Pathan Trailer: ವನವಾಸ ಮುಗಿಸಿ ಬಂದ ‘ಪಠಾಣ್’; ಶಾರುಖ್ ಚಿತ್ರದ ಟ್ರೇಲರ್​ನಲ್ಲಿ ಭರಪೂರ ಆ್ಯಕ್ಷನ್
Image
Pathan Trailer: ಶಾರುಖ್ ಖಾನ್ ಚಿತ್ರಕ್ಕೆ ಮತ್ತೊಂದು ಪೆಟ್ಟು; ಆನ್​​ಲೈನ್​ನಲ್ಲಿ ‘ಪಠಾಣ್​’ ಚಿತ್ರದ ಟ್ರೇಲರ್ ಲೀಕ್​?
Image
Vivek Agnihotri: ಶಾರುಖ್​​ ನಟನೆಯ ‘ಬೇಷರಂ ರಂಗ್​’ ಹಾಡು ನೋಡಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ವಿವೇಕ್​ ಅಗ್ನಿಹೋತ್ರಿ
Image
Deepika Padukone: ‘ಬೇಷರಂ​ ರಂಗ್​’ ಹಾಡಿನ ವಿವಾದ; ದೀಪಿಕಾ ಕೇಸರಿ ಬಿಕಿನಿ ಧರಿಸಿದ್ದಕ್ಕೂ ನೆಟ್ಟಿಗರ ತಕರಾರು

ಇದನ್ನೂ ಓದಿ: ಶಾರುಖ್ ಖಾನ್ ಜಗತ್ತಿನ ನಾಲ್ಕನೇ ಶ್ರೀಮಂತ ನಟ; ಅಬ್ಬಬ್ಬಾ ಅವರ ಒಟ್ಟೂ ಆಸ್ತಿ ಇಷ್ಟೊಂದಾ?

ಯಶ್ ರಾಜ್​ ಫಿಲ್ಮ್ಸ್ ಜತೆ ಅಕ್ಷಯ್ ಕುಮಾರ್ ಹಲವು ಸಿನಿಮಾ ಮಾಡಿದ್ದಾರೆ. ‘ಕಟ್​ಪುಟ್ಲಿ’ ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈ ಚಿತ್ರಕ್ಕೆ ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿತ್ತು. ಈ ಚಿತ್ರಕ್ಕಾಗಿ ಅಕ್ಷಯ್ 100+ ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿ ಆಗಿತ್ತು. ಇಡೀ ಚಿತ್ರದ ಬಜೆಟ್​​ನಲ್ಲಿ ಶೇ.80 ಭಾಗ ಅಕ್ಷಯ್ ಸಂಭಾವನೆಗೆ ಖರ್ಚಾಗಿತ್ತು ಎಂದು ವರದಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:49 pm, Thu, 19 January 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ