Updated on:Feb 26, 2023 | 4:21 PM
ಕರೀನಾ ಕಪೂರ್ ಅವರು ಈವರೆಗೂ ಬಗೆಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪ್ರತಿ ಸಿನಿಮಾದ ಶುರುವಿಗೂ ಮುನ್ನ ಲುಕ್ ಟೆಸ್ಟ್ ನಡೆಯುತ್ತದೆ. ಆದರೆ ಅದರ ಫೋಟೋಗಳು ಬಹಿರಂಗ ಆಗುವುದು ವಿರಳ.
ಬರೋಬ್ಬರಿ 14 ವರ್ಷಗಳ ಬಳಿಕ ಕರೀನಾ ಕಪೂರ್ ಅವರ ಕೆಲವು ಅಪರೂಪದ ಫೋಟೋಗಳು ಬಹಿರಂಗ ಆಗಿವೆ. ಇವುಗಳನ್ನು ನೋಡಿ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ‘3 ಈಡಿಯಟ್ಸ್’ ಚಿತ್ರಕ್ಕಾಗಿ ಮಾಡಿದ ಲುಕ್ ಟೆಸ್ಟ್ ಫೋಟೋಗಳಿವು.
2009ರಲ್ಲಿ ತೆರೆಕಂಡ ‘3 ಈಡಿಯಟ್ಸ್’ ಸಿನಿಮಾದಲ್ಲಿ ಕರೀನಾ ಕಪೂರ್ ಅವರು ಪಿಯಾ ಸಹಸ್ರಬುದ್ಧೆ ಎಂಬ ಪಾತ್ರ ಮಾಡಿದ್ದರು. ವೈದ್ಯಕೀಯ ವಿದ್ಯಾರ್ಥಿನಿ ಆಗಿ ಅವರು ಕಾಣಿಸಿಕೊಂಡಿದ್ದರು. ಆ ಪಾತ್ರಕ್ಕಾಗಿ ಬಗೆಬಗೆಯಲ್ಲಿ ಲುಕ್ ಟೆಸ್ಟ್ ಮಾಡಿಸಲಾಗಿತ್ತು.
ರಾಜ್ಕುಮಾರ್ ಹಿರಾನಿ ನಿರ್ದೇಶನದ ‘3 ಈಡಿಯಟ್ಸ್’ ಚಿತ್ರದಲ್ಲಿ ಕರೀನಾ ಕಪೂರ್ ಮತ್ತು ಆಮಿರ್ ಖಾನ್ ಜೋಡಿ ಆಗಿದ್ದರು. ನಿರ್ಮಾಣ ಸಂಸ್ಥೆಯಾದ ‘ವಿಧು ವಿನೋದ್ ಚೋಪ್ರಾ ಫಿಲ್ಮ್ಸ್’ ಈ ಫೋಟೋಗಳನ್ನು ಈಗ ಹಂಚಿಕೊಂಡಿದೆ.
ಯಾವ ಪಾತ್ರ ಕೊಟ್ಟರೂ ನ್ಯಾಯ ಒದಗಿಸುವಂತಹ ಕಲಾವಿದೆ ಕರೀನಾ ಕಪೂರ್ ಖಾನ್. ಈಗ ಅವರು ಸಿನಿಮಾಗಳಿಗಿಂತಲೂ ಕುಟುಂಬಕ್ಕೆ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಇಂದಿಗೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ.
Published On - 4:21 pm, Sun, 26 February 23