ದೇವಸ್ಥಾನದಲ್ಲೇ ಕೃತಿ ಸನೋನ್ಗೆ ಕಿಸ್ ಮಾಡಿದ ನಿರ್ದೇಶಕ; ವ್ಯಕ್ತವಾಯಿತು ಟೀಕೆ
ನಿರ್ದೇಶಕ ಓಂ ರಾವತ್ ಹಾಗೂ ನಟಿ ಕೃತಿ ಸನೋನ್ ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದಿಂದ ಮರಳುವಾಗ ಇಬ್ಬರೂ ಕಿಸ್ ಮಾಡಿಕೊಂಡಿದ್ದಾರೆ.
ನಿರ್ದೇಶಕ ಓಂ ರಾವತ್ ಅವರ ನಿರ್ದೇಶನದ ‘ಆದಿಪುರುಷ್’ ಸಿನಿಮಾ (Adipurush Movie) ರಿಲೀಸ್ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ನಿರ್ದೇಶಕ ಓಂ ರಾವತ್ ಹಾಗೂ ಸೀತೆ ಪಾತ್ರ ಮಾಡಿದ ನಟಿ ಕೃತಿ ಸನೋನ್ (Kriti Sanon) ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದಿಂದ ಮರಳುವಾಗ ಇಬ್ಬರೂ ಕಿಸ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಟೀಕೆ ಮಾಡಿದ್ದಾರೆ. ದೇವಸ್ಥಾನದಲ್ಲಿ ಈ ರೀತಿಯ ನಡುವಳಿಕೆ ತಪ್ಪು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹಗ್ ಮಾಡಿಕೊಳ್ಳೋದು, ಸ್ನೇಹ ಪೂರ್ವಕವಾಗಿ ಕಿಸ್ ಮಾಡಿಕೊಳ್ಳೋದು ಸೆಲೆಬ್ರಿಟಿಗಳಿಗೆ ಹೊಸದಲ್ಲ. ಹೀಗಾಗಿ, ಈ ರೀತಿಯ ಟ್ರೋಲ್ಗಳಿಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 07, 2023 12:36 PM
Latest Videos