​Gadar 2: ಗುರುದ್ವಾರದಲ್ಲಿ ಸನ್ನಿ ಡಿಯೋಲ್​, ಅಮೀಷಾ ಪಟೇಲ್​ ರೊಮ್ಯಾನ್ಸ್​; ಸಿಖ್​ ಸಮುದಾಯದವರಿಂದ ವಿರೋಧ

Sunny Deol: ‘ಗದರ್ 2’ ಸಿನಿಮಾದ ಚಿತ್ರೀಕರಣದ ವೇಳೆ ಒಂದು ವಿಡಿಯೋ ಲೀಕ್​ ಆಗಿದೆ. ಗುರುದ್ವಾರದಲ್ಲಿ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​ ಅವರು ರೊಮ್ಯಾಂಟಿಕ್​​ ಆಗಿ ಕಾಣಿಸಿಕೊಂಡಿದ್ದಾರೆ.

​Gadar 2: ಗುರುದ್ವಾರದಲ್ಲಿ ಸನ್ನಿ ಡಿಯೋಲ್​, ಅಮೀಷಾ ಪಟೇಲ್​ ರೊಮ್ಯಾನ್ಸ್​; ಸಿಖ್​ ಸಮುದಾಯದವರಿಂದ ವಿರೋಧ
ಅಮೀಷಾ ಪಟೇಲ್​, ಸನ್ನಿ ಡಿಯೋಲ್​
Follow us
ಮದನ್​ ಕುಮಾರ್​
|

Updated on: Jun 08, 2023 | 4:53 PM

ಸಿನಿಮಾದವರು ಏನೇ ಮಾಡಿದರು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಆಗುತ್ತದೆ. ಅದರಲ್ಲೂ ಧಾರ್ಮಿಕ ಸ್ಥಳಗಳಲ್ಲಿ ಸೆಲೆಬ್ರಿಟಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ನೆಟ್ಟಿಗರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಾರೆ. ಇತ್ತೀಚೆಗಷ್ಟೇ ‘ಆದಿಪುರುಷ್​’ ಸಿನಿಮಾದ ನಿರ್ದೇಶಕ ಓಂ ರಾವತ್​ ಹಾಗೂ ನಟಿ ಕೃತಿ ಸನೋನ್​ ಅವರು ತಿರುಪತಿ ದೇವಾಲಯದಲ್ಲಿ ಪರಸ್ಪರ ಕಿಸ್​ ಮಾಡಿದ್ದು ಅನೇಕರ ವಿರೋಧಕ್ಕೆ ಕಾರಣ ಆಗಿತ್ತು. ಈಗ ಸಿಖ್​ (​Sikhs) ಸಮುದಾಯವರ ಆಕ್ರೋಶಕ್ಕೆ ಕಾರಣ ಆಗುವಂತಹ ಒಂದು ಘಟನೆ ನಡೆದಿದೆ. ‘ಗದರ್​​ 2’ (​Gadar 2) ಸಿನಿಮಾದ ಒಂದು ರೊಮ್ಯಾಂಟಿಕ್​ ದೃಶ್ಯವನ್ನು ಸಿಖ್ಖರ ಪವಿತ್ರ ಸ್ಥಳವಾದ ಗುರುದ್ವಾರದಲ್ಲಿ ಚಿತ್ರೀಕರಿಸಲಾಗಿದೆ. ಅದನ್ನು ಖಂಡಿಸಿ ಸಿಖ್​ ಮುಖಂಡರು ಧ್ವನಿ ಎತ್ತಿದ್ದಾರೆ. ಇದರಿಂದ ‘ಗದರ್ 2’ ಚಿತ್ರತಂಡ ವಿವಾದದಲ್ಲಿ ಸಿಲುಕಿಕೊಳ್ಳುವಂತೆ ಆಗಿದೆ.

‘ಗದರ್ 2’ ಸಿನಿಮಾದ ಚಿತ್ರೀಕರಣದ ವೇಳೆ ಒಂದು ವಿಡಿಯೋ ಲೀಕ್​ ಆಗಿದೆ. ಗುರುದ್ವಾರದಲ್ಲಿ ಚಿತ್ರೀಕರಿಸಲಾದ ಈ ವಿಡಿಯೋದಲ್ಲಿ ಸನ್ನಿ ಡಿಯೋಲ್​ ಮತ್ತು ಅಮೀಷಾ ಪಟೇಲ್​ ಅವರು ರೊಮ್ಯಾಂಟಿಕ್​​ ಆಗಿ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಡೋಲು ಬಾರಿಸುತ್ತಿರುವ ಶಬ್ದವಿದೆ. ಈ ವಿಡಿಯೋ ನೋಡುತ್ತಿದ್ದಂತೆಯೇ ಸಿಖ್​ ಸಮುದಾಯದವರಿಗೆ ಕೋಪ ಬಂದಿದೆ. ‘ಗದರ್ 2’ ಚಿತ್ರತಂಡದ ಈ ನಡೆಯನ್ನು ಖಂಡಿಸಲಾಗಿದೆ. ‘ಶಿರೋಮಣಿ ಗುರುದ್ವಾರ ಪರಬಂಧಕ್​ ಸಮಿತಿ’ ಟ್ವಿಟರ್​ ಖಾತೆಯಲ್ಲಿ ಒಂದು ಎಚ್ಚರಿಕೆ ಸಂದೇಶವನ್ನು ಹಂಚಿಕೊಳ್ಳಲಾಗಿದೆ.

ಈ ಘಟನೆ ಕುರಿತು ತನಿಖೆ ಆಗಬೇಕು ಮತ್ತು ಚಿತ್ರತಂಡದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ‘ಗುರುದ್ವಾರ ಸಾಹಿಬ್​ನಲ್ಲಿ ‘ಗದರ್​ 2’ ಸಿನಿಮಾದ ಆಕ್ಷೇಪಾರ್ಹ ದೃಶ್ಯ ಚಿತ್ರೀಕರಿಸಿದ್ದನ್ನು ನಾವು ಖಂಡಿಸುತ್ತೇವೆ. ಇದು ಒಂದು ಅಧ್ಯಾತ್ಮದ ಸ್ಥಳ. ಇಂಥ ಜಾಗದಲ್ಲಿ ಈ ರೀತಿ ದೃಶ್ಯಗಳನ್ನು ಚಿತ್ರಿಸಬಾರದು’ ಎಂದು ‘ಶಿರೋಮಣಿ ಗುರುದ್ವಾರ ಪರಬಂಧಕ್​ ಸಮಿತಿ’ ಮುಖಂಡರಾದ ಗುರುಚರಣ್​ ಸಿಂಗ್​ ಗ್ರೇವಾಲ್​ ಅವರು ಹೇಳಿದ್ದೇರೆ. ಈ ಘಟನೆ ಕುರಿತಂತೆ ‘ಗದರ್​ 2’ ಸಿನಿಮಾ ತಂಡದಿಂದ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ.

ಇದನ್ನೂ ಓದಿ: Sara Ali Khan: ಹಿಂದೂಗಳ ದೇವಸ್ಥಾನಕ್ಕೆ ತೆರಳಿದ್ದಕ್ಕೆ ಟ್ರೋಲ್​ ಮಾಡಿದವರಿಗೆ ಖಡಕ್​ ತಿರುಗೇಟು ನೀಡಿದ ಸಾರಾ ಅಲಿ ಖಾನ್​

ಕೃತಿ ಸನೋನ್​-ಓಂ ರಾವತ್​ ವಿವಾದ ಏನು?

ನಿರ್ದೇಶಕ ಓಂ ರಾವತ್ ಅವರ ನಿರ್ದೇಶನದ ‘ಆದಿಪುರುಷ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ನಿರ್ದೇಶಕ ಓಂ ರಾವತ್ ಹಾಗೂ ಸೀತೆ ಪಾತ್ರ ಮಾಡಿದ ನಟಿ ಕೃತಿ ಸನೋನ್ ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದಿಂದ ಮರಳುವಾಗ ಇಬ್ಬರೂ ಕಿಸ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಟೀಕೆ ಮಾಡಿದ್ದಾರೆ. ದೇವಸ್ಥಾನದಲ್ಲಿ ಈ ರೀತಿಯ ನಡುವಳಿಕೆ ತಪ್ಪು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ